News Kannada
Friday, December 02 2022

ಕರ್ನಾಟಕ

ಸುವರ್ಣಾವತಿ ನದಿ ದಡದಲ್ಲಿ ಉರೂಸ್ ಸಂಭ್ರಮ

Photo Credit :

ಸುವರ್ಣಾವತಿ ನದಿ ದಡದಲ್ಲಿ ಉರೂಸ್ ಸಂಭ್ರಮ

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಸುವರ್ಣಾವತಿ ನದಿಯ ದಡದಲ್ಲಿರುವ ಐತಿಹಾಸಿಕ ಹಜರತ್ ದಿಲ್ಬರ್ ಷಾವಲಿ ದರ್ಗಾದಲ್ಲಿ ನಡೆದ ಉರೂಸ್ (ಗಂಧೋತ್ಸವ) ಸಡಗರ, ಸಂಭ್ರಮದಿಂದ ನಡೆಯಿತು.

ದರ್ಗಾಕ್ಕೆ ಆಗಮಿಸಿದ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು. ಊರೂಸ್ ಹಿನ್ನಲೆಯಲ್ಲಿ ದರ್ಗಾವನ್ನು ವಿಶೇಷ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾಂಬಳ್ಳಿ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್ ರವರ ಮನೆಯಿಂದ ದೇವರ ನಾಮ ಹಾಡುವ ಫಕೀರರ ತಂಡ, ಡೊಳ್ಳು, ಬ್ಯಾಂಡ್ಸೆಟ್, ಕುದುರೆ ಸಾರೋಟು, ಮೈನವರೀಳಿಸುವ ಬೆಂಕಿ ಹಾಗೂ ದೊಣ್ಣೆ ವರಸೆಯ ಕಸರತ್ತಿನ ತಂಡವೂ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮಾಂಬಳ್ಳಿ, ಅಗರ ಹಾಗೂ ಮದ್ದೂರು ಗ್ರಾಮದಲ್ಲಿ ಮೆರವಣಿಗೆ ಮೂಲಕ ಗಂಧದ ಬಿಂದಿಗೆಯನ್ನು ದರ್ಗಾಕ್ಕೆ ತರಲಾಯಿತು. ಬಳಿಕ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಿದರು.

ಬೆಂಗಳೂರಿನ ಜಮೀರ್ ಶಹಜಾದ್ ಹಾಗೂ ಶಾಬಾಝ್ ನವಾಜ್ ಖವ್ವಾಲಿ ನಡೆಸಿಕೊಟ್ಟರು. ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದರು. ನಂತರ ನೆರೆದಿದ್ದ ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಯಿತು.

ಸರ್ಕಲ್ ಇನ್ಸ್ಪೆಕ್ಟರ್ ಶಿವಸ್ವಾಮಿ, ಪಿಎಸ್ಐ ಮಂಜು, ಪುಷ್ಪಲತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

See also  ಕಾಂಗ್ರೆಸ್ ನಾಯಕರ ಟೀಕೆಯಿಂದ ಮಾನಸಿಕ ನೆಮ್ಮದಿ ಹಾಳಾಗಿದೆ: ಉಮೇಶ್ ಜಾಧವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು