News Kannada
Thursday, December 08 2022

ಕರ್ನಾಟಕ

ಟಿ.ಪಿ.ರಮೇಶ್ ಪರ ನಿಂತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ

Photo Credit :

ಟಿ.ಪಿ.ರಮೇಶ್ ಪರ ನಿಂತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ

ಮಡಿಕೇರಿ: ಕೆಲವು ಸಂಘ, ಸಂಸ್ಥೆ, ಸಮಾಜಗಳು ಟಿ.ಪಿ.ರಮೇಶ್ ಅವರ ವಿರುದ್ಧ ನೀಡುತ್ತಿರುವ ಹೇಳಿಕೆಗಳು ತೇಜೋವಧೆಯ ಮನೋಭಾವದಿಂದ ಕೂಡಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಘಟಕ ಆರೋಪಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷರಾದ ಎ.ಜಿ.ತಾರಾಮಣಿ, ಸತ್ಯವನ್ನು ಮರೆಮಾಚಿ ವಿಡಿಯೋ ಕ್ಲಿಪಿಂಗ್ ವೈರಲ್ ಆದ ವಿಚಾರವನ್ನೇ ಹೇಳುತ್ತಿರುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಬಂದ ನಂತರ ಅವರ ಯೋಗ ಕ್ಷೇಮವನ್ನು ಓರ್ವ ಅಣ್ಣನಾಗಿ ರಮೇಶ್ ಅವರು ಕೈಮುಟ್ಟಿ ಕೇಳಿರುವುದರಲ್ಲಿ ಯಾವ ತಪ್ಪೂ ಇಲ್ಲ. ಅಲ್ಲದೆ ಅವರು ಕೂಡ ಆತ್ಮೀಯತೆಯಿಂದ ವರ್ತಿಸಿರುವುದು ವಿಡಿಯೋದಲ್ಲೂ ಇದೆ. ಆದರೆ ಅದನ್ನು ಇನ್ನೊಂದು ರೂಪದಲ್ಲಿ ವರ್ಣಿಸಿ ಟಿವಿ ಮಾಧ್ಯಮಗಳಲ್ಲಿ ಬಿತ್ತರಿಸಿರುವುದು ನೈಜ ವಿಚಾರದಿಂದ ಹೊರತಾಗಿದೆ ಎಂದು ತಾರಾಮಣಿ ಹೇಳಿದರು.

ಸುಮಾರು 27 ವರ್ಷಗಳಿಂದ ಅಂಗನವಾಡಿ ಸಹೋದರಿಯರ ಏಳಿಗೆಗಾಗಿ ದುಡಿಯುತ್ತಿರುವ ಟಿ.ಪಿ.ರಮೇಶ್ ಅವರು ನಮ್ಮೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ ಮತ್ತು ನಮ್ಮ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಸ್ತ್ರೀಪರ ಕಾರ್ಯನಿರ್ವಹಿಸುತ್ತಾ ಸಂಕಷ್ಟಗಳಿಗೆ ಸ್ಪಂದಿಸುವ ನಿಲುವಿನ ನಾಯಕರಾಗಿರುವ ರಮೇಶ್ ಅವರು ಎಲ್ಲಾ ಜಾತಿ, ಧರ್ಮದ ಜನರಿರುವ ಅಂಗನವಾಡಿ ಕಾರ್ಯಕತರ್ೆಯರ ಮತ್ತು ಸಹಾಯಕಿಯರ ಸಂಘದ ಬೆಳವಣಿಗೆಗೆ ದುಡಿಯುತ್ತಿದ್ದು, ಎಮ್ಎಲ್ಸಿ ವೀಣಾ ಅಚ್ಚಯ್ಯ ಅವರಿಗೂ ಇದು ತಿಳಿದಿದೆ.

ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ನಡೆದುಕೊಂಡದ್ದು ತಪ್ಪಾದರೂ ಒಳ್ಳೆತನದ ವಿಚಾರವನ್ನು ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸಿ ರಮೇಶ್ ಅವರನ್ನು ತೇಜೋವಧೆ ಮಾಡಲಾಗಿದೆ ಎಂದು ತಾರಾಮಣಿ ಆರೋಪಿಸಿದರು. ಜಿಲ್ಲೆಯ ಎಲ್ಲಾ ಸಂಘಟನೆಗಳ ಬೆಳವಣಿಗೆಗೂ ರಮೇಶ್ ಅವರು ಸಹಕರಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿರುವ ಎಲ್ಲಾ ಜಾತಿ, ಧರ್ಮದವರೊಂದಿಗೆ ಸಹೋದರತ್ವದಲ್ಲಿ ಬಾಳಿ ಬೆಳೆದ ರಮೇಶ್ ಅವರನ್ನು ಯಾರು ಕೂಡ ಅನ್ಯತಾ ಭಾವಿಸುವುದಿಲ್ಲ. ಸತ್ಯವನ್ನು ಸುಳ್ಳಾಗಿಸಿ ಅದನ್ನು ವಿಜೃಂಭಿಸಿ ವಿನಾ ಕಾರಣ ತೇಜೋವಧೆಯಲ್ಲಿ ತೊಡಗಿರುವುದು ಅವರ ಬದುಕಿಗೆ ಸಂಚಕಾರ ಉಂಟು ಮಾಡಿದಂತ್ತಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಡಿಯೋ ಕ್ಲಿಪಿಂಗ್ನ್ನು ಪೂರ್ಣ ಪ್ರಮಾಣದಲ್ಲಿ ಟಿವಿ ಮಾಧ್ಯಮಗಳು ಬಿತ್ತರಿಸಬೇಕಾಗಿತ್ತು. ಕೈ ಎತ್ತಿ ಕೈ ಇಡುವುದನ್ನು ಮಾತ್ರ ತೋರಿಸಿ ತಪ್ಪು ಅಭಿಪ್ರಾಯವನ್ನು ಮೂಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ತಡವಾಗಿಯಾದರೂ ಸತ್ಯಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಾರಾಮಣಿ, ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರನ್ನು ರಮೇಶ್ ಅವರು ಅತಿ ಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಫೋಟೋ :: ಅಂಗನವಾಡಿ

 

See also  ರೈಲ್ವೆ ಹಳಿ ಮೇಲೆ ಯುವತಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು