News Kannada
Friday, December 02 2022

ಕರ್ನಾಟಕ

ಗದ್ದೆಗಳಿಗೆ ನವಿಲುಗಳ ಲಗ್ಗೆ: ರೈತರಲ್ಲಿ ಬೆಳೆ ನಷ್ಟದ ಆತಂಕ

Photo Credit :

ಗದ್ದೆಗಳಿಗೆ ನವಿಲುಗಳ ಲಗ್ಗೆ: ರೈತರಲ್ಲಿ ಬೆಳೆ ನಷ್ಟದ ಆತಂಕ

ಮಡಿಕೇರಿ: ಕಾಡಾನೆ, ಕಾಡುಹಂದಿ, ಹುಳ ಇತ್ಯಾದಿ ಉಪಟಗಳಿಂದ ಬೇಸತ್ತಿದ್ದ ಗುಡ್ಡೆಹೊಸೂರು ವ್ಯಾಪ್ತಿಯ ರೈತರನ್ನು ಇದೀಗ ನವಿಲುಗಳು ಕಾಡುತ್ತಿವೆ. ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ನವಿಲುಗಳು ಕೈಗೆ ಬಂದ ತ್ತುತ್ತು ಬಾಯಿಗೆ ಬಾರದಂತೆ ಮಾಡುತ್ತಿವೆ.

ಕಳೆದ ಕೆಲ ವರ್ಷಗಳಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವನ್ಯ ಜೀವಿಗಳ ಹಾವಳಿ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದ್ದು, ಇದೀಗ ಗುಡ್ಡೆಹೊಸೂರು ವಿಭಾಗದ ಕೃಷಿ ಕಾರ್ಯಗಳಿಗೆ ನವಿಲುಗಳು ಅಡ್ಡಿಯನ್ನು ಉಂಟು ಮಾಡುತ್ತಿರುವುದು ಆತಂಕವನ್ನು ಹುಟ್ಟು ಹಾಕಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಕಾಣಿಸಿಕೊಳ್ಳದೆ ಇದ್ದ ನವಿಲುಗಳು ಇದೀಗ ಗುಂಪು ಗುಂಪಾಗಿ ಗುಡ್ಡೆಹೊಸೂರು ವಿಭಾಗದ ಭತ್ತದ ಕೃಷಿ ಭೂಮಿಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಇಲ್ಲಿಯರೆಗೆ ಸಣ್ಣಪುಟ್ಟ ಪಕ್ಷಿಗಳ ಉಪಟಳವನ್ನು ನಿಯಂತ್ರಿಸಲು ವಿವಿಧ ಕಸರತ್ತು ನಡೆಸುತ್ತಿದ್ದ ರೈತ ಇದೀಗ ದೊಡ್ಡ ಗಾತ್ರದ ನವಿಲುಗಳ ಹಾವಳಿಯನ್ನು ತಡೆಗಟ್ಟಲು ಹೊಸ ವಿಧಾನಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ಕೊಡಗಿನಲ್ಲಿ ಭತ್ತದ ಕೃಷಿಯಿಂದ ಕೃಷಿಕ ವಿಮುಖನಾಗುತ್ತಿದ್ದನಾದರು ಇಂದಿಗೂ ಬಹಳಷ್ಟು ಪ್ರದೇಶಗಳಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿಯನ್ನು ನಡೆಸಲಾಗುತ್ತಿದೆ. ಪ್ರಸ್ತುತ ವ್ಯವಸ್ಥೆಯಡಿ ಕಷ್ಟನಷ್ಟಗಳನ್ನು ಮೀರಿ ಭತ್ತದ ಕೃಷಿಯನ್ನು ನಿಲ್ಲಿಸಬಾರೆನ್ನುವ ಕಾರಣದಿಂದ ಸಾಕಷ್ಟು ಮಂದಿ ಭತ್ತ ಬೆಳೆಯುತ್ತಿದ್ದಾರೆ. ಇಂತಹ ಕೃಷಿ ಚಟುವಟಿಕೆಗಳಿಗೆ ಕಾಡಾನೆಗಳ ಹಾವಳಿ ದೊಡ್ಡ ಸಮಸ್ಯೆಯಾಗಿತ್ತು. ಆದರೆ ಇದೀಗ ನವಿಲಿನ ಉಪಟಳ ಇದರೊಂದಿಗೆ ಸೇರ್ಪಡೆಗೊಂಡಿದ್ದು, ಬೆಳೆದ ಬೆಳೆ ರೈತರ ಕೈಸೇರುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರ ಸಹಕಾಯಕ್ಕೆ ಬರಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಫೋಟೋ :: ಪೀಕಾಕ್ 1, 2, 3

See also  ಕಾವೇರಿ ನಿವಾಸದಿಂದಲೇ ಪಕ್ಷ ಸಂಘಟನೆಗೆ ಮುಂದಾದ ಮಾಜಿ ಸಿಎಂ ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು