ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ದುಷ್ಕರ್ಮಿಗಳು ವಿಗ್ರಹ ವಿರೂಪಗೊಳಿಸಿದ್ದು ಬೆಳಕಿಗೆ ಬಂದಿದೆ.
ಹಂಪಿಯ ತುಂಗಭದ್ರಾ ನದಿ ಬಳಿ ಇರುವ ಚಕ್ರತೀರ್ಥದ ಪ್ರದೇಶದಲ್ಲಿರುವ ದೊಡ್ಡ ಶಿವಲಿಂಗವೊಂದನ್ನು ಒಡೆದು ವಿರೂಪಗೊಳಿಸಲಾಗಿದೆ.
ಈ ಲಿಂಗದ ಪಕ್ಕದಲ್ಲಿರುವ ಇನ್ನೊಂದು ಲಿಂಗವನ್ನೂ ಭಗ್ನಗೊಳಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ರಂಜಾನ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಕಾವಲುಗಾರರು, ಹೋಂ ಗಾರ್ಡ್ಸ್ ಗಳನ್ನು ಬೇರೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ದುಷ್ಕರ್ಮಿಗಳು ಲಿಂಗ ಭಗ್ನಗೊಳಿಸಿರಬಹುದು ಎಂದು ಶಂಕಿಸಲಾಗಿದೆ.