News Kannada
Friday, September 30 2022

ಕರ್ನಾಟಕ

ಹದಗೆಟ್ಟಿರುವ ಮೇಕೇರಿ ಅರುವತ್ತೊಕ್ಲು ರಸ್ತೆ - 1 min read

Photo Credit :

ಹದಗೆಟ್ಟಿರುವ ಮೇಕೇರಿ ಅರುವತ್ತೊಕ್ಲು ರಸ್ತೆ

ಮಡಿಕೇರಿ: ಮೇಕೇರಿ ಗ್ರಾಮ ಪಂಚಾಯತ್ ಗೆ ಸೇರಿದ ಮೇಕೇರಿ ಹಾಗೂ ಅರುವತ್ತೊಕ್ಲುವಿಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಗ್ರಾಮೀಣ ಜನರು ಪರದಾಡುವಂತಾಗಿದೆ.

ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯ ಕಡೆಗೆ ಸಾಗಲು ಯೋಗ್ಯ ಸಂಪರ್ಕ ವ್ಯವಸ್ಥೆ ಅವಶ್ಯಕವಾಗಿದೆ. ಗ್ರಾಮೀಣ ಜನತೆ ತಮ್ಮ ಅವಶ್ಯಕ ಕೆಲಸ ಕಾರ್ಯಗಳಿಗಾಗಿ, ಕೃಷಿ ಉತ್ಪನ್ನಗಳನ್ನು ಸಾಗಿಸಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಯೋಗ್ಯ ರಸ್ತೆ ಅಗತ್ಯ. ಆದರೆ ಮೇಕೇರಿ ಮತ್ತು ಅರುವತ್ತೊಕ್ಲುವಿನ ಸಂಪರ್ಕ ಒದಗಿಸುವ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು ಮಳೆಯ ನೀರು ಗುಂಡಿಗಳಲ್ಲಿ ತುಂಬಿ ರಸ್ತೆ ಸಂಪೂರ್ಣ ಕೆಸರು ಮಯವಾಗಿದೆ ಈ ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರು ಜನ ಸಮಾನ್ಯರು ಶಾಲಾ ವಿದ್ಯಾರ್ಥಿ ಹರಸಾಹಸ ಪಡುವಂತಾಗಿದೆ.

ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಸಿ ರಸ್ತೆ ದುರಸ್ಥಿತಿ ಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ,

ಪವನ್ (ಗ್ರಾಮಸ್ಥ): ನಮ್ಮ ಊರಿಗೆ ಒಂದು ಬಸ್ ಸೌಕರ್ಯವಿತ್ತು. ಆದರೆ ರಸ್ತೆಯ ದುರವಸ್ಥೆಯಿಂದಾಗಿ ಈ ಬಸ್ ಕೂಡ ಈಗ ಬರುತ್ತಿಲ್ಲ. ಇದರಿಂದ ಗ್ರಾಮಸ್ಥರು ತೊಂದರೆಗೆ ಒಳಗಾಗಿದ್ದು, ನಡೆದಾಡಲು ಕಷ್ಟಪಡುವಂತಾಗಿದೆ. ಹದಗೆಟ್ಟ ರಸ್ತೆಯನ್ನು ಸಂಬಂಧ ಪಟ್ಟ ಇಲಾಖೆ ಶೀಘ್ರ ದುರಸ್ತಿಪಡಿಸಿಕೊಡಬೇಕಾಗಿದೆ.

See also  ಭೀಮಾ ನದಿಯಲ್ಲಿ ಮುಳುಗಿ ಸಹೋದರಿಯಬ್ಬರು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು