ಚಾಮರಾಜನಗರ: ಬೇಸಿಗೆಯ ಧಗೆ ತಣಿಸಿ ಒಂದಷ್ಟು ಹೊತ್ತು ನೀರಲ್ಲಿ ಆಟವಾಡಿ ಬರಲು ಹೋದ ಯುವಕರ ಪೈಕಿ ಇಬ್ಬರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಬಳಿ ನಡೆದಿದೆ.
ಕೊಳ್ಳೇಗಾಲ ಪಟ್ಟಣದ ಅಗಸ್ಟಿನ್ ಕಾಲೋನಿಯ ನಿವೃತ್ತ ದೈಹಿಕ ಶಿಕ್ಷಕ ಅಂಥೋಣಿ ಅವರ ಮಗ ಕೀರ್ತನ(25), ಚಾಮರಾಜನಗರ ಸಂಚಾರಿ ಪೊಲೀಸ್ ಎಎಸ್ಐ ಶಿವಸ್ವಾಮಿರವರ ಮಗ ಅನಿಲ್(24) ನೀರಿನಲ್ಲಿ ಮೃತಪಟ್ಟ ದುರ್ದೈವಿಗಳು. ಮೃತರಾದ ಅನಿಲ್, ಕೀರ್ತನ್ ಸೇರಿದಂತೆ ಸುನೀಲ್, ದಿನಕರ್, ಹರ್ಷ ಅವರು ಕಾವೇರಿ ನದಿಗೆ ಈಜಲು ತೆರಳಿದ್ದರು ಎನ್ನಲಾಗಿದೆ. ಬಹುಶಃ ಮೃತ ಪುಟ್ಟದಾದ ಪಾರ್ಟಿಯನ್ನು ಗೆಳೆಯರಿಗೆ ಕೊಡಿಸಿ ಐವರು ಕಾವೇರಿ ನದಿಯಲ್ಲಿ ಈಜಾಟವಾಡಿ ಬರಲು ಧನಗೆರೆ ಕಟ್ಟೆ ಬಳಿಗೆ ತೆರಳಿದ್ದರು.
ಇದಕ್ಕೆ ಕಾರಣವೂ ಇತ್ತು ಅನಿಲ್ಗೆ ಕೆಲವಾಗಿದ್ದು ಅದರ ಪ್ರಯುಕ್ತ ಗೆಳೆಯರನ್ನು ಕರೆದು ಕೊಂಡು ಹೋಗಿದ್ದನು. ಹಾಗೆ ಹೋದವರು ನದಿಯಲ್ಲಿ ಆಟ ಮುಂದುವರೆಸಿದ್ದರು. ಈ ವೇಳೆ ಅನಿಲ್ ಮತ್ತು ಕೀರ್ತನ್ ಅವರು ನದಿಯಲ್ಲಿ ಈಜಾಡುತ್ತಿದ್ದು, ಒಬ್ಬರನ್ನು ನೀರು ಸೆಳೆದಿದೆ. ಈ ವೇಳೆ ಒಬ್ಬರು ಮತ್ತೊಬ್ಬರನ್ನು ರಕ್ಷಿಸಲು ಹೋಗಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜತೆಗಿದ್ದ ಸ್ನೇಹಿತರಿಗೆ ಏನಾಗುತ್ತಿದೆ ಎಂಬುದು ಅರಿವಾಗುವ ವೇಳೆಗೆ ಅವರಿಬ್ಬರು ಕಾವೇರಿ ನದಿ ಪಾಲಾಗಿದ್ದರು.
ವಿಷಯ ಅರಿತ ಸ್ನೇಹಿತರು ತಕ್ಷಣ ಊರವರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಸ್ಥಳಕ್ಕೆ ಸಿಪಿಐ ಅಮರ್ನಾರಾಯಣ್ ಮತ್ತು ಎಸ್ಐ ವನರಾಜು ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿ ಈಜುಗಾರರ ಸಹಾಯದಿಂದ ಮೃತ ದೇಹವನ್ನು ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಾಸುದಾರರಿಗೆ ನೀಡಲಾಗಿದೆ.