News Kannada
Wednesday, October 05 2022

ಕರ್ನಾಟಕ

ಹುಣಸೂರಲ್ಲಿ ಅಪವಿತ್ರವಾದ ಲಕ್ಷ್ಮಣತೀರ್ಥ ನದಿ! - 1 min read

Photo Credit :

ಹುಣಸೂರಲ್ಲಿ ಅಪವಿತ್ರವಾದ ಲಕ್ಷ್ಮಣತೀರ್ಥ ನದಿ!

ಹುಣಸೂರು: ಸಹಸ್ರಾರು ಮಂದಿಯ ದಾಹ ತೀರಿಸುವ ಲಕ್ಷ್ಮಣ ತೀರ್ಥ ನದಿಗೆ ಹುಣಸೂರು ಪಟ್ಟಣದ ತ್ಯಾಜ್ಯ ಸೇರ್ಪಡೆಯಾಗುತ್ತಿರುವುದರಿಂದಾಗಿ ಗಬ್ಬೆದ್ದು ನಾರುತ್ತಿದ್ದು, ಪಾಚಿ, ಜೊಂಡು ಹುಲ್ಲು ಸೇರಿದಂತೆ ಜಲಸಸ್ಯಗಳು ಆವರಿಸಿರುವುದರಿಂದ ನೀರು ಸಮರ್ಪಕವಾಗಿ ಹರಿಯದೆ ಮೈದಾನದಂತೆ ಗೋಚರಿಸುತ್ತಿದೆ.

ಹುಣಸೂರು ಪಟ್ಟಣಕ್ಕಾಗಿ ಹಾದು ಹೋಗುವ ಪ್ರತಿಯೊಬ್ಬರೂ ಹೃದಯಭಾಗದಲ್ಲಿ ಹರಿಯುವ ನದಿಯತ್ತ ಕಣ್ಣುಹಾಯಿಸುವುದು ಸಹಜ ಆದರೆ ಹೆಚ್ಚಿನವರು ಇದು ಲಕ್ಷ್ಮಣತೀರ್ಥ ನದಿನಾ ಎಂದು ಅಚ್ಚರಿಯ ನೋಟ ಬೀರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ತ್ಯಾಜ್ಯ, ಪಾಚಿ, ಜೊಂಡು ಹುಲ್ಲು, ಜಲಸಸ್ಯಗಳಿಂದ ಕೂಡಿರುವ ಕಲುಷಿತ ನೀರನ್ನೇ ಬಳಸಬೇಕಾದ ಅನಿವಾರ್ಯತೆ ಹೆಚ್ಚಿನ ಜನರಿಗೆ ಬಂದೊದಗಿದೆ. ಈ ನದಿ ಪ್ರತಿ ವರ್ಷವೂ ಬೇಸಿಗೆ ಬರುತ್ತಿದ್ದಂತೆಯೇ ಜಲಸಸ್ಯಗಳು ಬೆಳೆದು ಹಸಿರಾಗಿ ಕಂಗೊಳಿಸುವುದು ಹಿಂದಿನಿಂದಲೂ ಕಂಡು ಬರುತ್ತಿದೆ. ಈ ಬಾರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮತ್ತು ತ್ಯಾಜ್ಯತುಂಬಿ ನೀರು ಹರಿಯದ ಕಾರಣದಿಂದ ಜಲ ಸಸ್ಯಗಳು ಹುಲುಸಾಗಿ ಬೆಳೆಯಲು ಕಾರಣವಾಗಿದೆ.

ಕೊಡಗಿನ ಇರ್ಪುನಿಂದ ಹರಿದು ಬರುವ ಶುದ್ಧವಾದ ಈ ನದಿ ಹುಣಸೂರು ತಲುಪುತ್ತಿದ್ದಂತೆಯೇ ಮಲೀನವಾಗುತ್ತಿದೆ. ಕೊಡಗಿನಿಂದ ನಾಗರಹೊಳೆ ಅಭಯಾರಣ್ಯದ ಮೂಲಕ ಹರಿದು ಸುಮಾರು 75 ಕಿ.ಮೀ ಹಾದು ಬಂದು ಹುಣಸೂರು ತಲುಪುತ್ತದೆ. ನೀರಿನ ರಭಸವಾಗಿ ಹರಿಯುವಾಗ ನದಿಗೆ ಎಸೆಯುವ ಕೊಳಚೆ ಕೊಚ್ಚಿಕೊಂಡು ಹೋಗುತ್ತದೆ. ಆದರೆ ಬೇಸಿಗೆಯಾದ ಕಾರಣ ಎಲ್ಲವೂ ನದಿಯೊಳಗೆ ಸಂಗ್ರಹಗೊಂಡು ಅಸಹ್ಯ ಹುಟ್ಟಿಸುತ್ತಿದೆ.

ಹುಣಸೂರಿನ ಮುಂದಕ್ಕೆ ಸುಮಾರು ಹತ್ತಕ್ಕೂ ಹೆಚ್ಚಿನ ಹಳ್ಳಿಗಳು ಇದೇ ನೀರನ್ನು ಬಳಸುತ್ತಿವೆ. ಹೀಗಿರುವಾಗ ಜಿಲ್ಲಾಡಳಿತವಾಗಲೀ, ತಾಲೂಕು ಆಡಳಿತವಾಗಲೀ, ಸಂಬಂಧಿಸಿದ ಜನಪ್ರತಿನಿಧಿಗಳಾಗಲೀ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುವುದು ಅಗತ್ಯವಾಗಿದೆ. ಆದರೆ ಯಾರು ಕೂಡ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಮಳೆಗಾಲದಲ್ಲಿ ನೀರು ರಭಸವಾಗಿ ಹರಿಯುವಾಗ ನದಿ ಸ್ವಚ್ಛವಾಗುತ್ತದೆ. ಹೀಗಿರುವಾಗ ಲಕ್ಷಾಂತರ ರೂ. ಖರ್ಚು ಮಾಡಿ ಸ್ವಚ್ಛಗೊಳಿಸುವುದೇಕೆ ಎಂಬ ಆಲೋಚನೆ ಅವರದ್ದೇನೋ? ಹೀಗಾಗಿ ಯಾರೂ ಕೂಡ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಹುಣಸೂರು ಪಟ್ಟಣದಿಂದ ಹರಿದು ಬರುವ ತ್ಯಾಜ್ಯ ನೀರನ್ನು ತಡೆದು, ನದಿಯನ್ನು ಆವರಿಸಿರುವ ಜಲಸಸ್ಯಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಲಕ್ಷ್ಮಣ ತೀರ್ಥ ನದಿಗೆ ಮರುಹುಟ್ಟು ನೀಡುವುದು ಕಷ್ಟವೇನಲ್ಲ ಆದರೆ ಯಾರಿಗೂ ಅದು ಬೇಡವಾಗಿರುವುದರಿಂದ  ನದಿ ಮಲೀನವಾಗಿ ಅಸಹ್ಯ ಹುಟ್ಟಿಸುತ್ತಿದೆ.

See also  ನೀರಿನಲ್ಲಿ ಮುಳುಗಿ ಸಂಶಯಾಸ್ಪದ ಸಾವು: ಮರುಮರಣೋತ್ತರ ಪರೀಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು