News Kannada
Wednesday, October 05 2022

ಕರ್ನಾಟಕ

ಶ್ರೀರಂಗಪಟ್ಟಣದ ನಿಲುಗಂಭ ಸ್ಮಾರಕದ ಕಲಾಕೃತಿಗೆ ಪುರಸ್ಕಾರ - 1 min read

Photo Credit :

ಶ್ರೀರಂಗಪಟ್ಟಣದ ನಿಲುಗಂಭ ಸ್ಮಾರಕದ ಕಲಾಕೃತಿಗೆ ಪುರಸ್ಕಾರ

ಮಂಡ್ಯ: ಕಲಾವಿದ ವಿರುಪಾಕ್ಷ ಅವರ ಕಲಾಮೂಷೆಯಲ್ಲಿ ಮೂಡಿ ಬಂದ ಶ್ರೀರಂಗಪಟ್ಟಣದ ನಿಲುಗಂಭ ಸ್ಮಾರಕದ ಕಲಾಕೃತಿ ಕರ್ನಾಟಕ ಲಲಿತ ಕಲಾ ಅಕಾಡೆಮಿ 2017ರ ಸುವರ್ಣ ಸಂಭ್ರಮ ಕಲಾ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಕಲಾತಪಸ್ವಿ ಟ್ರಸ್ಟ್ ನ ಕಲಾವಿದರಾಗಿರುವ ವಿರೂಪಾಕ್ಷ ಎಸ್. ಅವರು ಈಗಾಗಲೇ ಸಾವಿರಾರು ಕಲಾ ಕೃತಿಗಳನ್ನು ರಚಿಸಿದ್ದು, ಕಲಾಪ್ರೇಮಿಗಳ ಮನಸೊರೆಗೊಳ್ಳುವಂತೆ ಮಾಡಿವೆ. ತಮ್ಮ ಸುತ್ತಮುತ್ತಲಿನ ದೃಶ್ಯಗಳನ್ನಿಟ್ಟುಕೊಂಡು ಅದಕ್ಕೆ ತೈಲವರ್ಣದಲ್ಲಿ ಜೀವ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯ ನಾಗವಳ್ಳಿ ಗ್ರಾಮದ ಶಿವಬಸಪ್ಪ, ಬಸಮ್ಮಣ್ಣಿರವರ ಪುತ್ರರಾದ ವಿರುಪಾಕ್ಷ ಅವರು ಕಲಾತಪಸ್ವಿ ಟ್ರಸ್ಟ್ ನ ಟ್ರಸ್ಟಿ ಹಾಗೂ ಕಲಾವಿದರಾಗಿ ಕಳೆದೊಂದು ದಶಕದಿಂದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶ್ರೀರಂಗಪಟ್ಟಣ ನಿಲುಗಂಭ ಸ್ಮಾರಕದ ಚಿತ್ರವನ್ನು ಜಲವರ್ಣ ಮಾಧ್ಯಮದಲ್ಲಿ ರಚಿಸುವ ಮೂಲಕ ಆ ಸ್ಮಾರಕಕ್ಕೊಂದು ಜೀವ ತುಂಬಿದ್ದರು. ಇದೀಗ ಈ  ಕಲಾಕೃತಿ ಕನರ್ಾಟಕ ಲಲಿತ ಕಲಾ ಅಕಾಡೆಮಿ ನೀಡುವ 2017ರ ಸುವರ್ಣ ಸಂಭ್ರಮ ಕಲಾ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅವರ ಶ್ರಮಕ್ಕೆ ಸಂದ ಗೌರವವಾಗಿದೆ.
ಈ ವಿಶೇಷ ಬಹುಮಾನ 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಜು. 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಎಸ್. ವಿರೂಪಾಕ್ಷ ಅವರಿಗೆ ಪ್ರದಾನ ಮಾಡಲಾಗುತ್ತದೆ.

See also  ಉಪ ಚುನಾವಣೆ: ಐದು ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು