News Kannada
Thursday, December 08 2022

ಕರ್ನಾಟಕ

ಕೆ.ಆರ್.ನಗರದ ರೈತ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!

Photo Credit :

ಕೆ.ಆರ್.ನಗರದ ರೈತ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!

ಕೆ.ಆರ್.ನಗರ: ಸಾಲಬಾಧೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದು ಆತ್ಮಹತ್ಯೆ ಅಲ್ಲ ಪೂರ್ವನಿಯೋಜಿತ ಕೊಲೆ ಎಂದು ಹೊಳೆತಂದ್ರೆ ನಿವಾಸಿ ಡಿ.ಆರ್.ಅರುಣಕುಮಾರ್ ಎಂಬುವರು ದೂರಿದ್ದಾರೆ.

ಕೆ.ಆರ್.ನಗರದ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಚುಂಚನಕಟ್ಟೆ ಹೋಬಳಿಯ ಹೊಳೆತಂದ್ರೆ ಗ್ರಾಮದ ಸುಬ್ರಮಣ್ಯ(52) ಎಂಬ ರೈತ ಜುಲೈ 2 ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಆತನನ್ನು ಅದೇ ಗ್ರಾಮದ ಮಹೇಶ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಅವರು ದೂರಿದ್ದಾರೆ.

ಜು.2ರಂದು ಮೃತ ಸುಬ್ರಮಣ್ಯ ಅವರನ್ನು ಕರೆದುಕೊಂಡ ಹೋದ ಮಹೇಶ್ ಮದ್ಯಪಾನ ಮಾಡಿಸಿ ನಂತರ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ನನಗೆ ದೂರವಾಣಿ ಕರೆ ಮಾಡಿ ಈ ವಿಚಾರ ತಿಳಿಸಿದ ಆದರೆ ನಾನು ಕುಡಿದ ಅಮಲಿನಲ್ಲಿ ಆತ ಮಾತನಾಡುತ್ತಿದ್ದಾನೆ ಎಂದು ನಿರ್ಲಕ್ಷ್ಯ ಮಾಡಿದೆ. ಆದರೆ ಮಾರನೇ ದಿನ ಸತ್ಯ ತಿಳಿಯಿತೆಂದು ಅವರು ಮಾಹಿತಿ ನೀಡಿದರು.

ಸುಬ್ರಮಣ್ಯ ಕೊಲೆಯಾಗಿದ್ದರೂ ಸಹ ವಿಚಾರ ತಿಳಿಯದ ಆತನ ಮನೆಯವರು ಸರ್ಕಾರದಿಂದ ಬರುವ ಪರಿಹಾರದ ಆಸೆಯಿಂದ ಪೊಲೀಸ್ ಠಾಣೆಯಲ್ಲಿ ಸಾಲಬಾಧೆಯಿಂದ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದರಲ್ಲದೆ, ಕೊಲೆ ಮಾಡಿದ ಮಹೇಶ ಶವದ ಬಳಿ ವಿಷದ ಬಾಟಲಿ ಇಟ್ಟಿದ್ದು, ಇಷ್ಟೆಲ್ಲ್ಲ ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಕೊಲೆ ನಡೆದಿರುವ ವಿಷಯವನ್ನು ನಾನು ಕೆ.ಆರ್.ನಗರ ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿ ತಿಳಿಸಿದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೊಲೆಯಾಗಿರುವ ಸುಬ್ರಮಣ್ಯ ಅವರ ಸಹೋದರನ ಮಗ ಮೂರ್ತಿ ಮಾತನಾಡಿ ಜು. 4ರಂದು ಸುಬ್ರಮಣ್ಯ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಬಂದ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶರತ್ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳಿದರೂ ಪ್ರಕರಣದ ತನಿಖೆ ನಡೆಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸುಬ್ರಮಣ್ಯ ಅವರ ಮಗ ಸಂದೀಪ್, ಅವರ ಸಹೋದರನ ಮಗ ಮೂರ್ತಿ, ಕೆ.ಬಿ.ಮಹದೇವ್, ನಾಗೇಗೌಡ ಇದ್ದರು.

See also  ಮಡಿಕೇರಿ ಕೋಟೆಯಲ್ಲಿ ಗಮನ ಸೆಳೆಯುತ್ತಿರುವ ಹಳೇ ನೋಟು, ನಾಣ್ಯಗಳ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು