News Kannada
Tuesday, November 29 2022

ಕರ್ನಾಟಕ

ಮಡಿಕೇರಿ ನಗರಸಭೆಯಲ್ಲಿ ಅಶ್ಲೀಲ ಚಿತ್ರ ಪ್ರದರ್ಶನದ ತನಿಖೆ - 1 min read

Photo Credit :

ಮಡಿಕೇರಿ ನಗರಸಭೆಯಲ್ಲಿ ಅಶ್ಲೀಲ ಚಿತ್ರ ಪ್ರದರ್ಶನದ ತನಿಖೆ

ಮಡಿಕೇರಿ: ಮಡಿಕೇರಿ ನಗರಸಭೆಯ ಆವರಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಅಳವಡಿಸಲಾಗಿರುವ ನಗರಸಭೆಯ ವಿವಿಧ ಯೋಜನೆಗಳು, ಅಗತ್ಯದಾಖಲೆಯ ಮಾಹಿತಿ ನೀಡುವ ಎಲ್ಇಡಿ ಪರದೆಯಲ್ಲಿ ಪ್ರದರ್ಶನವಾಗಿದೆ ಎನ್ನಲಾದ ಅಶ್ಲೀಲ ಚಿತ್ರದ ಕುರಿತಂತೆ ತನಿಖೆಗೆ ಮುಂದಾಗಿರುವ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತನಿಖೆ ನಡೆಸಿ ವರದಿ ನೀಡುವಂತೆ ನಗರ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್ ಅವರಿಗೆ ಸೂಚಿಸಿದ್ದಾರೆ.

ನಗರಸಭೆ ಸಭಾಂಗಣದ ಎದುರು ಕಳೆದ ಐದು ತಿಂಗಳ ಹಿಂದೆ ನಗರಸಭೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಬೃಹತ್ ಟಿ.ವಿ. ಅಳವಡಿಸಲಾಗಿದೆ. ಇದರಲ್ಲಿ ಜುಲೈ 5 ರಂದು ಮಧ್ಯಾಹ್ನ 3 ಗಂಟೆಯ ವೇಳೆ ಎರಡು ನಿಮಿಷಗಳ ಕಾಲ ದಿಢೀರನೆ ಸಂಬಂಧವಿಲ್ಲದ ಮೂರು ಅಶ್ಲೀಲ ಚಿತ್ರಗಳು ಪ್ರದರ್ಶನ ಗೊಂಡಿದ್ದವಂತೆ. ಕಚೇರಿಯ ಹೊರಗಿದ್ದ ಸಿಬ್ಬಂದಿಯೊಬ್ಬರು ಅದನ್ನು ಗಮನಿಸಿ ಟಿ.ವಿ. ಆಫ್ ಮಾಡುವಂತೆ ಡಾಟಾ ಆಪರೇಟರ್ ವಿಭಾಗದ ಸಿಬ್ಬಂದಿಗೆ ಸೂಚಿಸಿದ್ದರು.

ಇದನ್ನು ಗಮನಿಸಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಅವರು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಗೆ ಮಾಹಿತಿ ನೀಡಿದ್ದರಿಂದ ಅವರು ಪೌರಾಯುಕ್ತರಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇದೆಲ್ಲವೂ ಅಲ್ಲಿಗೆ ತಣ್ಣಗೆ ಆಗಿತ್ತು. ಅವತ್ತು ಆ ಬಗ್ಗೆ ಮಾಧ್ಯಮದವರಿಗೂ ಮಾಹಿತಿ ಇರಲಿಲ್ಲ.

ಇದೆಲ್ಲ ನಡೆದು ನಾಲ್ಕೈದು ದಿನಗಳ ಬಳಿಕ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿ ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ರಾಜ್ಯದಾದ್ಯಂತ ಪ್ರಸಾರವಾಗಿದ್ದರಿಂದ ಮಡಿಕೇರಿ ನಗರಸಭೆಯಲ್ಲಿ ಸಂಚಲನ ಆರಂಭವಾಗಿತ್ತು.

ಈ ಸಂಬಂಧ ಇದೀಗ ನಗರಸಭಾ ಯೋಜನಾ ನಿರ್ದೇಶಕರು ಎಲ್ಲ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಸಿಸಿ ಟಿ.ವಿ. ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಅಲ್ಲದೆ ಮಾಧ್ಯಮದವರಿಗೆ ಯಾವುದೇ ರೀತಿಯ ಅಶ್ಲೀಲ ಚಿತ್ರ ಪ್ರಸಾರವಾಗಿಲ್ಲ. ಅಂದು ಮಧ್ಯಾಹ್ನ 3 ಗಂಟೆ 7 ನಿಮಿಷ ಸಂದರ್ಭದಲ್ಲಿ ಮೂರು ಚಿತ್ರಗಳ ದಿಢೀರ್ ಆಗಿ ಟಿ.ವಿ.ಯಲ್ಲಿ ಮೂಡಿವೆ. ಅದನ್ನೇ ಅಶ್ಲೀಲ ಚಿತ್ರವೆಂದು ಕೆಲವರು ಭಾವಿಸಿರುವ ಸಾಧ್ಯತೆಯಿದೆ. ಅದು ಬಿಟ್ಟರೆ ಬೇರೆ ಯಾವ ದೃಶ್ಯಾವಳಿಯೂ ಪ್ರಸಾರ ಮಾಡಿಲ್ಲ ಈ ಸಂಬಂಧ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ನಗರಸಭೆ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿದೆ. ವೈಫೈ ಪಾಸ್ವರ್ಡ್ ಎಲ್ಲ ಸಿಬ್ಬಂದಿಗೂ ತಿಳಿದಿರುವುದರಿಂದ ನಗರಸಭೆ ಚಾಲಕರು, ಸದಸ್ಯರೂ ವೈಫೈ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಚಿತ್ರಗಳು ಟಿ.ವಿ.ಯಲ್ಲಿ ಪ್ರಸಾರವಾಗಿರುವ ಸಾಧ್ಯತೆಯಿದ್ದರೆ ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.

ಮತ್ತೊಂದೆಡೆ ನಗರಸಭೆಯಲ್ಲಿ ನಡೆದ ಅಶ್ಲೀಲ ಚಿತ್ರಪ್ರದರ್ಶನದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

See also  ಎನ್‍ಸಿಸಿ ಕೆಡೆಟ್‍ಗಳ ನಿಸ್ವಾರ್ಥ ಸೇವೆ : ಮಾದರಿಯಾದ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು