News Kannada
Tuesday, November 29 2022

ಕರ್ನಾಟಕ

ಬೆಂಗಳೂರಲ್ಲಿ ಹೆಣ್ಮಕ್ಕಳಿಬ್ಬರು ವಿವಾಹವಾದರು! - 1 min read

Photo Credit :

ಬೆಂಗಳೂರಲ್ಲಿ ಹೆಣ್ಮಕ್ಕಳಿಬ್ಬರು ವಿವಾಹವಾದರು!

ಬೆಂಗಳೂರು: ಮನೆಯಿಂದ ನಾಪತ್ತೆಯಾಗಿರುವ ಯುವತಿಯರಿಬ್ಬರು ವಿವಾಹವಾಗಿರುವ ಘಟನೆ ಉದ್ಯಾನನಗರಿಯಲ್ಲಿ ನಡೆದಿದೆ. ಇವರಿಬ್ಬರು ಶಿಕ್ಷಿತರಾಗಿದ್ದು, ಈಗಾಗಲೇ ದೇವಸ್ಥಾನದಲ್ಲಿ ತಾಳಿಕಟ್ಟಿಕೊಂಡು ಮದುವೆಯಾಗಿರುವುದಾಗಿ ಇವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಬ್ಬಳು 25 ವರ್ಷದವಳಾಗಿದ್ದರೆ, ಮತ್ತೊಬ್ಬಳು 21 ವರ್ಷದವಳಾಗಿದ್ದಾಳೆ. ಈ ಘಟನೆ ಎರಡು ಕುಟುಂಬಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಒಬ್ಬಳು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದರೆ,  ಈಕೆಗಿಂತ ಹಿರಿಯಳಾದ ಮತ್ತೊಬ್ಬ ಯುವತಿ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದಾಳೆ. ಇವರಿಬ್ಬರು ದೂರದ ಸಂಬಂಧಿಗಳಾಗಿದ್ದು, ಆಗಾಗ್ಗೆ ಭೇಟಿಯಾಗುತ್ತಿದ್ದರಿಂದ ಇಬ್ಬರ ನಡುವೆ ಆಕರ್ಷಣೆಯುಂಟಾಗಿ ಅದು ಸಲಿಂಗಿಗಳಾಗಲು ಕಾರಣವಾಗಿದೆ ಎನ್ನಲಾಗಿದೆ. ಇವರಿಬ್ಬರು ಜೊತೆಗೆ ಇರುವುದು ಮತ್ತು  ಅವರ ಗಾಢ ಸ್ನೇಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮನೆಬಿಟ್ಟು ವಿವಾಹವಾಗಿರುವುದಾಗಿ ತಿಳಿದು ಬಂದಿದೆ. ಕೋರಮಂಗಲದ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ಒಬ್ಬಳು ಮತ್ತೊಬ್ಬಳ ಕೊರಳಿಗೆ  ತಾಳಿ ಕಟ್ಟುವ ಮೂಲಕ ಮದುವೆಯಾಗಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಸದ್ಯ ಇವರಿಬ್ಬರನ್ನು ಕೌನ್ಸಿಲಿಂಗ್ ಮಾಡಲಾಗುತ್ತಿದೆ ಎನ್ನಲಾಗಿದೆ.

See also  ರಂಗೋಲಿ ಜಾತ್ರೆಯಲ್ಲಿ ಕಲಾಕಾರರ ಕೈಯಲ್ಲಿ ಅರಳಿದ ಚಿತ್ತಾರ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು