News Kannada
Monday, December 05 2022

ಕರ್ನಾಟಕ

ಕೇಂದ್ರ ಸರಕಾರ ರೈತ ವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಶೋಭಾ ಕರಂದ್ಲಾಜೆ ಕಛೇರಿಗೆ ಮುತ್ತಿಗೆ

Photo Credit :

ಕೇಂದ್ರ ಸರಕಾರ ರೈತ ವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಶೋಭಾ ಕರಂದ್ಲಾಜೆ ಕಛೇರಿಗೆ ಮುತ್ತಿಗೆ

ಚಿಕ್ಕಮಗಳೂರು: ರೈತರ ಸಾಲ ಮನ್ನಾ ಮಾಡದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತ ವಿರೀಧಿ ನೀತಿಯನ್ನು ಖಂಡಿಸಿ ಉಡುಪಿ-ಚಿಕ್ಕಮಗಳೂರು ಸಂಸತ್ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಈಗಾಗಲೇ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ತನ್ನ ರೈತಪರವಾದ ದೋರಣೆಗೆ ಕಟಿಬದ್ದವಾಗಿದೆ. ರಾಜ್ಯದಲ್ಲಿ 8165 ಕೋಟಿ ರೂ.ಗಳ ಸಾಲ ಮನ್ನಾ ವಿಚಾರ ಸಣ್ಣ ಮಟ್ಟದ ವಿಚಾರವೇನಲ್ಲ. ರಾಜ್ಯದಲ್ಲಿ ಹೆಚ್ಚುವರಿ ಆದಾಯದ ಮೂಲಗಳಿಲ್ಲದಿದ್ದರೂ, ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಸಿದ್ದರಾಮಯ್ಯ ಸರಕಾರ ಯೋಜನಾಬದ್ದ ರೀತಿಯಲ್ಲಿ ರೈತರ ಸಾಲವನ್ನು ಮನ್ನಾಗೊಳಿಸುವ ಮೂಲಕ ಸಂಕಷ್ಟದಲ್ಲಿರುವ ರೈತಾಪಿಗಳಿಗೆ ಆಸರೆಯಾಗಿ ನಿಂತಿರುವಂದು ಪ್ರತಿಭಟನಾಕಾರರು ಹೇಳಿದ್ದಾರೆ.

ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ ಮೇಲೆ ಕೇಂದ್ರ ಸರಕಾರ ಮನ್ನಾ ಮಾಡುವಂತೆ ಒತ್ತಡ ಹೇರುವ ಭರವಸೆ ನೀಡಿದ್ದ ರಾಜ್ಯದ ಬಿಜೆಪಿ ಸಂಸದರು ಹಾಗೂ ಬಿಜೆಪಿ ನಾಯಕರು ಇಂದು ರೈತರ ಬಗ್ಗೆ ಯಾವುದೇ ಕಾಳಜಿಯೂ ತೋರದೆ ನಿರ್ಲಜ್ಜ ರಾಜಕೀಯ ನಡೆಸುತ್ತಿದ್ದಾರೆ. ರಾಷ್ಟ್ರೀಯ ಬಿಜೆಪಿ ನಾಯಕರು ರೈತರ ಸಾಲ ಮನ್ನಾಗೊಳಿಸುವುದು ಸಾದ್ಯವಿಲ್ಲವೆಂದು ಹೇಳಿಕೊಂಡಿರುವಾಗ ರಾಜ್ಯದ ಬಿಜೆಪಿ ಮುಖಂಡರು ನಾಚಿಕೆಗೆಟ್ಟ ರಾಜಕೀಯ ನಡೆಸುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ರಾಜ್ಯದ 17 ಸಂಸದರು ಸಂಸತ್ ಭವನದ ಎದುರು ಉಪವಾಸ ಕೂತು ಯಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯವರು ಮೋದಿಯ ಮೂಗಿಡಿದು ರೈತರ ಸಾಲವನ್ನು ಮನ್ನಾಗೊಳಿಸಲಿ. ಇಲ್ಲದಿದ್ದರೆ ಅವರು ಕೂಡ ರಾಜಿನಾಮೆ ಕೊಟ್ಟು ತಮ್ಮ ಕೈಲಾಗುವುದಿಲ್ಲ ಎಂದು ರಾಜಕೀಯ ನಿವೃತ್ತಿ ನಡೆಸಲಿ. ಇಂದು ಮೋದಿ ಸರಕಾರ ಯಾವುದೇ ರೀತಿಯಲ್ಲೂ ಬಡವರ ಪರರ, ರೈತರ ಪರವಾದ ಸರಕಾರವಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಟೀಕಿಸಿದರು

See also  ಮಗನನ್ನು ಕಳೆದುಕೊಂಡು ತಬ್ಬಲಿಯಾದ ತಾಯಿ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು