News Kannada
Wednesday, December 07 2022

ಕರ್ನಾಟಕ

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಅನಿಲ್ ಪದಗ್ರಹಣ

Photo Credit :

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಅನಿಲ್ ಪದಗ್ರಹಣ

ಮಡಿಕೇರಿ: ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ರೋಟರಿ ಮಿಸ್ಟಿ ಹಿಲ್ಸ್ 13ನೇ ಅಧ್ಯಕ್ಷರಾಗಿ ಅನಿಲ್ ಹೆಚ್.ಟಿ. ನೇಮಕಗೊಂಡಿದ್ದಾರೆ. ಎಸ್.ಎಸ್.ಸಂಪತ್ ಕುಮಾರ್ ಉಪಾಧ್ಯಕ್ಷರಾಗಿದ್ದಾರೆ.

ಖಜಾಂಚಿಯಾಗಿ ಎನ್.ಕೆ. ಮೋಹನ್ ಪ್ರಭು, ಸಾರ್ಜೆಂಟ್ ಎಟ್ ಆರ್ಮ್ಸ್ ಆಗಿ ಪ್ರಸಾದ್ ಗೌಡ, ಜಂಟಿ ಕಾರ್ಯದರ್ಶಿಯಾಗಿ ಸಿ.ಕೆ.ಸತೀಶ್ ಸೋಮಣ್ಣ, ಬುಲೆಟಿನ್ ಎಡಿಟರ್ ಆಗಿ ಬಿ.ಕೆ.ರವೀಂದ್ರರೈ, ಸಾಮಾಜಿಕ ಸೇವಾ ನಿರ್ದೇಶಕಿಯಾಗಿ ಕಲ್ಮಾಡಂಡ ಶಶಿಮೊಣ್ಣಪ್ಪ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಸಿ.ರಾಮಚಂದ್ರ ಮುಗೂರು, ವೊಕೇಶನನ್ ಸರ್ವೀಸ್ ನಿರ್ದೇಶಕಿಯಾಗಿ ಗಾನ ಪ್ರಶಾಂತ್, ಜಿಲ್ಲಾ ಯೋಜನಾ ನಿರ್ದೇಶಕರಾಗಿ ಎಂ.ಆರ್.ಜಗದೀಶ್, ಪಲ್ಸ್ ಪೊಲಿಯೋ ಯೋಜನಾ ನಿರ್ದೇಶಕರಾಗಿ ಡಾ. ಪಿ.ಎನ್. ಕುಲಕರ್ಣಿ, ಮುಂದಿನ ಸಾಲಿನ ಅಧ್ಯಕ್ಷರಾಗಿ ಜಿ.ಆರ್.ರವಿಶಂಕರ್, ವೆಬ್ ಸೈಟ್ ನಿರ್ದೇಶಕರಾಗಿ ಪ್ರಮೋದ್ ರೈ, ಅಂತರರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ದಿನೇಶ್ ಕಾರ್ಯಪ್ಪ, ಯೂತ್ ಸರ್ರವೀಸ್ ನಿರ್ದೇಶಕರಾಗಿ ಎಂ.ಯು. ಮಹೇಶ್, ಶಿಕ್ಷಣ ಯೋಜನಾ ಸಂಚಾಲಕರಾಗಿ ಪ್ರೊ.ಶ್ರೀಧರ ಹೆಗಡೆ, ಫಂಡ್ ರೈಸಿಂಗ್ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರಾಗಿ ಬಿ.ಎನ್. ರತ್ನಾಕರ ರೈ, ಇಂಟರ್ಯಾಕ್ಟ್ ಸಮಿತಿ ಸಂಚಾಲಕರಾಗಿ ಕೆ.ಜಿ. ಅಜಿತ್ ನಾಣಯ್ಯ, ರೋಟರ್ಯಾಕ್ಟ್ ಸಚಾಲಕರಾಗಿ ಎಂ.ಧನಂಜಯ್, ಟಿ.ಆರ್.ಎಫ್ ಸಮಿತಿ ಸಂಚಾಲಕರಾಗಿ ಡಿ.ಎನ್. ಲಿಂಗರಾಜು, ಸಾರ್ವಜನಿಕ ಸಂಪರ್ಕ ಸಂಚಾಲಕರಾಗಿ ಲೀನಾ ಪೂವಯ್ಯ, ಸದಸ್ಯತ್ವ ನೋಂದಣಿ ಸಮಿತಿ ಸಂಚಾಲಕರಾಗಿ ಎಂ.ಪಿ. ನಾಗರಾಜ್, ವಿನ್ಸ್ ಯೋಜನಾ ಸಂಚಾಲಕರಾಗಿ ಪಿ.ಆರ್. ರಾಜೇಶ್, ಕಿರಣ್ ಕುಮಾರ್ ರೈ ಎಚ್.ಯು, ಅಶೋಕ್ ಪಿ.ವಿ. ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಪಿ.ಎಸ್. ಮಧುಸೂದನ್, ರೋಟರಿ ಕುಟುಂಬ ಸಮಿತಿ ಅಧ್ಯಕ್ಷರಾಗಿ ಎಸ್.ಎಂ.ಚೇತನ್, ಹಾಜರಾತಿ ಸಮಿತಿ ಸಂಚಾಲಕರಾಗಿ ಸುಮಂತ್ ಪಾಲಾಕ್ಷ, ಆಹಾರ ಮತ್ತು ಕಾರ್ಯಕ್ರಮಗಳ ಸಂಯೋಜಕ ಸಮಿತಿ ಸಂಚಾಲಕರಾಗಿ ಪ್ರಶಾಂತ್ ಎಸ್.ವರ್ಣೀಕರ್, ಪ್ರವೀಣ್ ಶೇಟ್, ಮನೋಹರ್, ನಾರಾಯಣ ರಾವ್, ಎಂ. ಅಶೋಕ್ ರಾವ್, ಕೆ.ಎಸ್. ಲವಿನ್, ಕೆ.ಡಿ. ಅನೂಪ್, ಮಿಸ್ಟಿಹಿಲ್ಸ್ ಆಡಳಿತ ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ್ ನೇಮಕಗೊಂಡಿದ್ದಾರೆ.

ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆದ ಮಡಿಕೇರಿ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ನಡೆಸಿಕೊಟ್ಟರು. ರೋಟರಿ ಮಿಸ್ಟಿಹಿಲ್ಸ್ ನೂತನ 9 ಮಂದಿ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ಅರುಣ್, ಅಕ್ಷತಾ ಸತೀಶ್ ಕುಮಾರ್, ಕಟ್ಟೆಮನೆ ಸೋನಾಜಿತ್, ಕಾಂಗೀರ ಸತೀಶ್, ಸಂತೋಷ್ ಚಂಗಪ್ಪ ಕೆ.ಎನ್, ಹೆಚ್.ಎಸ್.ವೆಂಕಟೇಶ್ ಪ್ರಸಾದ್, ರಿಶ್ಚಿತ್ ಮಾದಯ್ಯ, ಯೋಗೇಂದ್ರ ಬಾಳೆಕಜೆ ಅವರಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಬುಲೆಟಿನ್ ಅನ್ನು ರೊಟೇರಿಯನ್ ಮಹೇಶ್ ನಲ್ವಾಡೆ ಅವರು ಅನಾವರಣಗೊಳಿಸಿದರು.

ಸಮಾರಂಭದಲ್ಲಿ ರೊಟರಿ ಮಿಸ್ಟಿ ಹಿಲ್ಸ್ ಸ್ಥಾಪಕ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಜಯಶ್ರೀ ಅನಂತಶಯನ, ನಿರ್ಗಮನ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಮಾಜಿ ಸಹಾಯಕ ಗೌರ್ನರ್ ಡಾ. ಪ್ರಶಾಂತ್ ಮತ್ತು ಡಾ. ಎನ್.ಎಸ್. ನವೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಶೈಕ್ಷಣಿಕವಾಗಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ರೋಟರಿ ಸದಸ್ಯರ ಮಕ್ಕಳನ್ನು ಅವರ ಪೋಷಕರೊಂದಿಗೆ ಕಿರುಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

See also  ವಿದ್ಯುತ್ ಸ್ಪರ್ಶದಿಂದ ಯುವತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು