ಇತಿಹಾಸದುದ್ದಕ್ಕೂ ಅರ್ಧ ಚಿಕ್ಕಮಗಳೂರಿಗೆ ನೀರುಣಿಸೋ ಜಲಧಾತೆ ಆ ಕೆರೆ. ರೈತರ ಜೀವನಾಡಿಯಾಗಿ ಕೃಷಿ ಚಟುವಟಿಕೆಗೆ ವರದಾನವಾಗಿದ್ದ ಜೀವಸೆಲೆ. ಕಾಫಿನಾಡಿಗೆ ಆಗಮಿಸೋ ಪ್ರವಾಸಿಗರಿಗೆ ಮಲೆನಾಡಿನ ನೈಜ ಸೌಂದರ್ಯವನ್ನ ಉಣಬಡಿಸೋ ಮಹಾನದಿ. ಬತ್ತಿದ ಇತಿಹಾಸವೇ ಇಲ್ಲದ ಈ ಕೆರೆ ಬಳಿ ನೂರಾರು ಸಿನಿಮಾಗಳು ಚಿತ್ರೀಕರಣಗೊಂಡಿವೆ.
ಆದ್ರೆ, ಕಾಫಿನಾಡಿನ ಭೀಕರ ಬರಕ್ಕೆ ಸಂಪೂರ್ಣ ಬತ್ತಿರೋ ಆ ಕರೆಯಲ್ಲಿ ನೀರಿಲ್ಲದೇ ನೂರಾರು ಕಪ್ಪೆಗಳು, ಮೀನುಗಳು ಸಾವನ್ನಪ್ಪಿವೆ. ಮಳೆಗಾಲ ಬಂದ್ರು ಮಲೆನಾಡಲ್ಲಿ ಮಳೆಯಾಗದಿರೋದು ಮಲೆನಾಡಿಗರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ.
ಹೌದು…ನೀರಿಲ್ಲದೆ ಬರಿದಾದ ಬೃಹತ್ ಕೆರೆ. ಜಲಚರಗಳೂ ಬದುಕುವಷ್ಟು ನೀರಿಲ್ಲದೇ ಸತ್ತು ಬಿದ್ದಿರೋ ನೂರಾರು ಕಪ್ಪೆಗಳು. ನೀರಿಗಾಗಿ ಬಾಯ್ತೆರೆದು ಕಾಯ್ತಿರೋ ಭೂತಾಯಿ. ಮಳೆಗಾಲದಲ್ಲೂ ಮಳೆಗಾಗಿ ಆಕಾಶ ನೋಡ್ತಿರೋ ರೈತ. ಹೌದು, ಇಂತಹಾ ಹೃದಯ ವಿದ್ರಾವಕ ದೃಶ್ಯ ಕಂಡು ಬಂದದ್ದು ವಾರ್ಷಿಕ ದಾಖಲೆ ಮಳೆ ಸುರಿಯೋ ಚಿಕ್ಕಮಗಳೂರಲ್ಲಿ. ಎರಡ್ಮೂರು ವರ್ಷ ಮಳೆಯಾಗದಿದ್ರು ಗಿರಿಯಲ್ಲಿ ಹರಿಯೋ ನೀರಿನಿಂದ ಸದಾ ತುಂಬಿ, ಚಿಕ್ಕಮಗಳೂರಿನ ಅರ್ಧಕ್ಕೆ ನೀರು ಪೂರೈಸ್ತಿತ್ತು ಈ ಹಿರೇಕೊಳಲೆ ಕೆರೆ. ಈ ಕೆರೆ ಬತ್ತಿದ್ದನ್ನ ಸ್ಥಳಿಯರು ನೋಡೇ ಇಲ್ಲ.
ಆದ್ರೆ, ಈ ಬಾರಿಯ ಭೀಕರ ಬರದಿಂದ ಈ ಕೆರೆ ಸಂಪೂರ್ಣ ಬರಿದಾಗಿದ್ದು ನೂರಾರು ಕಪ್ಪೆ, ಮೀನುಗಳ ಮಾರಣ ಹೋಮ ನಡೆದಿದೆ. ಆದ್ರೆ, ಮಲೆನಾಡಿಗೆ ಅಪ್ಪಟ ಮಳೆಗಾಲವಾಗಿರೋ ಕಾಫಿನಾಡಿಗೆ ಮೇ ಬಂದ್ರು ಮಳೆಯಾಗದಿರೋದ್ರಿಂದ ಮಲೆನಾಡಿಗರು ತಲೆ ಮೇಲೆ ಕೈಹೊದ್ದು ಕೂತಿದ್ದಾರೆ. ಕೆರೆಯಲ್ಲಿ ನೀರಿಲ್ಲದೇ ನೂರಾರು ಕಪ್ಪೆ, ಮೀನು ಹಾಗೂ ಜಲಚರಗಳು ಸಾವನ್ನಪ್ಪಿರೋ ದೃಶ್ಯ ನೋಡುಗರ ಮನಕಲುಕುವಂತಿದೆ. ಇತಿಹಾಸದಲ್ಲೇ ಎಂದೂ ಬತ್ತದ ಈ ಕೆರೆಯಲ್ಲಿ ಭೂಮಿ ತಾಯಿ ಕೂಡ ನೀರಿಗಾಗಿ ಬಾಯ್ತೆರೆದು ಕಾಯ್ತಿದ್ದಾಳೆ. ಆದ್ರೆ, ಹಿರೇಕೊಳಲೆ ಕೆರೆ ಹೀಗೆ ಖಾಲಿಯಾಗಿರೋದು ಚಿಕ್ಕಮಗಳೂರಿನ ನಗರ ನಿವಾಸಿಗಳ ಕುತ್ತಿಗೆ ಬಂದಿದೆ. ಯಾಕಂದ್ರೆ, ವಾರಕ್ಕೆ ಎರಡ್ಮೂರು ದಿನವಾದ್ರು ನೀರು ಬರ್ತಿತ್ತು. ಆದ್ರೀಗ, ಕೆರೆ ಖಾಲಿಯಾಗಿರೋದು ಕುಡಿಯೋ ನೀರಿಗೂ ಸಂಚಕಾರ ಬಂದಂತಾಗಿದೆ.
ಮಲೆನಾಡಿನಲ್ಲಿ ಈ ಬಾರಿ 30 ರಷ್ಟು ಮಳೆಯಾಗಿಲ್ಲ. ಇಡೀ ಜಿಲ್ಲೆಯೇ ಬರಗಾಲದಿಂದ ಬಸವಳಿದಿತ್ತು. ಆದ್ರೆ, ಮಾರ್ಚ್ ಎಂಡ್ ಅಥವಾ ಏಪ್ರಿಲ್ ಫಸ್ಟ್ ವೀಕ್ ಮಲೆನಾಡಿಗೆ ಮಳೆಗಾಲ. ಆದ್ರೆ, ಮೇ ಬಂದ್ರು ಮಳೆ ಬಾರದಿರೋದು ಮಲೆನಾಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ. ಒಟ್ಟಾರೆಯಾಗಿ ಇತಿಹಾಸದಲ್ಲೆಂದು ಬತ್ತದ ಹಿರೇಕೊಳಲೆ ಕೆರೆ ಈ ವರ್ಷ ಖಾಲಿಯಾಗಿರೋದು ಚಿಕ್ಕಮಗಳೂರಿಗೆ ಇನ್ನೆಂಥಾ ಭೀಕರ ಬರ ಬಂದಿರಬಹುದು. ಗಿರಿಭಾಗದ ಶೋಲಾ ಕಾಡುಗಳಲ್ಲಿ ವರ್ಷಪೂರ್ತಿ ನೀರು ಹರಿಯುತ್ತೆ. ವಾರ್ಷಿಕ ದಾಖಲೆ ಮಳೆಯಾಗೋ ಜಿಲ್ಲೆಯಲ್ಲಿ ಅರ್ಧದಷ್ಟು ಮಳೆಯಾಗದ ಕಾರಣ ಜನ ಕಂಗಾಲಾಗಿದ್ರು. ಆದ್ರೆ, ಈ ಬಾರಿಯೂ ಕಾಫಿನಾಡಲ್ಲಿ ಮಳೆಗಾಲ ಆರಂಭವಾಗಿ ತಿಂಗಳುಗಳೇ ಕಳೆದಿದ್ರು ಒಂದೊಳ್ಳೆ ಮಳೆಯಾಗದಿರೋದು ಮಲೆನಾಡಿಗರನ್ನ ಮತ್ತಷ್ಟು ಚಿಂತಾಕ್ರಾಂತರನ್ನಾಗಿಸಿದೆ…