News Kannada
Wednesday, November 30 2022

ಕರ್ನಾಟಕ

ಮಳೆಗೆ ಕುಸಿದ ಕೊಡಗು-ಕೇರಳ ರಸ್ತೆಯ ದುರಸ್ತಿ ಕಾರ್ಯ - 1 min read

Photo Credit :

ಮಳೆಗೆ ಕುಸಿದ ಕೊಡಗು-ಕೇರಳ ರಸ್ತೆಯ ದುರಸ್ತಿ ಕಾರ್ಯ

ಮಡಿಕೇರಿ: ಇತ್ತೀಚೆಗೆ ಸುರಿದ ಮಳೆಗೆ ಕೊಡಗು ಕೇರಳ ರಸ್ತೆಯ ಪೆರುಂಬಾಡಿ ಬಳಿ ರಸ್ತೆ ಕುಸಿದು ಸಂಪರ್ಕ ಕಡಿದುಕೊಂಡಿರುವ ಕಾರಣ ಇದೀಗ ರಸ್ತೆ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಹಾಗೆ ನೋಡಿದರೆ ಕೊಡಗು-ಕೇರಳ ಅಂತಾರಾಜ್ಯ ಹೆದ್ದಾರಿ ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು ಇದೇ ಮಾರ್ಗವಾಗಿ ದಿನದ 24 ಗಂಟೆಗಳ ಕಾಲ ಸುಮಾರು 200ಕ್ಕೂ ಅಧಿಕ ಕರ್ನಾಟಕ, ಕೇರಳ ರಾಜ್ಯ ರಸ್ತೆ ಸಾರಿಗೆ, ಖಾಸಗಿ ಸಾರಿಗೆ ಬಸ್, ಪ್ರವಾಸಿ ಬಸ್ ಗಳು, ಸಾವಿರಾರು ಕಾರು, ಜೀಪು, ಲಾರಿ, ಆಟೋರಿಕ್ಷಾ, ಗೂಡ್ಸ್ ಆಟೋಗಳು ಸಾಗುತ್ತಿದ್ದವು. ಇದೀಗ ರಸ್ತೆ ಕುಸಿತಗೊಂಡ ಬಳಿಕ ಸಂಪರ್ಕವೇ ಕಡಿತಗೊಂಡಿದ್ದು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಮಳೆಯ ಕಾರಣ ರಸ್ತೆಯು ಸುಮಾರು 13 ಮೀಟರ್ ಅಗಲ ಕುಸಿತಗೊಂಡಿದ್ದು, ಇದೀಗ ಆ ಜಾಗಕ್ಕೆ ಕಲ್ಲು ತುಂಬಿಸಿ ದುರಸ್ತಿಗೊಳಿಸುವ ಕಾಮಗಾರಿ ನಡೆಯುತ್ತಿದೆ. ಹೊರಗಿನಿಂದ ಕಲ್ಲುಗಳನ್ನು ತಂದು ಸುರಿಯಲಾಗುತ್ತಿದೆ. ಸುಮಾರು ಇನ್ನೂರು ಲೋಡ್ ನಷ್ಟು ಕಲ್ಲುಗಳು ಬೇಕಾಗಬಹುದೆಂದು ಹೇಳಲಾಗುತ್ತಿದೆ. ವೀರಾಜಪೇಟೆಯಿಂದ ಹಲವಷ್ಟು ಪ್ರಯಾಣಿಕರು ಇರಿಟ್ಟಿ, ತಲಚೇರಿಗೆ ಇದೇ ರಸ್ತೆಯನ್ನು ಅವಲಂಭಿಸಿದ್ದು ಇದೀಗ ಕಾಲುನಡಿಗೆಯಲ್ಲಿ ಪೆರುಂಬಾಡಿ ಕೆರೆ ಏರಿ ಮಾರ್ಗದ ರಸ್ತೆಯನ್ನು ದಾಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬರುತ್ತಿದೆ. ಇನ್ನು ಕೇರಳದ ಬಾಡಿಗೆ ಜೀಪುಗಳು ಪೆರುಂಬಾಡಿ ಕೆರೆಯ ಮಾಕುಟ್ಟ ಬದಿಯಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಕಂಡು ಬರುತ್ತಿದೆ.

ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆಯೂ ಅವರು, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಗುತ್ತಿಗೆದಾರ ವಿನು ಅವರಿಗೆ ಸೂಚಿಸಿದ್ದಾರೆ. ರಸ್ತೆ ಬಂದ್ ಆಗಿರುವುದರಿಂದ ಸಂಪರ್ಕಕ್ಕೆ ತೊಂದರೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರು ಸಹಕರಿಸಲು ಮನವಿ ಮಾಡಿದರಲ್ಲದೆ, ಕೆರೆಯ ನೀರು ಹರಿದು ಹೋಗುತ್ತಿರುವುದರಿಂದ ರಸ್ತೆಗೆ ತೊಂದರೆಯಾಗುತ್ತಿದ್ದು, ಬದಲೀ ವ್ಯವಸ್ಥೆ ಮಾಡುವಂತೆ ಇದೇ ವೇಳೆ ಸೂಚಿಸಿದ್ದಾರೆ

See also  ಸಿದ್ದರಾಮಯ್ಯನವರಿಗೆ ತಲೆಕೆಟ್ಟಿದೆ: ಸಚಿವ ಈಶ್ವರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು