News Kannada
Tuesday, December 06 2022

ಕರ್ನಾಟಕ

ಕಾಡಂಚಿನ ಮಕ್ಕಳ ಮುಖದಲ್ಲಿ ಅರಳಿದ ನಗು…ಏನಿದು ಸ್ಟೋರಿ?

Photo Credit :

ಕಾಡಂಚಿನ ಮಕ್ಕಳ ಮುಖದಲ್ಲಿ ಅರಳಿದ ನಗು…ಏನಿದು ಸ್ಟೋರಿ?

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಮಂಗಲ ಗ್ರಾಮದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಇಷ್ಟು ದಿನ ಪಡುತ್ತಿದ್ದ ಕಷ್ಟಗಳಿಗೆ ಮುಕ್ತಿ ದೊರಕಿದೆ.

ಬಸ್ ಸೌಲಭ್ಯದ ಕೊರತೆಯಿಂದಾಗಿ ನಾಲ್ಕಾರು ಕಿ.ಮೀ. ನಡೆದು ಬರಬೇಕಾದ ಪರಿಸ್ಥಿತಿಯನ್ನು ಅರಿತು ಸ್ವಯಂಸೇವಾ ಸಂಸ್ಥೆ ಮಿನಿ ಬಸ್ನ್ನು ಶಾಲೆಗೆ  ಕೊಡುಗೆಯಾಗಿ ನೀಡುವ ಔದಾರ್ಯತೆ ಮೆರೆದಿದ್ದು, ಮಕ್ಕಳ ಮುಖದಲ್ಲಿ ನಗು ಚಿಮ್ಮಿದೆ.ಬಂಡೀಪುರ ಹುಲಿಯೋಜನೆಯ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಪೋಡುಗಳಿಂದ ಸುಮಾರು 45ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಂಗಲ ಗ್ರಾಮದ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದರು. ಇದರಿಂದ ಹಲವು ಮಕ್ಕಳು ಬರಲು ಸಾಧ್ಯವಾಗದೆ ಶಾಲೆಯಿಂದ ಹೊರಗುಳಿಯುವಂತಾಗಿತ್ತು. ಇದನ್ನರಿತ ತಮಿಳುನಾಡು ಮೂಲದ ವನಂ ಫೌಂಡೇಶನ್ ಎಂಬ ಸ್ವಯಂ ಸೇವಾಸಂಸ್ಥೆಯು ಮಿನಿ ಬಸ್ ನ್ನು ಕೊಡುಗೆಯಾಗಿ ನೀಡಿದ್ದು ಮಿನಿಬಸ್ನ ಕೀಯನ್ನು ತಹಸೀಲ್ದಾರ್ ಸಿದ್ದು ಅವರು ಶಾಲೆಯ ಶಿಕ್ಷಕರಿಗೆ ನೀಡಿದ್ದಾರೆ.

ಹಾಗೆ ನೋಡಿದರೆ ಈ ಹಿಂದೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸಂಸ್ಥೆಯಿಂದ ಬಸ್ ನ್ನು ನೀಡಲಾಗಿತ್ತು. ಆದರೆ ಬಸ್ ಗೆ ಇಂಧನ ಮತ್ತು ಚಾಲಕರ ನೇಮಕ ಎಲ್ಲವನ್ನು ಶಾಲೆಯಿಂದ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವಾಪಾಸ್ ಪಡೆಯಲಾಗಿತ್ತು. ಇದೀಗ ಸಂಸ್ಥೆಗೆ ಬಸ್ ನೀಡಲಾಗಿದ್ದು, ತಾಲೂಕು ಆಡಳಿತ ಮತ್ತು ಇತರೆ ದಾನಿಗಳು ಇದರ ಖರ್ಚು ವೆಚ್ಚವನ್ನು ಭರಿಸಿದರೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವುದರಲ್ಲಿ ಎರಡು ಮಾತಿಲ್ಲ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಲ್ಲಿ ನಡೆದುಕೊಂಡು ಹೋಗುವುದು ಸುಲಭದ ಮಾತೇನಲ್ಲ. ಇತ್ತ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಭಯದಲ್ಲೇ ನಡೆದುಕೊಂಡು ತೆರಳಿದರೆ ಮಕ್ಕಳನ್ನು ಶಾಲೆಗೆ ಕಳುಹಿಸಿದ ಪೋಷಕರಿಗೆ ಮಕ್ಕಳು ಮನೆಗೆ ತಲುಪುವ ತನಕ ನೆಮ್ಮದಿಯಿಲ್ಲದಂತಾಗಿದೆ. ಇನ್ನು ಮುಂದೆಯಾದರೂ ನೆಮ್ಮದಿಯಾಗಿ ಶಾಲೆಗೆ ಹೋಗಿ ಬರುವ ದೃಷ್ಟಿಯಿಂದ ಕೊಡುಗೆಯಾಗಿ ನೀಡಿದ ಬಸ್ ಸದುಪಯೋಗವಾಗಬೇಕಿದೆ.

See also  ಪ್ರಾಧಿಕಾರ, ಅಕಾಡೆಮಿಗಳ ಬಲ ವರ್ಧನೆಗೆ ಕ್ರಮ: ಸಚಿವ ಸುನೀಲ್‌ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು