News Kannada
Thursday, December 08 2022

ಕರ್ನಾಟಕ

ತೆರಕಣಾಂಬಿಯಲ್ಲಿ ಮದ್ಯದಂಗಡಿ ತೆರೆಯಲು ಕಸರತ್ತು: ಪ್ರತಿಭಟನೆ

Photo Credit :

ತೆರಕಣಾಂಬಿಯಲ್ಲಿ ಮದ್ಯದಂಗಡಿ ತೆರೆಯಲು ಕಸರತ್ತು: ಪ್ರತಿಭಟನೆ

ಗುಂಡ್ಲುಪೇಟೆ: ಮಹಿಳಾ ಸಂಘಟನೆಗಳು ಹಾಗೂ ಗ್ರಾಮಸ್ಥರ ತೀವ್ರ ಪ್ರತಿಭಟನೆಯ ನಂತರ ತೆರವುಗೊಳಿಸಿದ್ದ ಮದ್ಯದಂಗಡಿಯ ಸ್ಥಾಪನೆಗೆ ತೆರೆಮರೆಯ ಕಸರತ್ತು ನಡೆಸುತ್ತಿರುವುದರ ವಿರುದ್ಧ ಪ್ರಗತಿಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದೆ.

ಸುಪ್ರೀಂಕೋರ್ಟ್ ಆದೇಶದಿಂದ ಗ್ರಾಮದ ಹೆದ್ದಾರಿ ಬದಿಯಲ್ಲಿದ್ದ ಮದ್ಯದಂಗಡಿಯನ್ನು ಬೊಮ್ಮಲಾಪುರ ರಸ್ತೆಯ ಪರಿಶಿಷ್ಟ ವರ್ಗದ ನಿವಾಸಿಗಳ ಬಡಾವಣೆ ಬಳಿ ಪ್ರಾರಂಭಿಸುವಾಗ ಗ್ರಾಮದ ಮಹಿಳಾ ಸಂಘಟನೆಗಳು, ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ ಪರಿಣಾಮವಾಗಿ ಜುಲೈ 5ರಂದು ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳು ಬಾಗಿಲು ಮುಚ್ಚಿಸಿ ಅಲ್ಲಿ ಸಂಗ್ರಹಿಸಿದ್ದ ಮದ್ಯವನ್ನು ಅಬ್ಕಾರಿ ಇಲಾಖೆಯ ವಶಕ್ಕೆ ನೀಡಿದ್ದರು.

ಆದರೆ ಇದರ ವಿರುದ್ಧ ಮದ್ಯದಂಗಡಿಯ ಮಾಲೀಕರು ನ್ಯಾಯಾಲಯದ ಮೊರೆಹೋಗುವ ಸಲುವಾಗಿ ಕೆಲವರಿಗೆ ಹಣದ ಆಮಿಷ ನೀಡಿ ಸಾರ್ವಜನಿಕರಿಂದ ಮದ್ಯದಂಗಡಿ ತೆರೆಯಲು ಬೇಡಿಕೆಯಿದೆ ಎಂದು ಬಿಂಬಿಸಿ ಮತ್ತೆ ವ್ಯಾಪಾರ ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿಹರಡಿದ ಪರಿಣಾಮವಾಗಿ ಮುಚ್ಚಿದ ಮದ್ಯದಂಗಡಿ ಮುಂದೆ ಪೊರಕೆ ಹಿಡಿದು ಪ್ರತಿಭಟನೆ ನಡೆಸಲಾಯಿತು. ಕೆಲವು ಅಧಿಕಾರಸ್ಥರು ಹಾಗೂ ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ಮತ್ತೆ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಅಬ್ಕಾರಿ ಇಲಾಖೆಗಳು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಘೋಷಣೆ ಕೂಗಿದರು. ಆದರೆ ಸ್ಥಳಕ್ಕೆ ಯಾವುದೇ ಅಧಿಕಾರಿಯೂ ಬಾರದ ಹಿನ್ನೆಲೆಯಲ್ಲಿ ಮದ್ಯದಂಗಡಿ ತೆರೆದರೆ ಜಿಲ್ಲಾಡಳಿತದ ವಿರುದ್ಧ ಉಗ್ರಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

See also  ‘ಭಾರತ ದರ್ಶನ’ : ನೌಕಾದಳದ ಐಎನ್‍ಎಸ್ ಶಿವಾಜಿ ತಂಡ ಮಡಿಕೇರಿಗೆ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು