News Kannada
Wednesday, December 07 2022

ಕರ್ನಾಟಕ

ಪತ್ರಕರ್ತರು ಜ್ಞಾನಮಟ್ಟ ಹೆಚ್ಚಿಸಿಕೊಳ್ಳಲಿ: ಲಕ್ಷ್ಮೀ ಮಚ್ಚಿನ

Photo Credit :

ಪತ್ರಕರ್ತರು ಜ್ಞಾನಮಟ್ಟ ಹೆಚ್ಚಿಸಿಕೊಳ್ಳಲಿ: ಲಕ್ಷ್ಮೀ ಮಚ್ಚಿನ

ಉಜಿರೆ: ವೃತ್ತಿನಿರತ ಪತ್ರಕರ್ತರು ಜ್ಞಾನದ ಗುಣಮಟ್ಟ ಹೆಚ್ಚಿಸುವ ಕಡೆಗೆ ಆದ್ಯತೆ ನೀಡಬೇಕು ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಹೇಳಿದರು. ಉಜಿರೆ ಎಸ್.ಡಿ.ಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಈಚೆಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತರಾದವರು ಸಮಗ್ರ ಮಾಹಿತಿಯ ಜೊತೆಗೆ ತಮ್ಮ ಜ್ಞಾನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಅಲ್ಲದೇ ಪತ್ರಕರ್ತನಾದವನಿಗೆ ಒಳಗಣ್ಣಿರಬೇಕು. ಮಾಧ್ಯಮಗಳು ವಿವೇಚನೆಯಿಲ್ಲದೆ ಪ್ರಚಾರ ಕೊಟ್ಟರೆ ಯಾವುದೇ ರೀತಿಯ ಪ್ರಯೋಜನಗಳಿಲ್ಲ ಎಂದು ಹೇಳಿದರು. ಹಿಂದಿನ ಕಾಲದ ಪತ್ರಕರ್ತರು ಯಾವುದೇ ಪದವಿಯನ್ನು ಪಡೆಯದೆ ಹೋದರೂ, ಉನ್ನತ ಮಟ್ಟದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಜ್ಞಾನದ ಗುಣಮಟ್ಟವೂ ಉತ್ತಮವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವರದಿಗಾರರಾಗಿ ಸಾಮಾನ್ಯ ಜ್ಞಾನದ ಕೊರತೆಯಿದೆ ಎಂದರು.

ಪತ್ರಕರ್ತರು ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಮೊದಲು ಪತ್ರಿಕಾ ಮಾಧ್ಯಮ ಎಂದು ಗುರುತಿಸಿಕೊಂಡಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಇದು ಉದ್ಯಮವಾಗಿ ಬೆಳೆಯುತ್ತಿದೆ. ಮಾಧ್ಯಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ.ಅದರ ಕಡೆಗೆ ಯುವ ಪತ್ರಕರ್ತರು ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿಕೊಳ್ಳಬೇಕು. ಅದರ ಜೊತೆಗೆ ವಿದ್ಯಾರ್ಥಿಗಳು ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂಬ ವಿಚಾರವನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ ಎಸ್ ಮೋಹನ್ ನಾರಾಯಣ್ ಮಾತನಾಡಿ, ಉತ್ತಮ ಓದುವಿಕೆಯಿಂದ ಉನ್ನತ ಮಟ್ಟದ ಬರಹಗಾರರಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಬಿ.ಎ ವಿದ್ಯಾರ್ಥಿಗಳ ಚಿಗುರು ಎಂಬ ಹಸ್ತ ಪ್ರತಿಯ ಬಿಡುಗಡೆ ನಡೆಯಿತು. ಪತ್ರಿಕೋಧ್ಯಮದ ವಿದ್ಯಾರ್ಥಿಗಳು ಪತ್ರಿಕೆ ಹಾಗೂ ಪ್ರತಿಕಾ ದಿನಾಚರಣೆಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರವವನ್ನು ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

See also  ಭಾರೀ ಗಾಳಿಮಳೆಗೆ ಶಾಲಾ ಕಲೋತ್ಸವ ವೇದಿಕೆ-ಚಪ್ಪರ ನೆಲಸಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು