News Kannada
Saturday, December 03 2022

ಕರ್ನಾಟಕ

ಬಿಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ಬಣಕಲ್ ಪ್ರೌಢಶಾಲೆಗೆ ಜಿಲ್ಲಾ ಪ್ರಶಸ್ತಿ

Photo Credit :

ಬಿಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ಬಣಕಲ್ ಪ್ರೌಢಶಾಲೆಗೆ ಜಿಲ್ಲಾ ಪ್ರಶಸ್ತಿ

ಬಣಕಲ್: ಚಿಕ್ಕಮಗಳೂರಿನ ಮೌಂಟೇನ್ ವ್ಯೂವ್ ಶಾಲೆಯಲ್ಲಿ ಮಂಗಳೂರಿನ ವಿಕಾಸ್ ಕಾಲೇಜಿನ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ವಾಣಿಜ್ಯ ಪ್ರದರ್ಶನದ ಸ್ಪರ್ಧೆಗಳಲ್ಲಿ ಬಣಕಲ್ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಪ್ರಶಸ್ತಿ ಪಡೆಯುವುದರೊಂದಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಬಣಕಲ್ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಾದ ಬಣಕಲ್ನ ತಫಜುಲ್ ಹುಸೈನ್, ಕೊಟ್ಟಿಗೆಹಾರದ ಹಳ್ಳಿಮನೆಯ ನಿಖಿಲ್, ನಿತ್ಯಾಧರ್ನ ಅಸ್ಟಿನ್ ಡಿಸೋಜರ ತಂಡದವರು ಸೋಮವಾರ ನಡೆದ ವಲಯ ಮಟ್ಟದ ಜಿಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ತಂಡ ಪ್ರಶಸ್ತಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಬಣಕಲ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಚ್.ಟಿ.ರಾಮಚಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಸಮಯದಲ್ಲಿ ಶಿಕ್ಷಕ ಪ್ರತೀಕ್ ಮಾತನಾಡಿ, ಚಿಕ್ಕಮಗಳೂರಿನಲ್ಲಿ ವಸ್ತು ಪ್ರದರ್ಶನದ ಸ್ಪರ್ಧೆ ಹಾಗೂ ವಾಣಿಜ್ಯ ವಿಭಾಗದ ಬಿಸಿನೆಸ್ 500 ಜೋಶ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಮ್ಮ ಪ್ರೌಢಶಾಲಾ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಮತ್ತೊಂದು ವಿಜ್ಞಾನ ವಿಷಯದ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು ಆದರೆ ಅದನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮಂಗಳೂರಿನಲ್ಲಿ ಇದೇ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದ್ದು ನಮ್ಮ ಪ್ರೌಢಶಾಲಾ ವಿದ್ಯಾರ್ಥಿ ತಂಡದವರು ಭಾಗವಹಿಸಲಿದ್ದಾರೆ ಎಂದರು.

See also  ರೈತನ ಕೈಹಿಡಿದ ಸಾಂಪ್ರದಾಯಿಕ ಶೈಲಿಯ ಕೃಷಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು