News Kannada
Monday, December 05 2022

ಕರ್ನಾಟಕ

ಬೆಂಕಿ ಅನಾಹುತಕ್ಕೆ ತಂಬಾಕು ನಾಶ

Photo Credit :

ಬೆಂಕಿ ಅನಾಹುತಕ್ಕೆ ತಂಬಾಕು ನಾಶ

ಪಿರಿಯಾಪಟ್ಟಣ: ತಾಲೂಕಿನ ರಾವಂದೂರು ಸಮೀಪವಿರುವ ಭೋಗನಹಳ್ಳಿ ಸಮೀಪವಿರುವ ಜೈಕರ್ ಎಂಬುವರಿಗೆ ಸೇರಿದ ಬ್ಯಾರನ್ನಲ್ಲಿ ತಂಬಾಕು ಹದ ಮಾಡುವ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಬೆಲೆಯ ತಂಬಾಕು ನಾಶವಾಗಿದೆ.

ಭೋಗನಹಳ್ಳಿ ಗ್ರಾಮದ ನಿವಾಸಿ ಜೈಕರ್ ಅವರು ತಂಬಾಕು ಬೆಳೆದಿದ್ದು ಬ್ಯಾರನ್ಗೆ ತಂಬಾಕು ತುಂಬಿ ಹದ ಮಾಡುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ತಂಬಾಕು ಹದ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಜೈಕರ್ ಹಾಗೂ ಇನ್ನಿತರು ಬೆಂಕಿ ನಂದಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ನಂತರ ಪಟ್ಟಣದ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿ ಅಲ್ಲಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬ್ಯಾರನ್ ಹಾಗೂ ಬ್ಯಾರನ್ಗೆ ಹೊಂದಿಕೊಂಡಿದ್ದ ಮನೆಯ ಅರ್ಧ ಭಾಗ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ 2 ಲಕ್ಷ ರೂ.ಗಳ ತಂಬಾಕು ಮತ್ತು 2 ಲಕ್ಷ ರೂ.ಗಳ ಮನೆ ಹಾಗೂ ಬ್ಯಾರನ್ ಬೆಂಕಿಗೆ ಸುಟ್ಟು ಹೋಗಿದೆ. ಬೆಂಕಿ ಅವಘಡದಿಂದಾಗಿ ರೈತ ಜೈಕರ್ ಅವರಿಗೆ ನಷ್ಟವಾಗಿದ್ದು, ಸಾಲ ಮಾಡಿ ತಂಬಾಕು ಬೆಳೆದಿದ್ದರು. ಆದರೆ ಈಗ ತಂಬಾಕು ಕಳೆದುಕೊಂಡು ಮುಂದೇನಪ್ಪಾ ಎಂಬ ಚಿಂತೆಗೀಡಾಗಿದ್ದಾರೆ. ತಂಬಾಕು ಮಂಡಳಿಯಿಂದ ಹಾಗೂ ಸರ್ಕಾರದಿಂದ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

See also  ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಸಂಬಂಧಿಕರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು