News Kannada
Wednesday, October 05 2022

ಕರ್ನಾಟಕ

ಬಾಬಾಬುಡಾನ್ ಗಿರಿ ವಿಚಾರದಲ್ಲಿ ಬಿಜೆಪಿಯಿಂದ ಹೊಸ ವಿವಾದ: ಎಚ್.ಎಚ್.ದೇವರಾಜ್ ಕಿಡಿ - 1 min read

Photo Credit :

ಬಾಬಾಬುಡಾನ್ ಗಿರಿ ವಿಚಾರದಲ್ಲಿ ಬಿಜೆಪಿಯಿಂದ ಹೊಸ ವಿವಾದ: ಎಚ್.ಎಚ್.ದೇವರಾಜ್ ಕಿಡಿ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡಾನ್ ದರ್ಗಾದ ವಿವಾದಿತ ವಿಚಾರವು ಸಮಸ್ಯೆಯಾಗಿ ಉಳಿಯುವಂತೆ ಮಾಡಲು ಬಿಜೆಪಿ ಮಂದಿ ಹೆಣಗುತ್ತಿದ್ದು, ದರ್ಗಾವು ನಾಗೇನಹಳ್ಳಿಯಲ್ಲಿದೆ ಎಂದು ಹೊಸ ವಿವಾದವನ್ನು ಸೃಷ್ಟಿಸಿ ಚುನಾವಣಾ ಸಮಯದ ರಾಜಕೀಯ ತಂತ್ರಗಾರಿಕೆ ಮಾಡಲು ಹೊರಟಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಕಿಡಿಗಾರಿದರು.

ಸುಪ್ರಿಂ ಕೋರ್ಟ್ ಈ ವಿವಾದವನ್ನು ಮೇ.5ರೊಳಗೆ ಇತ್ಯರ್ಥಪಡಿಸಲು ರಾಜ್ಯ ಸರಕಾರಕ್ಕೆ ಸೂಚನೆ ನಿಡಿದೆ. ಅದರ ನೆಪದಲ್ಲಿ ಬಿಜೆಪಿ ಮಂದಿ ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಾಗೇನಹಳ್ಳಿಯಲ್ಲಿ ದರ್ಗಾ ಇದೆ. ದತ್ತಪೀಠಕ್ಕೂ, ನಾಗೇನಹಳ್ಳಿಯ ಬಾಬಾಬುಡನ್ ಗಿರಿಗೂ ಸಂಬಂಧವಿಲ್ಲ ಎಂದು ತಗಾದೆ ತೆಗೆದಿರುವುದನ್ನು ನೋಡಿದರೆ ಬಿಜೆಪಿಗರಿಗೆ ಈ ವಿವಾದವನ್ನು ಇತ್ಯರ್ಥಪಡಿಸಲು ಆಸಕ್ತಿ ಇದ್ದಂತಿಲ್ಲ ಎಂದು ಆರೋಪಿಸಿದರು. ಬಾಬಾಬುಡಾನ್ ಗಿರಿ ವಿವಾದವು ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ.

ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ದ ಕೋಮು ಸೌಹಾರ್ಧ ವೇದಿಕೆಯವರು ಸುಪ್ರಿಂ ಕೋರ್ಟ್ ಮೆಟ್ಟಿಲತ್ತಿದ್ದರು. ಈ ಹಿಂದೆ 1989ರ ಧಾರ್ಮಿಕ ಧತ್ತಿ ಆಯುಕ್ತರ ಆದೇಶದಂತೆ 1975ಕ್ಕೂ ಹಿಂದಿನ ಪೂಜಾ ಪದ್ದತಿಗೆ ಮಾತ್ರ ಅವಕಾಶ ಕಲ್ಪಿಸಬೇಕಾಗಿದೆ. ಹಾಗೂ ಈಗಾಗಲೇ ನ್ಯಾಯಾಲಯವು ಹೊರಡಿಸಿರುವ ಆದೇಶವೊಂದರಲ್ಲಿ 1947 ಆ.15ರ ಹಿಂದಿನ ಪೂಜಾ ಪದ್ದತಿಯನ್ನು ಪಾಲಿಸಲು ಹೇಳಿದೆ…ಅದನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಜೆಡಿಎಸ್ ಪಕ್ಷವು ಒತ್ತಾಯಿಸುತ್ತದೆ ಎಂದು ನುಡಿದರು.

ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗದಲ್ಲಿ ಜಿಲ್ಲೆಯ ಕೆಲವು ಮಠಾಧೀಶರು ಭಾಗವಹಿಸಿದ್ದನ್ನು ನೋಡಿದರೆ ನೋವಾಗುತ್ತದೆ. ಬಸವಣ್ಣರ ತತ್ವ, ಸಿದ್ದಾಂತ ಹಾಗೂ ವಿಚಾರಧಾರೆಗಳಿಗೆ ತಿಲಾಂಜಲಿ ಹಾಕಿ ಮತೀಯ ಶಕ್ತಿಗಳ ಜೊತೆ ಕೈಜೋಡಿಸಿ ಬಿಜೆಪಿ ನಿಯೋಗದೊಡನೆ ಮಠಾದೀಶರು ತೆರಳಿರುವುದು ಅವರ ರಾಜಕೀಯ ಕಾರಣವನ್ನು ಎತ್ತಿ ತೋರಿಸುತ್ತದೆ. ಇಂತಹ ನಿಲುವನ್ನು ಜೆಡಿಎಸ್ ಖಂಡಿಸುತ್ತದೆ ಎಂದು ತಿಳಿಸಿದರು.

 

See also  ಅಗ್ನಿಶಾಮಕ ಇಲಾಖೆ: 1567 ಹುದ್ದೆಗಳಿಗೆ ಅರ್ಜಿ ಆಹ್ವಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು