News Kannada
Thursday, September 29 2022

ಕರ್ನಾಟಕ

ಕೊಡಗಿನಲ್ಲಿ ಮುಂಗಾರು ಮಳೆ ಆರಂಭ - 1 min read

Photo Credit :

ಕೊಡಗಿನಲ್ಲಿ ಮುಂಗಾರು ಮಳೆ ಆರಂಭ

ಮಡಿಕೇರಿ: ಮುಂಗಾರು ಮಳೆ ಪ್ರಸಕ್ತ ವರ್ಷ ನಿರೀಕ್ಷೆಯಂತೆ ನಿಗದಿತ ಅವಧಿಯಲ್ಲಿ ಆರಂಭವಾಗಿದೆ. ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶವಾಗಿರುವುದರಿಂದ ಕೊಡಗಿನಲ್ಲಿಯೂ ಮುಂಗಾರು ಮಳೆ ಶುರುವಾಗಿದೆ. ಕಳೆದ ವರ್ಷ ಜನವರಿಯಿಂದ ಮೇ ತಿಂಗಳ ಅಂತ್ಯದ ವರೆಗೆ ಸಾಧಾರಣ ಮಳೆಯಾಗಿತ್ತು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಗಾಗ ಮಳೆಯಾಗಿತ್ತು, ಆದರೆ ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ.

ಕಳೆದ 30 ವರ್ಷಗಳಲ್ಲಿ ಅತ್ಯಧಿಕ ಮಳೆಯಾಗಿ ದಾಖಲೆ ಸೇರಿದ್ದು, 2007 ಮತ್ತು 2013ರ ಅವಧಿಯಲ್ಲಿ. 2013ರ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ರಾಜ್ಯ ಹೆದ್ದಾರಿ ಸಿಂಕೋನ ಹಾಗೂ ಕೊಯನಾಡು ಬಳಿ ರಸ್ತೆ ಕುಸಿತಗೊಂಡಿದ್ದು, ಹಾಗೆಯೇ ಚೆಟ್ಟಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದ್ದನ್ನು ಸ್ಮರಿಸಬಹುದಾಗಿದೆ. ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣವು 245.50 ಮಿ.ಮೀ.ಗಳಾಗಿದ್ದು, 2014ರ ಜನವರಿಯಿಂದ ಮೇ ಅಂತ್ಯದವರೆಗೆ 242.20 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 320.79 ಮಿ.ಮೀ. ಮಳೆಯಾಗಿತ್ತು, 2016ರ ಇದೇ ಅವಧಿಯಲ್ಲಿ 158.20 ಮಿ.ಮೀ ಮಳೆಯಾಗಿದ್ದರೆ, ಪ್ರಸಕ್ತ ವರ್ಷ 2017 ರ ಇದೇ ಅವಧಿಯಲ್ಲಿ ಕೇವಲ 123.27 ಮೀ.ಮೀ ನಷ್ಟು ಮಳೆಯಾಗಿ ಶೇ.50.21 ರಷ್ಟು ಮಾತ್ರ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60 ಮಿ.ಮೀ.ಗಳಾಗಿದ್ದು, 2014ರಲ್ಲಿ 367.39 ಮಿ.ಮೀ., 2015ರಲ್ಲಿ 414.65 ಮಿ.ಮೀ.ಮಳೆಯಾಗಿದ್ದರೆ, 2016ರಲ್ಲಿ 234.75 ಮಿ.ಮೀ.ನಷ್ಟು ಮಳೆಯಾಗಿದ್ದರೆ,  2017 ರಲ್ಲಿ ಇದೇ ಅವಧಿಯಲ್ಲಿ 126.53 ಮೀ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ.ಮಳೆಯಾಗಿದ್ದು, 2014ರ ಜನವರಿಯಿಂದ ಮೇ ಅಂತ್ಯದವರೆಗೆ 136.83 ಮಿ.ಮೀ. ಮಳೆಯಾಗಿದೆ. 2015ರಲ್ಲಿ 224.30 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 122.33 ಮಿ.ಮೀ. ಮಳೆಯಾಗಿದ್ದರೆ, 2017ರ ಇದೇ ಅವಧಿಯಲ್ಲಿ ಕೇವಲ 100.59 ಮೀ.ಮೀ ಮಳೆಯಾಗಿದೆ.

ವಿರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 271.60 ಮಿ.ಮೀ.ಗಳಾಗಿದ್ದು, 2014ರಲ್ಲಿ 222.37 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 323.41 ಮಿ.ಮೀ. ಮಳೆಯಾಗಿ, ವಾಡಿಕೆಗಿಂತ ಹೆಚ್ಚಾಗಿದೆ. ಹಾಗೆಯೇ 2016ರ ಜನವರಿಯಿಂದ ಮೇ ಅಂತ್ಯದವರೆಗೆ ಕೇವಲ 117.55 ಮಿ.ಮೀ.ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 142.68 ಮೀ.ಮೀ ಮಾತ್ರ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಮಳೆ ಕೊರತೆ ಕಂಡುಬಂದರೂ, ಕಳೆದ ಒಂದು ವಾರದಿಂದ ಮುಂಗಾರು ಮಳೆ ಉತ್ತಮವಾಗಿದ್ದು, ಕೃಷಿಕರೂ ಸೇರಿದಂತೆ ಎಲ್ಲರಲ್ಲಿ ಹರ್ಷ ತರುತ್ತಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹೇಳಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿದು ಕಾವೇರಿ ಕಣಿವೆಯ ಜನರಲ್ಲಿ ಸಂತಸ ತರುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.  

See also  ಹಳೆ ವೈಷಮ್ಯ: ಇಬ್ಬರ ಮೇಲೆ ಗುಂಡಿನ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು