News Kannada
Saturday, December 03 2022

ಕರ್ನಾಟಕ

ಚಾಮರಾಜನಗರ ಜಿಲ್ಲೆಯಾಗಿ 20 ವರ್ಷ: ಸಂಭ್ರಮೋತ್ಸವ

Photo Credit :

ಚಾಮರಾಜನಗರ ಜಿಲ್ಲೆಯಾಗಿ 20 ವರ್ಷ: ಸಂಭ್ರಮೋತ್ಸವ

ಚಾಮರಾಜನಗರ: ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಜಿಲ್ಲೆಯಾಗಿ 20 ವರ್ಷ ಸಂದಿರುವ ಹಿನ್ನಲೆಯಲ್ಲಿ ಕನ್ನಡ ಚಳವಳಿಗಾರರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕನ್ನಡ ಚಳವಳಿಗಾರರು, ಜಿಲ್ಲೆಯಾಗಲು ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್. ಪಟೇಲ್, ಅಂದು ಶಾಸಕರಾಗಿದ್ದ ವಾಟಾಳ್ ನಾಗರಾಜು, ಕೊಳ್ಳೇಗಾಲದ ಎಸ್. ಜಯಣ್ಣ, ಹನೂರಿನ ಶಾಸಕರಾದ ದಿ. ಹೆಚ್.ನಾಗಪ್ಪ, ಗುಂಡ್ಲುಪೇಟೆ ಶಾಸಕರಾಗಿದ್ದ ದಿ. ಎಚ್.ಎಸ್.ಮಹದೇವಪ್ರಸಾದ್ ಮತ್ತು ಸಂತೇಮರಹಳ್ಳಿ ಶಾಸಕರಾಗಿದ್ದ ಎ.ಆರ್. ಕೃಷ್ಣಮೂತರ್ಿರವರಿಗೆ ಜೈಕಾರ ಕೂಗಿ ಸಂತೋಷ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕನ್ನಡ ಸಂಘಟನೆಯ ಮುಖಂಡ ಹಾಗೂ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ನೂತನವಾಗಿ ಜಿಲ್ಲೆಯಾದ ಬಳಿಕ ಚಾಮರಾಜನಗರ ಜಿಲ್ಲೆಯಲ್ಲಿ ನಿರೀಕ್ಷೆಯಷ್ಟು ಅಭಿವೃದ್ದಿಯಾಗಿಲ್ಲ, ಈ ಬಗ್ಗೆ ಸರ್ಕಾರ ಗಮನ ಹರಿಸಿ ಅಭಿವೃದ್ದಿ ಪಡಿಸಬೇಕೆಂದು ಮನವಿ ಮಾಡಿದರು. ಕನ್ನಡ ಚಳವಳಿಗಾರರಾದ ಹ.ವಿ. ನಟರಾಜು, ಶಾ.ಮುರಳಿ ಸೇರಿದಂತೆ ಹಲವಾರು ಮಂದಿ ಇದ್ದರು.

See also  ಕೊಡಗಿನಲ್ಲಿ ಬಡ್ಡಿ ವ್ಯವಹಾರಗಳ ವ್ಯಕ್ತಿಗಳಿಂದ ಸಂತ್ರಸ್ತರಿಗೆ ಕಿರುಕುಳ: ಸಿಪಿಐಎಂ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು