News Kannada
Saturday, October 01 2022

ಕರ್ನಾಟಕ

ಬಳ್ಳಾರಿ ವೈದ್ಯ ಬಿಕೆಎಸ್ ಮನೆಗೆ ಕರಂದ್ಲಾಜೆ ಭೇಟಿ… ರಾಜಕೀಯ ವಲಯದಲ್ಲಿ ಟಿಕೆಟ್ ಕುತೂಹಲ - 1 min read

Photo Credit :

ಬಳ್ಳಾರಿ ವೈದ್ಯ ಬಿಕೆಎಸ್ ಮನೆಗೆ ಕರಂದ್ಲಾಜೆ ಭೇಟಿ... ರಾಜಕೀಯ ವಲಯದಲ್ಲಿ ಟಿಕೆಟ್ ಕುತೂಹಲ

ಬಳ್ಳಾರಿ: ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ನಗರದ ಖ್ಯಾತ ವೈದ್ಯ ಬಿ.ಕೆ.ಶ್ರೀನಿವಾಸ್ ಮೂರ್ತಿ ಮನೆಗೆ ಒಬ್ಬರೇ ತೆರಳಿ ಮಾತುಕತೆ ನಡೆಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.

ಬಿಜೆಪಿ ಪಕ್ಷ ಮಂಗಳವಾರ ನಗರದಲ್ಲಿ ಹಲವು ಕಾರ್ಯಗಳನ್ನು ಹಮ್ಮಿಕೊಂಡಿತ್ತು. ಯಡಿಯೂರಪ್ಪ, ಗೋವಿಂದ ಕಾರಜೋಳ ಮೊದಲಾದವರೂ ಬಂದಿದ್ದರು. ಇವರೊಂದಿಗೆ ಬಂದಿದ್ದ ಕರಂದ್ಲಾಜೆ ಒಬ್ಬರೇ ವೈದ್ಯ ಬಿಕೆಎಸ್ ಮನೆಗೆ ತೆರಳಿ ಮಾತುಕತೆ ನಡೆಸಿದರು. ಇದು ಈವರೆಗೆ ಬಿಕೆಎಸ್ ಅವರ ಮಗ ಬಿಜೆಪಿ ಪಕ್ಷದ ವೈದ್ಯ ಪ್ರಕೋಷ್ಟದ ಮುಖಂಡ ಡಾ. ಸುಂದರ್ ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆಂಬ ವದಂತಿಗೆ ರೆಕ್ಕೆ ಪುಕ್ಕ ಬಂದತಾಗಿದೆ.

ಬಿಕೆಎಸ್ ಕುಟುಂಬ ಈ ಮೊದಲಿನಿಂದ ರೆಡ್ಡಿ ಸಾಮ್ರಾಜ್ಯ ಬಳ್ಳಾರಿ ನಗರದಲ್ಲಿ ಅಸ್ತಿತ್ವಕ್ಕೆ ಬರುವ ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿತ್ತು. ಸುಷ್ಮಾ ಸ್ವರಾಜ್ ಅವರು 1999 ರಲ್ಲಿ ಸೋನಿಯಾ ಎದುರು ಸ್ಪರ್ಧೆಗೆ ಇಳಿದಾಗ ಅವರ ಬಹುತೇಕ ವಾಸ್ತವ್ಯ ಮತ್ತು ಅವರ ಆರೋಗ್ಯ ವಿಚಾರಣೆ ಈ ಕುಟುಂಬದವರದ್ದಾಗಿತ್ತು. ಆನಂತರ ಅವರು ಬಳ್ಳಾರಿಗೆ ಪ್ರತಿ ವರ್ಷ ವರಮಹಾಲಕ್ಷಿ ಪೂಜೆಗೆ ಬರುತ್ತಿದ್ದು ಸಹ ಇವರ ಮನೆಗೆ. ಸುಷ್ಮಾ ಮತ್ತು ಈ ಕುಟುಂಬದ ನಡುವೆ ನೇರ ಸಂಪರ್ಕ ಇದೆ.

ಇತ್ತ ಬಳ್ಳಾರಿ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರಿಗೆ ತಾಯಿಯಂತೆ ಇದ್ದ ಸುಷ್ಮಾ ಗಣಿ ಹಗರಣದಿಂದ ಅವರಿಂದ ಸಂಪೂರ್ಣ ದೂರ ಆದರು. ರೆಡ್ಡಿ ಗ್ಯಾಂಗ್ ಸಹ ಬೇರೆ ಪಕ್ಷ ಕಟ್ಟಿದ ಮೇಲೆ ಇನ್ನಷ್ಟು ದೂರವಾಗಿದ್ದರು. ಪಕ್ಷಕ್ಕೆ ಬೆಲೆ ನೀಡದವರಿಗಿಂತ ಪಕ್ಷಕ್ಕೆ ನಿಷ್ಠೆ ಇರುವವರು ಮುಖ್ಯ ಎಂದು ಸುಷ್ಮಾ ಮಾತನಾಡಿದ್ದಾರಂತೆ.

ಈಗ ಮತ್ತೆ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಶ್ರೀರಾಮುಲು ಮತ್ತು ರೆಡ್ಡಿ ಬಳಗದ ಸೋಮಶೇಕರ ರೆಡ್ಡಿ ನಗರದಿಂದ ಕಣಕ್ಕೆ ಇಳಿಯಲು ಎಲ್ಲಾ ರೀತಿ ಸಿಧ್ಧತೆ ನಡೆಸಿದ್ದಾರೆ. ಆದರೆ ಅವರ ಬದಲಾಗಿದ್ದ ಪಕ್ಷ ನಿಷ್ಠೆ, ಬೇಲ್ ಡೀಲ್ ಪ್ರಕರಣದಲ್ಲಿನ ಆರೋಪ ಮೊದಲಾದ ಕಾರಣಗಳಿಂದ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ಚಿಂತನೆ ಬಿಜೆಪಿ ಹೈಕಮಾಂಡ್ ನಡೆಸಿದೆ ಎನ್ನಲಾಗುತ್ತಿದೆ.

ಈಗಾಗಲೇ ಅಮಿತ್ ಷಾ ಕೆಲ ಹೆಸರುಗಳನ್ನು ನೀಡಿ ನಗರದಲ್ಲಿ ಸರ್ವೇ ನಡೆಸಿದ್ದು ಅದರಲ್ಲಿ ಬಿಕೆಎಸ್ ಸುಂದರ್ ಅವರ ಹೆಸರನ್ನು ಉಲ್ಲೇಖಿಸಿದೆ ಎಂಬ ಮಾಹಿತಿ ಇದೆ.

ಡಾ. ಸುಂದರ್ ಅವರು ಈವರೆಗೆ ಸಾರ್ವಜನಿಕವಾಗಿ ಬಿಜೆಪಿ ಪಕ್ಷದ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಟಿಕೆಟ್ ನೀಡುತ್ತಾರೆಂಬ ಮಾತುಗಳ ಹಿನ್ನೆಲೆಯಲ್ಲಿ ಅವರು ಸಹ ಪಕ್ಷದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಬಳ್ಳಾರಿಗೆ ಬಂದಾಗ ಹೂಗುಚ್ಚ ನೀಡಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಶೋಭಾ ಕರಂದ್ಲಾಜೆ ಬಳ್ಳಾರಿಗೆ ಬಂದ ತಕ್ಷಣ ಸುಂದರ್ ಅವರ ಮನೆಗೆ ತೆರಳಿ ಅವರ ಮನೆಯವರೊಂದಿಗೆ ಬೆರೆತು ಮಾತುಕತೆ ನಡೆಸಿದ್ದು ಪಕ್ಷದ ಕಾರ್ಯಕರ್ತರಲ್ಲಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಮೂಡಿಸಿದೆ.

See also  ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ನಿವೇಶನ ಗುರುತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು