ಮಡಿಕೇರಿ: ಮಡಿಕೇರಿ ನಗರದ ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳು ಮುಂದಿನ ದಿನಗಳಲ್ಲಿ ಮಳೆ ಬಿರುಸುಗೊಳ್ಳುವ ಸಾಧ್ಯತೆಯಿರುವ ಕಾರಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಡಿಕೇರಿ ನಗರದ ಬಹಳಷ್ಟು ಬಡಾವಣೆಗಳಲ್ಲಿ ಮಳೆಗಾಲದಲ್ಲಿ ಬರೆ, ದಿಬ್ಬ, ಮನೆ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುವ ಸೂಚನೆಗಳಿರುವುದರಿಂದ ನಗರದ ಗುಡ್ಡ ಪ್ರದೇಶ ಮತ್ತು ತಗ್ಗು ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಸುರಕ್ಷತೆಯ ದೃಷ್ಠಿಯಿಂದ ಬೇರೆಡೆಗೆ ತೆರಳುವಂತೆ ಅವರು ಸೂಚನೆ ನೀಡಿದ್ದಾರೆ.
ಹವಮಾನ ವರದಿಯಂತೆ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದ್ದು, ಈ ಹಿನ್ನಲೆಯಲ್ಲಿ ಬೆಟ್ಟಗುಡ್ಡ, ಎತ್ತರ ತಗ್ಗು ಪ್ರದೇಶಗಳಲ್ಲಿ, ಮರಗಳ ಕೆಳಭಾಗದಲ್ಲಿ ಇರುವಂತಹ ಮನೆಗಳಲ್ಲಿ ವಾಸಿಸುವವರು ತಾವು ವಾಸಿಸುತ್ತಿರುವ ಮನೆ ಶಿಥಿಲಗೊಂಡಿದ್ದಲ್ಲಿ ಅಥವಾ ಸುರಕ್ಷತೆ ಇಲ್ಲದೇ ಇದ್ದಲ್ಲಿ ಸುರಕ್ಷತೆ ದೃಷ್ಠಿಯಿಂದ ಕೂಡಲೇ ಈ ಮನೆಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ತೆರಳಲು ಮುಂದಾಗಬೇಕು. ಅಥವಾ ನಗರಸಭೆ ವ್ಯಾಪ್ತಿಯಲ್ಲಿ ಸಮುದಾಯ ಭವನಗಳಲ್ಲಿ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಅಲ್ಲಿ ಆಸರೆ ಪಡೆಯಲು ಅವಕಾಶವಿರುವುದಾಗಿ ಅವರು ಹೇಳಿದ್ದಾರೆ.
ಗಂಜೀಕೇಂದ್ರ ಹಾಗೂ ಗಂಜೀಕೇಂದ್ರ ವ್ಯಾಪ್ತಿಗೆ ಬರುವ ಪ್ರದೇಶ ಅಥವಾ ಬಡಾವಣೆಗೊಳಪಡುವ ಸಮುದಾಯ ಭವನದ ವಿವರಗಳನ್ನು ನಗಸಭೆಯಿಂದ ನೀಡಲಾಗಿದ್ದು, ಶ್ರೀರಾಮ ಸೇವಾ ಸಮಿತಿ, ಮಲ್ಲಿಕಾರ್ಜುನ ನಗರ, ಮಡಿಕೇರಿ(ಮಲ್ಲಿಕಾರ್ಜುನನಗರ, ಭಗವತಿನಗರ, ರಾಣಿಪೇಟೆ, ಐಟಿಐ ಹಿಂಭಾಗ, ಎಫ್.ಎಂ.ಸಿ. ಕಾಲೇಜು, ವಿದ್ಯಾನಗರ, ಕಾನ್ವೆಂಟ್ ಸ್ಕೂಲ್ ಪ್ರದೇಶ), ಗ್ರಾಮಾಭಿವೃದ್ಧಿ ಸಮಿತಿ, ಕುಂಬಳಗೇರಿ ಉಕ್ಕುಡ, ಮಡಿಕೇರಿ(ತ್ಯಾಗರಾಜ ಕಾಲೋನಿ, ಗದ್ದಿಗೆ, ಗದ್ದಿಗೆ ಹಿಂಭಾಗ, ಆಜಾದ್ ನಗರ, ಉಕ್ಕುಡ, ರಾಜರಾಜೇಶ್ವರಿನಗರ, ಸಂಪಿಗೆ ಕಟ್ಟೆ), ಅನ್ನಪೂರ್ಣೇಶ್ವರಿ ಸಮಿತಿ, ಅಶೋಕಪುರ, ಮಡಿಕೇರಿ(ಅಶೋಕಪುರ, ಕನ್ನಂಡಬಾಣೆ, ಚೈನ್ಗೇಟ್, ರಾಘವೇಂದ್ರ ದೇವಾಲಯಗಳ ಡಿ.ಎಫ್.ಓ. ಬಂಗ್ಲೆ ಬಳಿ), ಅರುಣೋದಯ ಸಮುದಾಯ ಭವನ, ಇಂದಿರಾನಗರ, ಮಡಿಕೇರಿ(ಚಾಮುಂಡೇಶ್ವರಿನಗರ ಮತ್ತು ಇಂದಿರಾನಗರ), ಶ್ರೀ ಆದಿಪರಾಶಕ್ತಿ ಸಮುದಾಯಭವನ ಮಂಗಳಾದೇವಿನಗರ, ಮಡಿಕೇರಿ(ಮೂರ್ನಾಡು ರಸ್ತೆ, ಮಂಗಳಾದೇವಿ ನಗರ, ಮಂಗಳೂರು ರಸ್ತೆ, ಗುಂಡೂರಾವ್ ಕಾಂಪೌಂಡ್), ಡಾ.ಅಂಬೇಡ್ಕರ್ ಶತಮಾನೋತ್ಸವ ಭವನ, ಸುದರ್ಶನ ಸರ್ಕಲ್, ಮಡಿಕೇರಿ(ಪುಟಾಣಿನಗರ, ದೇಚೂರು, ಬಾಣಿಮೊಟ್ಟೆ, ಅಶ್ವತ್ಕಟ್ಟೆ, ಜಲಾಶ್ರಯ ಬಡಾವಣೆ, ಶಾಂತಿನೀಕೇತನ) ಹಾಗೂ ಎಸ್.ಜೆ.ಎಸ್.ಆರ್.ವೈ. ಸಮುದಾಯ ಭವನ, ಚಾಮುಂಡೇಶ್ವರಿ ನಗರ, ಮಡಿಕೇರಿ(ಚಾಮುಂಡೇಶ್ವರಿನಗರ ದೇವಸ್ಥಾನ ಬದಿ, ಜ್ಯೋತಿನಗರ, ಸ್ಟೋನ್ಹಿಲ್, ಸ್ಟೀವರ್ಟ್ ಹಿಲ್, ಗೌಳಿಬೀದಿ, ಹೊಸಬಡಾವಣೆ, ರೈಪಲ್ರೇಂಜ್, ಸುಬ್ರಮಣ್ಯನಗರ) ಇಲ್ಲಿ ಆಸರೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಸಮುದಾಯ ಭವನಗಳಲ್ಲಿ ತೆರೆದಿರುವ ಗಂಜೀಕೇಂದ್ರದಲ್ಲಿ ತಾತ್ಕಾಲಿಕ ಆಸರೆ ಪಡೆಯಲು ಇಚ್ಚಿಸುವವರು ನಗರಸಭೆಯ ದೂರವಾಣಿ ಸಂಖ್ಯೆ 08272-220111, 08272-224960, 9448224994 ಮತ್ತು 9743132759 ನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.