ಚಿಕ್ಕಮಗಳೂರು: ದತ್ತಪೀಠವನ್ನು ಹಿಂದುಗಳ ಶ್ರದ್ಧಾ ಕೇಂದ್ರವನ್ನಾಗಿಸುವಲ್ಲಿ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹಿಂದು ಪರ ಸಂಘಟನೆಗಳ ಪರವಾಗಿ ಜಿಲ್ಲಾ ವಿಎಚ್ಪಿ ನಿಯೋಗವು ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ವಿವಾದವನ್ನು ಕೂಡಲೇ ಪರಿಹರಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದೆ ಎಂದು ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಯೋಗೇಶ್ ರಾಜ್ ಅರಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಬಾಬುಡನ್ ಗಿರಿ ಮತ್ತು ದತ್ತಪೀಠ ಕಂದಾಯ ಇಲಾಖೆ ದಾಖಲೆಯನ್ವಯ ಎರಡು ಬೇರೆ ಬೇರೆ ಪ್ರತ್ಯೇಕ ತಾಣಗಳು ಎಂಬುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಿಂದು ಧಾರ್ಮಿಕ ವಿಧಿ ವಿಧಾನಗಳನ್ನು ಸದರಿ ಪೀಠದಲ್ಲಿ ನಿರ್ವಹಿಸಲು ಹಿಂದೂ ಅರ್ಚಕರನ್ನು ನೇಮಿಸಬೇಕು. ಇಂತಹ ಹಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಿಗೆ ನಿಯೋಗದಲ್ಲಿದ್ದ ಮುಖಂಡರು ಗೃಹ ಸಚಿವರು, ಕಾನೂನು ಸಚಿವರು, ಮುಜರಾಯಿ ಸಚಿವರಿಗೂ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಚಿಕ್ಕಮಗಳೂರಿನ ಬಸವಕೇಂದ್ರದ ಜಯಬಸವಾನಂದ ಸ್ವಾಮೀಜಿ, ಶಂಕರದೇವರ ಮಠದ ಸ್ವಾಮೀಜಿ, ಎಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಭೇರಗಂಡಿ ಮಠದ ಸ್ವಾಮೀಜಿ ಶಾಸಕ ಸಿ.ಟಿ.ರವಿ, ಡಿ.ಎನ್.ಜೀವರಾಜ್ ವಿಎಚ್ಪಿ ಪ್ರಮುಖರಾದ ಜಿ.ಗೋಪಾಲ್, ಕೇಶವಹೆಗಡೆ, ಶಿವಶಂಕರ್, ಯೋಗೀಶ್ ರಾಜ್ ಅರಸ್, ಶ್ರೀಕಾಂತ್ ಪೈ, ವಕೀಲರಾದ ರವೀಂದ್ರ ಹಾಗೂ ಬಿಜೆಪಿ ಮುಖಂಡರಾದ ಮಧುಕುಮಾರ್ ರಾಜ್ ಅರಸ್ ಹಲವು ಗಣ್ಯರು ನಿಯೋಗದಲ್ಲಿದ್ದರು.