News Kannada
Monday, December 05 2022

ಕರ್ನಾಟಕ

ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಒತ್ತಾಯ

Photo Credit :

ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಒತ್ತಾಯ

ಮೂಡಿಗೆರೆ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಮತ್ತು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದು, ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸುವುದರೊಂದಿಗೆ ಶಾಶ್ವತ ಪರಿಹಾರ ನೀಡುವಂತೆ ರೈತ ಹಿತರಕ್ಷಣಾ ವೇದಿಕೆ, ಬೆಳೆಗಾರರ ಸಂಘ, ಕೆಜಿಎಫ್, ರೈತಸಂಘದ ಮುಖಂಡರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಬೈರಾಪುರ, ಹೊಸಕೆರೆ, ಊರುಬಗೆ, ಸತ್ತಿಗನಹಳ್ಳಿ, ಕುಂಬರಡಿ, ಗೌಡಹಳ್ಳಿ, ಮೇಕನಗದ್ದೆ, ಯು.ಹೊಸಳ್ಳಿ, ಬೈದುವಳ್ಳಿ, ಬಾಳೆಗದ್ದೆ, ಗುತ್ತಿಹಳ್ಳಿ, ಗುತ್ತಿ, ಕೋಗಿಲೆ, ಬಿದರಹಳ್ಳಿ, ಕೆಂಜಿಗೆ, ಕುಂದೂರು, ತತ್ಕೊಳ ಕುಂದೂರು, ಬಣಕಲ್, ತರುವೆ, ಬಾಳೂರು, ಆಲೇಖಾನ್ ಹೊರಟ್ಟಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆಗಳು ನಿರಂತರ ಧಾಳಿ ನಡೆಸುತ್ತಿರುವ ಕಾರಣ ಜನ ಜೀವನ ಅಸ್ತವ್ಯಸ್ತವಾಗಿದೆ. ಕಾಡಿನಲ್ಲಿ ಆನೆಗಳಿಗೆ ಬೇಕಾದ ಆಹಾರಗಳು ಸಿಗದಿರುವುದರಿಂದ ರೈತರು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ನಾಶಪಡಿಸುತ್ತಿದೆ. ಅಲ್ಲದೆ ತೋಟಗಳಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡಲು ಭಯಪಡುತ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಸ್.ಎ.ವಿಜಯೇಂದ್ರ ಮಾತನಾಡಿ, ತಾಲೂಕಿನಲ್ಲಿ ಅನೇಕ ಗ್ರಾಮಗಳನ್ನು ಗೋಮಾಳ ಮತ್ತು ಕಂದಾಯ ಜಮೀನುಗಳನ್ನು ಡೀಮ್ಸ್ ಫಾರೆಷ್ಟ್ ಎಂದು ಅರಣ್ಯ ಇಲಾಖೆಗೆ ಸೇರಿಸಿದ್ದರ ಪರಿಣಾಮ ರೈತರಿಗೆ ತೊಂದರೆಯಾಗಿದೆ. ಜಾನುವಾರುಗಳಿಗೆ ಮೇಯಲು ಜಾಗವಿಲ್ಲದಂತಾಗಿದೆ. ಆದ್ದರಿಂದ ಜಮಿನುಗಳನ್ನು ಕಾಂದಾಯ ಇಲಾಖೆಗೆ ವಾಪಸ್ಸು ನೀಡಬೇಕೆಂದು ಒತ್ತಾಯಿಸಿದರು.

ಕೆಜಿಎಫ್ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಕಾಡು ಪ್ರಾಣಿಗಳು ಗ್ರಾಮಗಳಿಗೆ ಆಗಮಿಸಿ ಕೇವಲ ರೈತರ ಬೆಳೆ ಹಾಳು ಮಡುವುದು ಮಾತ್ರವಲ್ಲ. ಜಾನುವಾರುಗಳು ಮತ್ತು ಮಾನವನ ಮೇಲೆ ಹಲೆ ನಡೆಸಿ ಪ್ರಾಣ ತೆಗೆಯುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಕಾಡಾನೆ ದಾಳಿಯಿಂದಾಗಿ  ತಾಲೂಕಿನಲ್ಲಿ ಅನೇಕ ರೈತರು ಕೃಷಿ ಜಮೀನನ್ನು ಪಾಳು ಬಿಟ್ಟಿದ್ದು, ಈ ಜಮೀನಿನಲ್ಲಿ ಬೆಳೆಯುವ ಬೆಳೆಯನ್ನು ಅಂದಾಜಿಸಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

See also  ಚಾಮರಾಜನಗರ ಜಿಲ್ಲೆಯಲ್ಲಿ ರಕ್ತ ಕೊರತೆಯ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು