News Kannada
Thursday, December 08 2022

ಕರ್ನಾಟಕ

ಮಳೆಗಾಲದಲ್ಲಿ ಹೊಳೆದಾಟೋದು ಅಂದ್ರೆ ನರಕಯಾತನೆ!

Photo Credit :

ಮಳೆಗಾಲದಲ್ಲಿ ಹೊಳೆದಾಟೋದು ಅಂದ್ರೆ ನರಕಯಾತನೆ!

ಮಡಿಕೇರಿ: ಕೊಡಗು ಮೇಲ್ನೋಟಕ್ಕೆ ಶ್ರೀಮಂತ ಜಿಲ್ಲೆಯಂತೆ ತೋರಿಬಂದರೂ ಇಲ್ಲಿನ ಗ್ರಾಮೀಣ ಭಾಗದ ಜನ ಇನ್ನೂ ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಆದಿಮಾನವರಂತೆ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಮಡಿಕೇರಿ ತಾಲೂಕಿನ ಮುಟ್ಲು, ಹಮ್ಮಿಯಾಲ, ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿನ ಕೆಲವು ಗ್ರಾಮಗಳ ಜನರು ಸ್ವಾತಂತ್ರ್ಯ ಬಂದು 70 ವರ್ಷವಾದರೂ ಉತ್ತಮ ರಸ್ತೆ, ವಿದ್ಯುತ್ ಸೌಲಭ್ಯ, ನದಿಗಳಿಗೆ ಸೇತುವೆಗಳಿಲ್ಲದೆ ನರಕದ ಬದುಕನ್ನು ಸಾಗಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಹೇಗೋ ದಿನ ಕಳೆಯುವ ಇವರು ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಚ್ಚಿ ಬೀಳುತ್ತಾರೆ. ಮಳೆ ಹೆಚ್ಚಾಗಿ ಹೊಳೆಯಲ್ಲಿ ಪ್ರವಾಹ ಕಾಣಿಸಿಕೊಂಡರೆ ಸಂಪರ್ಕ ವಂಚಿತರಾಗಿ ವಾರಾನುಗಟ್ಟಲೆ ಪರದಾಡಬೇಕಾಗುತ್ತದೆ. ಇಲ್ಲಿರುವ ಹೊಳೆಗೆ ಕಾಂಕ್ರಿಟ್ ಸೇತುವೆ ನಿರ್ಮಿಸುವುದಿರಲಿ, ತೂಗುಸೇತುವೆಯನ್ನು ಕೂಡ ನಿಮರ್ಿಸಲು ಮುಂದಾಗದ ಕಾರಣದಿಂದಾಗಿ ಹೊಳೆ ದಾಟಲು ಇಲ್ಲಿನವರೇ ಮರದಿಂದ ಮರಕ್ಕೆ ಹಗ್ಗ ಹಾಗೂ ಬೆತ್ತದಿಂದ ಕಟ್ಟಿ ಅದಕ್ಕೆ ಕಾಡಿನಲ್ಲಿ ಸಿಗುವ ಬೈನೆ ಮರದ ಹಲಗೆಯನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಇನ್ನು ಕೆಲವೆಡೆ ಮರದ ದಿಮ್ಮಿಯನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಅಡ್ಡಲಾಗಿ ಹಾಕಿ ಪಾಲಮಾಡಿಕೊಂಡು ಅದರ ಮೇಲೆ ದಾಟುತ್ತಾರೆ. ಕೆಲವೊಮ್ಮೆ ಮಳೆ ಬಿದ್ದು ಅದರ ಮೇಲೆ ಪಾಚಿಕಟ್ಟುವುದರಿಂದ ಕಾಲು ಜಾರಿ ಬೀಳುವುದು ಇದೆ. ಹೀಗೆ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ.

ಈ ತಾತ್ಕಾಲಿಕ ಸೇತುವೆ ಮೇಲೆಯೇ ಈ ವ್ಯಾಪ್ತಿಯ ಜನ ಓಡಾಡುತ್ತಾರೆ. ಮಕ್ಕಳು ಸರ್ಕಸ್ ಮಾಡಿಕೊಂಡು ಶಾಲೆಗೆ ಹೋಗುತ್ತಾರೆ. ಕಾಯಿಲೆ ಕಾಡಿದರೆ ಅವರನ್ನು ಕೊಂಡೊಯ್ಯಲು ಸಾಧ್ಯವಾಗದೆ ಕೈಕಟ್ಟಿ ಕೂರಬೇಕಾಗುತ್ತದೆ. ಬೇಸಿಗೆಯಲ್ಲಿ ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ಸರ್ಕಸ್ ಮಾಡಿಕೊಂಡು ಹೊಳೆ ದಾಟುವ ಮಂದಿಗೆ ಮಳೆಗಾಲ ಮಾತ್ರ ನರಕಯಾತನೆಯೇ ಸರಿ. ಇನ್ನು ಹಮ್ಮಿಯಾಲ ಗ್ರಾಮದ ಗದ್ದೆ ಬಯಲಿನ ಪಕ್ಕದಲ್ಲೇ ಮಳಗಾಲದಲ್ಲಿ ಹೊಳೆ ತುಂಬಿ ಹರಿಯುತ್ತದೆ. ಈ ಹೊಳೆಯನ್ನು ದಾಟಲು ವರ್ಷಂಪ್ರತಿ ಗ್ರಾಮ ಪಂಚಾಯಿತಿಯಿಂದ ಮರದ ಪಾಲವನ್ನು (ಕಾಲು ದಾರಿ) ನಿರ್ಮಿಸಿಕೊಳ್ಳಲು ಒಂದಿಷ್ಟು ಹಣ ನೀಡಲಾಗುತ್ತದೆ.

ಈ ಹಣಕ್ಕೆ ತಕ್ಕಂತೆ ಗ್ರಾಮಸ್ಥರು ತಮ್ಮ ಸೌಕರ್ಯಕ್ಕಾಗಿ ಕಾಡು ಮರಗಳಿಂದ ಪಾಲವನ್ನು (ಕಾಲು ಸೇತುವೆ) ನಿರ್ಮಿಸಿಕೊಳ್ಳುತ್ತಾರೆ. ಆದರೆ ಯಾರು ಕೂಡ ಇಲ್ಲಿನವರಿಗೆ ಶಾಶ್ವತ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರು ಪ್ರತಿವರ್ಷವೂ ಸಂಬಂಧಿಸಿದವರಿಗೆ ಮನವಿ ಮಾಡುತ್ತಾ ಬರುತ್ತಿದ್ದಾರೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತುಂಬಿ ಹರಿಯುವ ಹೊಳೆಯ ಮೇಲೆ ಮರದ ಪಾಲದಲ್ಲಿ ಜೀವವನ್ನು ಕೈಯಲ್ಲಿಡಿದು ನಡೆಯುತ್ತಾ ದಡಸೇರುವುದು ಮಾಮೂಲಿಯಾಗಿದೆ.

See also  ಬಸ್ ಗಾಗಿ ವಿದ್ಯಾರ್ಥಿಗಳು, ಗ್ರಾಮಸ್ಥರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು