News Kannada
Tuesday, December 06 2022

ಕರ್ನಾಟಕ

ಮುಹಮ್ಮದ್ ರಬೀಯುಲ್ಲ ಅಪಹರಣ ಪ್ರಕರಣ: 7ಜನರ ಬಂಧನ

Photo Credit :

ಮುಹಮ್ಮದ್ ರಬೀಯುಲ್ಲ ಅಪಹರಣ ಪ್ರಕರಣ: 7ಜನರ ಬಂಧನ

ಕಾಸರಗೋಡು: ಅನಿವಾಸಿ ಭಾರತೀಯ ಉದ್ಯಮಿ ಶಿಫ ಅಲ್ ಜಸೀರ ಮೆಡಿಕಲ್ ಸೆಂಟರ್‌ನ ನಿರ್ದೇಶಕ ಡಾ. ಮುಹಮ್ಮದ್ ರಬೀಯುಲ್ಲ ಅವರ ಅಪಹರಣದ ಹಿಂದೆ ಕಾಸರಗೋಡು ಜಿಲ್ಲೆ ಕೇಂದ್ರೀಕರಿಸಿ ಸಂಚು ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಉಪ್ಪಳ ಮೂಲದ ಉದ್ಯಮಿ ಕೈವಾಡ ಇದೆ ಎಂಬ ಗುಮಾನಿ ಕೇಳಿ ಬರುತ್ತಿದೆ. ಈ ನಡುವೆ ಗುಪ್ತಚರ ಇಲಾಖೆ ತನಿಖೆ ಆರಂಭಿಸಿದೆ. ಪ್ರಕರಣದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟೀಯ ಕಾರ್ಯದರ್ಶಿ ಅಸ್ಲಾಂ ಗುರುಕ್ಕಲ್ ಸೇರಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು , ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಅಸ್ಲಾಮ್ ಗುರುಕ್ಕಲ್ ನ ಗನ್ ಮ್ಯಾನ್ ಕೇಶವ ಮೂರ್ತಿ, ಮಂಗಳೂರು ನಿವಾಸಿ ರಮೇಶ್, ಸುನಿಲ್ ಕುಮಾರ್, ಕಾಸರಗೋಡು ನಿವಾಸಿಗಳಾದ ರಿಯಾಜ್, ಹರ್ಷಾದ್, ಉಸ್ಮಾನ್ ಮೊದಲಾದವರನ್ನು ಬಂಧಿಸಲಾಗಿದೆ.

ಗಲ್ಫ್ ನಲ್ಲಿ ಉದ್ಯಮಿಯಾಗಿರುವ ಮಲಪ್ಪುರಂನ ಮುಹಮ್ಮದ್ ರಬೀಯುಲ್ಲರನ್ನು ಅಪಹರಿಸಲು ಯತ್ನ ನಡೆದ ಹಿಂದಿನ ದಿನ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಅಸ್ಲಾಂ ಗುರುಕ್ಕಳ್, ಬಿಜೆಪಿ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಸೇರಿದಂತೆ ಹಲವು ಉದ್ಯಮಿಗಳಿಗೆ ಉಪ್ಪಳದ ಗಲ್ಫ್ ಉದ್ಯಮಿಯ ಮನೆಯಲ್ಲಿ ಸತ್ಕಾರ. ಕೂಟ ಏರ್ಪಡಿಸಲಾಗಿತ್ತು. ರಾಷ್ಟ್ರೀಯ ಮುಖಂಡರು ಉಪ್ಪಳಕ್ಕೆ ತಲುಪಿದರೂ ಯಾವುದೇ ಮಾಹಿತಿ ಸ್ಥಳೀಯ ಬಿಜೆಪಿ ನಾಯಕರಿಗೂ ಇರಲಿಲ್ಲ ೆನ್ನಲಾಗಿದೆ. ರಹಸ್ಯವಾಗಿ ನಾಯಕರು ಉಪ್ಪಳದ ಉದ್ಯಮಿ ಮನೆಗೆ ತಲುಪಿದ್ದರು. ಸೋಮವಾರ ರಾತ್ರಿ ಡಾ. ಮುಹಮ್ಮದ್ ರಬೀಯುಲ್ಲ ಅವರ ಅಪಹರಣಕ್ಕೆ ಅಸ್ಲಾಂ ಗುರುಕ್ಕಲ್ ನ ನೇತೃತ್ವದ ತಂಡವು ವಿಫಲ ಯತ್ನ ನಡೆಸಿತ್ತು.

ರಬೀಯುಲ್ಲರವರ ಮನೆಯ ಕಾವಲುಗಾರನ ಮತ್ತು ಪರಿಸರವಾಸಿಗಳ ಸಮಯಪ್ರಜ್ಞೆಯಿಂದ ಅಪಹರಣ ವಿಫಲಗೊಂಡಿತ್ತು. ಹಣಕಾಸಿನ ವಹಿವಾಟು ಈ ಅಹಹರಣ ಯತ್ನದ ಹಿಂದೆ ಅಡಗಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ರಬೀಯುಲ್ಲ ಕಳೆದ ಕೆಲ ತಿಂಗಳಿನಿಂದ ಮಲಪ್ಪುರಂ ಮಂಜೇರಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸಲಹೆಯಂತೆ ಇವರು ಚಿಕಿತ್ಸೆ ಜೊತೆಗೆ ವಿಶ್ರಾಂತಿ ಪಡೆಯುತ್ತಿದ್ದು. ಇದರಿಂದ ಹೊರ ಸಂಪರ್ಕಕ್ಕೆ ಲಭಿಸುತ್ತಿರಲಿಲ್ಲ. ಈ ನಡುವೆ ರಬೀಯುಲ್ಲ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಡತೊಡಗಿತ್ತು. ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ರಬೀಯುಲ್ಲ ಪ್ರತ್ಯಕ್ಷಗೊಂಡು ಮಾಹಿತಿಯನ್ನು ನೀಡಿದ್ದರು. ಇದರಿಂದ ರಬೀಯುಲ್ಲ ಮನೆಯಲ್ಲಿ ಇದ್ದಾರೆಂಬ ಮಾಹಿತಿ ಪಡೆದ ತಂಡವು ಅಪಹರಣಕ್ಕೆ ಸಂಚು ನಡೆಸಿತ್ತು .
ಹಣಕಾಸಿನ ವ್ಯವಹಾರ ಅಪಹರಣ ಯತ್ನದ ಹಿಂದೆ ಇದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದರೂ ಕಾಸರಗೋಡು ಕೇಂದ್ರೀಕರಿಸಿ ನಡೆದಿರುವ ಸಂಚಿನ ಬಗ್ಗೆ ಮಂಜೇರಿ ಪೊಲೀಸರು , ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.
ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡ ನೇತೃತ್ವದಲ್ಲಿ ನಡೆದ ಈ ಕೃತ್ಯ ವಿವಾದದ ಜೊತೆಗೆ ಸಂಶಯವನ್ನು ಹುಟ್ಟುಹಾಕಿದೆ. ಇದರ ಜೊತೆಗೆ ಕೇಂದ್ರದ ಮಾಜಿ ಸಚಿವ ರೋರ್ವರು ಉಪ್ಪಳದ ಉದ್ಯಮಿ ಮನೆಗೆ ಭೇಟಿ ನೀಡಿ ದ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು , ಪ್ರಮುಖವಾಗಿ ಆ ಮನೆ ಕೇಂದ್ರೀಕರಿಸಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ

See also  ಕೊಡಗಿನ ಮನೆಯಂಗಳದ ಬೆಡಗಿ ಡೆಲೀಯಾ ಮೆರಗು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು