News Kannada
Thursday, December 08 2022

ಕರ್ನಾಟಕ

ವೈಜ್ಞಾನಿಕ ರೀತಿಯಿಂದ ಬರದಲ್ಲೂ ಬಂಪರ್ ಇಳುವರಿ ಪಡೆಯುತ್ತಿರುವ ಟೊಮೆಟೋ ಬೆಳೆಗಾರರು!

Photo Credit :

ವೈಜ್ಞಾನಿಕ ರೀತಿಯಿಂದ ಬರದಲ್ಲೂ ಬಂಪರ್ ಇಳುವರಿ ಪಡೆಯುತ್ತಿರುವ ಟೊಮೆಟೋ ಬೆಳೆಗಾರರು!

ಬರದಿಂದಾಗಿ ಕೆಲವೆಡೆಗಳಲ್ಲಿ ಇಳುವರಿ ಬಹಳ ಕಡಿಮೆ. ವೈಜ್ಞಾನಿಕ ರೀತಿ ಅನುಸರಿಸಿ ಬೆಳೆದಿರುವೆಡೆ ಉತ್ತಮ ಫಸಲು. ಬೆಳೆಗೆ ಉತ್ತಮ ಬೆಲೆ. ಬೆಲೆ ಇದ್ದರೂ ಇಳುವರಿ ಇಲ್ಲ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೊಮೆಟೋ ಬೆಳೆದಿರುವ ರೈತರ ಪರಿಸ್ಥಿತಿ.

ಕಳೆದ ಮೂರು ವರ್ಷಗಳಿಂದಲೂ ಬರದಿಂದ ಕಾಫಿನಾಡಿನ ರೈತರು ಬರಗಾಲಕ್ಕೆ ತತ್ತರಿಸಿ ಹೋಗಿದ್ದಾರೆ. ಬೆಳೆದ ಬೆಳೆಯೆಲ್ಲಾ ನೆಲಕಚ್ಚಿ ಕಂಗಾಲಾಗಿದ್ದರು. ಆದರೆ ಚಿಕ್ಕಮಗಳೂರು ತಾಲೂಕಿನ ರೈತರು ವೈಜ್ಞಾನಿಕ ಕ್ರಮಗಳಲ್ಲಿ ಅಳವಡಿಸಿ ಟೋಮೆಟೋ ಬೆಳೆದು ಬರದಲ್ಲೂ ಬಂಪರ್ ಇಳುವರಿ ಪಡೆಯುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಹೌದು ಕಳೆದ ಮೂರು ವರ್ಷಗಳಿಂದಲೂ ಬರದಿಂದ ಕಾಫಿನಾಡಿನ ರೈತರು ಬರಗಾಲಕ್ಕೆ ತತ್ತರಿಸಿ ಹೋಗಿದ್ದಾರೆ. ಬೆಳೆದ ಬೆಳೆಯೆಲ್ಲಾ ನೆಲಕಚ್ಚಿ ಕಂಗಾಲಾಗಿದ್ದರು. ಆದರೆ ಚಿಕ್ಕಮಗಳೂರು ತಾಲೂಕಿನ ರೈತರು ವೈಜ್ಞಾನಿಕ ಕ್ರಮಗಳಲ್ಲಿ ಅಳವಡಿಸಿ ಟೋಮೆಟೋ ಬೆಳೆದು ಬರದಲ್ಲೂ ಬಂಪರ್ ಇಳುವರಿ ಪಡೆಯುತ್ತಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲೂ ಪ್ರತಿ ಕೆ.ಜಿ 50 ರಿಂದ 60 ರೂ.ಗಳಿಗೆ ಬಿಕರಿಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಗ್ರಾಹಕರಿಗೆ ಮಾತ್ರ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಒಂದೆಡೆ ಭೀಕರ ಬರಗಾಲ ತಾಂಡವವಾಡುತ್ತಿದ್ದರು ಕೂಡ ಜಿಲ್ಲೆಯ ಮುಗುಳುವಳ್ಳಿ ಸುತ್ತಮುತ್ತಲಿನ ರೈತರು ವೈಜ್ಞಾನಿಕ ರೀತಿ ಅನುಸರಿಸಿ ಟೊಮೆಟೋ ಬೆಳೆಯುವುದರೊಂದಿಗೆ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ಹನಿ ನಿರಾವರಿಯನ್ನು ಅಳವಡಿಸಿಕೊಂಡು ಇಲ್ಲಿನ ಕೆಲ ರೈತರು ಟೊಮೆಟೋ ನಾಟಿ ಮಾಡಿದ್ದು, ಈಗಾಗಲೇ ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ.ಜಿಲ್ಲೆಯ ಲಕ್ಯಾ, ಸಖರಾಯಪಟ್ಟಣ, ಹಿರೇಗೌಜ, ಅಂಬಳೆ, ಯು.ಬಿ. ಹಳ್ಳಿ ಮುಂತಾದ ಭಾಗಗಳಲ್ಲಿ ಹೇರಳವಾಗಿ ಟೊಮೆಟೋ ಬೆಳೆಯಲಾಗುತ್ತಿತ್ತು. ಆದರೆ ಪ್ರತೀ ವರ್ಷ ಅನುಭವಿಸುತ್ತಿದ್ದ ನಷ್ಠದಿಂದ ಬೇಸತ್ತ ರೈತರು ಈ ಬಾರಿ ಹೆಚ್ಚಿನ ವಿಸ್ತೀರ್ಣದಲ್ಲಿ ಟೊಮೆಟೋವನ್ನು ಬೆಳೆದಿಲ್ಲ. ಅಲ್ಲದೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಟೊಮೆಟೋ ಇಳುವರಿ ಸಹ ಬಹಳ ಕಡಿಮೆಯಾಗಿದೆ. ಟೊಮೆಟೋಗೆ ಹೆಚ್ಚಿನ ಬೆಲೆ ದೊರೆಯುತ್ತಿದ್ದರೂ ಸಹ ಇಳುವರಿ ಕಡಿಮೆಯಾಗಿ ಈ ಭಾಗದ ರೈತರು ಮತ್ತೊಮ್ಮೆ ಸಮಸ್ಯೆ ಅನುಭವಿಸುವಂತಾಗಿದೆ.ಇನ್ನು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಪ್ರತಿ ಕೆ.ಜಿ ಹತ್ತರಿಂದ ಇಪ್ಪತ್ತು ರೂಪಾಯಿಗೆ ಬಿಕರಿಯಾಗುತ್ತಿದ್ದ ಟೊಮೆಟೋ ಇದೀಗ ದಿಢೀರನೇ ಪ್ರತಿ ಕೆ.ಜಿ 50 ರಿಂದ 60 ರೂಪಾಯಿಗೆ ಬಿಕರಿಯಾಗುತ್ತಿದ್ದು, ಪ್ರತಿ ಟೋಮೋಟ ಕ್ರೇಟ್ ಗೆ 1300 ರಿಂದ 1400 ರೂ ಹಣವನ್ನು ನಿಗದಿ ಮಾಡಲಾಗಿದೆ.ಮಾರುಕಟ್ಟೆಯಲ್ಲಿ ದಿನೇ ದಿನೇ ಏರುತ್ತಿರುವ ಬೆಲೆಯಿಂದಾಗಿ ಬರದ ನಡುವೆಯೂ ರೈತರು ಸಂತಸದಲೆಯಲ್ಲಿ ತೇಲಾಡುತ್ತಿದ್ದಾರೆ.

ಒಟ್ಟಾರೆಯಾಗಿ ನಾನಾ ಕನಸುಗಳನ್ನ ಹೊತ್ತು ಟೊಮೆಟೋ ಬೆಳೆದಿದ್ದ ಅನ್ನದಾತರಿಗೆ ಇದು ಕೈ ಹಿಡಿದಿದೆ. ಒಂದೆಡೆ ಉತ್ತಮ ಬೆಲೆ, ಇನ್ನೊಂದೆಡೆ ಬರದ ನಡುವೆಯೂ ಲಭಿಸಿದ ಬಂಪರ್ ಇಳುವರಿ ರೈತರನ್ನು ಸಂಕಷ್ಟದಿಂದ ಪಾರುಮಾಡಿದೆ. ಬರವಿದ್ದರೂ ವೈಜ್ಞಾನಿಕವಾಗಿ ಟೊಮೆಟೋ ಬೆಳೆದು ಲಾಭಗಳಿಸಬಹುದು ಅನ್ನುವುದನ್ನು ಕೆಲ ರೈತರು ತೋರಿಸಿಕೊಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆಯನ್ನು ಕಾಯ್ದುಕೊಂಡಲ್ಲಿ ಅನ್ನದಾತರಿಗೆ ಲಕ್ಷ ಲಕ್ಷ ಲಾಭ ಲಭಿಸೋದ್ರಲ್ಲಿ ಎರಡು ಮಾತಿಲ್ಲ…

See also  ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ: 10ಮಕ್ಕಳಿಗೆ ಗಾಯ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು