News Kannada
Thursday, December 08 2022

ಕರ್ನಾಟಕ

ಬ್ರಿಟೀಷರ ಕಾಲದ ಸೇತುವೆಗೆ ಕಾಯಕಲ್ಪ ಯಾವಾಗ?

Photo Credit :

ಬ್ರಿಟೀಷರ ಕಾಲದ ಸೇತುವೆಗೆ ಕಾಯಕಲ್ಪ ಯಾವಾಗ?

ಮಡಿಕೇರಿ: ಶತಮಾನದ ಹೊಸ್ತಿಲು ದಾಟಿದ ರಾಜ್ಯ ಹೆದ್ದಾರಿಯಲ್ಲಿರುವ ಐಗೂರು ಗ್ರಾಮದ ಕಬ್ಬಿಣ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಇದಕ್ಕೆ ಕಾಯಕಲ್ಪ ಒದಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಅನಾಹುತಗಳು ತಪ್ಪಿದಲ್ಲ ಎಂಬುವುದಕ್ಕೆ ಈಗಾಗಲೇ ಸಂಭವಿಸುತ್ತಿರುವ ಚಿಕ್ಕಪುಟ್ಟ ಘಟನೆಗಳೇ ಸಾಕ್ಷಿಯಾಗಿವೆ.

ಹಾಸನದಿಂದ ಕೊಡ್ಲಿಪೇಟೆ, ಸೋಮವಾರಪೇಟೆ ಮಾರ್ಗವಾಗಿ ಮಡಿಕೇರಿ, ಮಂಗಳೂರು, ಉಡುಪಿಗಾಗಿ ಗೋವಾಕ್ಕೆ ಹಾಗೂ ಸಿದ್ದಾಪುರ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಹೀಗೆ ಹಲವು ಕಡೆಗಳಿಗೆ ತೆರಳುವ ಬಸ್, ಭಾರೀ, ಲಘುವಾಹನಗಳು ಎಲ್ಲವೂ ಇದೇ ಸೇತುವೆ ಮೇಲೆ ಸಂಚರಿಸುವುದರಿಂದ ಸೇತುವೆ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಹಾಗೆ ನೋಡಿದರೆ ಐಗೂರು ಗ್ರಾಮದ ಕಬ್ಬಿಣ (ಇರಂಪಾಲ) ಸೇತುವೆ ಇಂದು ನಿನ್ನೆಯದಲ್ಲ. ಬ್ರಿಟೀಷರ ಕಾಲದ್ದಾಗಿದ್ದು, ಅದು ನಿರ್ಮಾಣವಾಗಿ ಹಲವು ದಶಕಗಳೇ ಕಳೆದು ಹೋಗಿವೆ. ಅವತ್ತಿನ ಪರಿಸ್ಥಿತಿ ಮತ್ತು ವ್ಯವಸ್ಥೆಗೆ ತಕ್ಕಂತೆ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇತ್ತೀಚೆಗೆ ವಾಹನಗಳ ಸಂಖ್ಯೆ ಹತ್ತು ಪಟ್ಟು ಜಾಸ್ತಿಯಾಗಿದೆ. ಆದ್ದರಿಂದ ಇದರ ಮೇಲೆ ವಾಹನ ತೆರಳುವಾಗ ಸೇತುವ ಅಲ್ಲಾಡುತ್ತಿದೆ. ಅಷ್ಟೇ ಅಲ್ಲದೆ ಈಗಾಗಲೇ ಸೇತುವೆಯ ಮುಖ್ಯ ಪಿಲ್ಲರ್ಗಳಲ್ಲಿ ಬಿರುಕು ಬಿಟ್ಟಿದ್ದು, ಸೇತುವೆ ಕೆಲವೆಡೆ ಕಳಚಿ ಬೀಳತೊಡಗಿದೆ.

ಈ ಸೇತುವೆಯನ್ನು ನೋಡಿದ ತಕ್ಷಣ ಶಿಥಿಲಾವಸ್ಥೆಯಲ್ಲಿದೆ ಎಂಬುದು ಗೊತ್ತಾಗಿ ಬಿಡುತ್ತದೆ. ಆದರೂ ನೂತನ ಸೇತುವೆ ನಿರ್ಮಾಣಕ್ಕೆ ಯಾರೂ ಕೂಡ ಮುಂದಾಗದಿರುವುದು ಅಚ್ಚರಿ ಮೂಡಿಸಿದೆ ಅಲ್ಲದೆ, ಮುಂದಿನ ದಿನಗಳಲ್ಲಿ ಸೇತುವೆ ಕುಸಿದು ಬಿದ್ದರೆ ಎಂಬ ಭಯವೂ ಜನರನ್ನು ಕಾಡುತ್ತಿದೆ. ಜತೆಗೆ ಸೇತುವೆ ಕಿರಿದಾದ ಕಾರಣ ಅಪಘಾತಗಳು ಸಂಭವಿಸುತ್ತಿರುವುದು ಮಾಮೂಲಾಗಿದೆ.

ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ಸೊಂದು ಸಂಚರಿಸುವ ವೇಳೆ ರಸ್ತೆಯ ತಿರುವಿನ ಈ ಕಿರಿದಾದ ಸೇತುವೆ ಡಿಕ್ಕಿ ಹೊಡೆದು ಬಸ್ಸಿಗೆ ಹಾನಿಯಾಗಿತ್ತಾದರೂ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಪರಾರಿಯಾಗಿದ್ದರು. ಈ ಸೇತುವೆ ಪಕ್ಕವೇ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಜೂನಿಯರ್ ಕಾಲೇಜು ಎಲ್ಲವೂ ಇದೆ. ವಾಹನಗಳು ಸಂಚರಿಸುವಾಗ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಕೊಡಗಿನ ವಿಧಾನಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ವಿಧಾನ ಪರಿಷತ್ತಿನ ಕಳೆದ ಅವಧಿಯ ಕಲಾಪದಲ್ಲಿ ಭಾಗವಹಿಸಿದ್ದಾಗ ಈ ಕಬ್ಬಿಣ ಸೇತುವೆಯ ಬಗ್ಗೆ ಪ್ರಸ್ತಾಪಿಸಿದಾಗ ಲೋಕೋಪಯೋಗಿ ಸಚಿವ ಡಾ. ಮಹದೇವಪ್ಪ ಅವರು ಸೇತುವೆ ಅಭಿವೃದ್ಧಿಯತ್ತ ಗಮನಹರಿಸುವ ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ರೀತಿಯ ಕಾಮಗಾರಿ ಆರಂಭವಾಗಿಲ್ಲ. ಪರಿಣಾಮ ಸೇತುವೆ ಶಿಥಿಲಾವಸ್ಥೆಗೆ ತಲುಪಿ ಯಾವಾಗ ಬೇಕಾದರೂ ಕುಸಿದು ಬೀಳುವ ಮಟ್ಟಿಗೆ ಬಂದು ನಿಂತಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

See also  ವಿದ್ಯಾರ್ಥಿಗಳ ಮೊಬೈಲ್ ವ್ಯಾಮೋಹ ಬಿಡಿಸಲು ಪ್ರಾಂಶುಪಾಲರ ಹೊಸ ತಂತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು