News Kannada
Wednesday, December 07 2022

ಕರ್ನಾಟಕ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ!

Photo Credit :

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ!

ಸುಂಟಿಕೊಪ್ಪ: ಅರಣ್ಯದಿಂದ ಕಾಫಿ ತೋಟದತ್ತ ಬಂದಿರುವ ಕಾಡಾನೆಗಳು ಅಲ್ಲಿಯೇ ಬೀಡು ಬಿಟ್ಟು ಕೆಲಸ ಕಾರ್ಯಗಳನ್ನು ಮಾಡಲಾಗದ ಸ್ಥಿತಿ ಸಮೀಪದ ಉಲುಗುಲಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗಿತ್ತಾದರೂ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಮಧ್ಯರಾತ್ರಿ ವೇಳೆ ಉಲುಗುಲಿ ಗ್ರಾಮದ ವ್ಯಾಪ್ತಿಗೆ ಆಹಾರ ಅರಸಿ ಆಗಮಿಸಿದ್ದ ಕಾಡಾನೆಗಳು ಕಾಡಿಗೆ ಹಿಂತೆರಳದೆ ತೋಟದಲ್ಲಿಯೇ ವಾಸ್ತವ್ಯ ಹೂಡಿದ್ದವು. ಅಲ್ಲದೆ, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಎಂಬುವರ ತೋಟದತ್ತ ತೆರಳಿ ವಾಸ್ತವ್ಯ ಹೂಡಿ ಭಯದ ವಾತಾವರಣ ಸೃಷ್ಠಿಸಿದ್ದವು. ಅಲ್ಲದೆ ಹಲಸಿನ ಹಣ್ಣಿನ ಮರಗಳನ್ನು ಹುಡುಕಿಕೊಂಡು ತೋಟದೊಳಗೆ ಅಲೆಯುತ್ತಿರುವುದರಿಂದ ಬಾಳೆ, ಕಾಫಿಗಿಡಗಳನ್ನು ನಾಶ ಮಾಡಿದ್ದವು. ಇದರಿಂದ ಸುಮಾರು 30ಸಾವಿರ ರೂ. ನಷ್ಟ ಸಂಭವಿಸಿದ್ದಾಗಿ  ವಿಮಲಾವತಿ ಅವರು ದೂರಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿ ರಂಜಿತ್ ಮತ್ತು  ಸಿಬ್ಬಂದಿ ಕಾಫಿ ತೋಟದಲ್ಲಿ ಕಾಡಾನೆಗಳು ಇರುವುದನ್ನು ಗುರುತಿಸಿದ್ದು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ತೋಟದಲ್ಲಿ 3 ಕಾಡಾನೆಗಳ ಹಿಂಡು ಇರುವುದು ಪತ್ತೆಯಾಗಿತ್ತು. ಬಳಿಕ ಅವುಗಳನ್ನು ಹರಸಾಹಸ ಮಾಡಿ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಸೇರಿಸಲಾಯಿತು.
ಆನೆಕಾಡು ಅರಣ್ಯ ವ್ಯಾಪ್ತಿಯಿಂದ ಬರುವ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ನೆಲೆಯೂರುತ್ತಿದ್ದು ಇದರಿಂದ ಕಾಫಿ ತೋಟದಲ್ಲಿ ಕೆಲಸ ಮಾಡುವುದೇ ಕಷ್ಟವಾಗುತ್ತಿದೆ. ಒಂದು ಹಿಂಡನ್ನು ಕಾಡಿಗೆ ಅಟ್ಟಿದರೆ ಮತ್ತೊಂದು ಹಿಂಡು ಬರುತ್ತಿವೆ ಹೀಗಾಗಿ ಈ ವ್ಯಾಪ್ತಿಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.

See also  ಕೇರಳದ ವಯನಾಡ್ ನಿಂದ ರಾಹುಲ್ ಸ್ಪರ್ಧೆ ಖಚಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು