News Kannada
Tuesday, December 06 2022

ಕರ್ನಾಟಕ

ಪ್ರವಾಸಿ ತಾಣವಾಗಿ ನಿಪ್ಲಿ ಜಲಪಾತ ಸಾಕ್ಷಿ

Photo Credit :

 ಪ್ರವಾಸಿ ತಾಣವಾಗಿ ನಿಪ್ಲಿ ಜಲಪಾತ ಸಾಕ್ಷಿ

ಶಿವಮೊಗ್ಗ: ಮಳೆಗಾಲ ಬಂತೆಂದರೆ ಮಲೆನಾಡಿನ ತಾಲೂಕುಗಳಲ್ಲಿ ಸೂಪ್ತವಾಗಿ ಉಸಿರುಗಟ್ಟಿ ಕೂತಿರುವ ಝರಿಗಳೆಲ್ಲಾ ಜಲಪಾತಗಳಾಗಿ ಬದಲಾಗುತ್ತವೆ. ಇಂತಹ ಜಲಪಾತಗಳಲ್ಲಿ ಪ್ರವಾಸಿಗರಿಗೆ ಅತೀ ಹೆಚ್ಚು ಮುದ ನೀಡಬಲ್ಲಂತಹ ಜಲಪಾತ ನಿಪ್ಲಿ ಜಲಪಾತ.

ಮಲೆನಾಡಿನಲ್ಲಿ ಹಿಂದಿನಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಆದರೆ ಕೆಲವು ಹೋಬಳಿಗಳಲ್ಲಿ ಮಳೆಯ ಪ್ರಮಾಣ ಎಂದಿಗೂ ಕಡಿಮೆಯಾಗುವುದಿಲ್ಲ . ಅಂತಹ ಒಂದು ಸ್ಥಳ ತಾಲೂಕು ಸಾಗರದ ಕರೂರು ಮತ್ತು ಭಾರಂಗಿ ಹೋಬಳಿ. ಇಲ್ಲಿನ ಮಳೆಯ ಅಹ್ಲಾದಕಾರಿ ಸೃಷ್ಟಿಗೆ ಸಾಕ್ಷಿ ಭಾರಂಗಿ ಹೋಬಳಿ ಗಡಿಪ್ರದೇಶದ ನಿಪ್ಲಿ ಜಲಪಾತ.

ಕೃಷಿ ಉದ್ದೇಶಕ್ಕೆ ನಿರ್ಮಿಸಿರುವ ಚಿಕ್ಕ ಆಣೆಕಟ್ಟು ಇದಾಗಿದ್ದು ಇನ್ನೂರು ಮೀಟರ್ ಪ್ರಕೃತಿದತ್ತ ಲ್ಯಾಟ್ರೇಟ್ ಕಲ್ಲಿನ ಮೇಲೆ ಜುಳುಜುಳು ಹರಿದು ಹದಿನೆಂಟು ಅಡಿ ಆಳಕ್ಕೆ ಧುಮುಕಿ ಜಲಪಾತ ನಿರ್ಮಾಣವಾಗಿದೆ. ಇದು ಜನನಿಬಿಡ ಪ್ರದೇಶವಲ್ಲದ ಕಾರಣ ಪ್ರವಾಸಿಗರು ಇಲ್ಲಿ ಶನಿವಾರ ಭಾನುವಾರ ಹೊರತಾಗಿ ಕಾಣಸಿಗುವುದಿಲ್ಲ. ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಮಾತ್ರ ನೋಡ ಸಿಗುವ ಜಲಪಾತವಿದು. ನಂತರ ನೀರಾಟಕ್ಕೆ ಮಾತ್ರ ಸರಿ.

ಆದರೆ ಇಲ್ಲಿ ಮದ್ಯಪಾನಿಗಳದ್ದೇ ಸಮಸ್ಯೆ. ಈಗಂತೂ ಮಲೆನಾಡಿನಲ್ಲೆಡೆ ಮದ್ಯಬಾಟಲಿಗಳದ್ದೇ ಕಾರುಬಾರು. ಪ್ರವಾಸಕ್ಕೆ ಬರುವ ಪಡ್ಡೆಹುಡುಗರಿಗೆ ಕನಿಷ್ಟ ಕಾಳಜಿಯೂ ಇರುವುದಿಲ್ಲ. ಕುಡಿದು ಬಾಟಲಿಗಳನ್ನು ಇಲ್ಲೇ ಎಸೆಯುವ ಪರಿಣಾಮ ಇಲ್ಲಿ ನೀರಿನಲ್ಲಿ ಕಾಲಿಟ್ಟರೆ ಸಾಕು ಗಾಜಿನ ಚೂರು ಚುಚ್ಚಿಕೊಳ್ಳುವ ಅಪಾಯವಿದೆ.

ಸಾಗರದಿಂದ ಜೋಗಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಿಗುವ ಆಡುಕಟ್ಟೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಈ ಜಾಲಪಾತವಿದ್ದು, ತಾಳುಗುಪ್ಪ ಪಟ್ಟಣಕ್ಕೆ ಹತ್ತಿರವಿದೆ.

See also  ಜಿಲ್ಲಾಧಿಕಾರಿಗಳಿಂದ ಪರಿಶಿಷ್ಟರ ಕಡೆಗಣನೆ : ಪ್ರಜಾ ಪರಿವರ್ತನಾ ವೇದಿಕೆ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು