News Kannada
Tuesday, November 29 2022

ಕರ್ನಾಟಕ

ಮಾಜಿ ಸಂಸದೆ ರಮ್ಯಾಗೆ ಆಟಿಕೆಗಳೊಂದಿಗೆ ಬಾಗಿನ ರವಾನೆ - 1 min read

Photo Credit :

ಮಾಜಿ ಸಂಸದೆ ರಮ್ಯಾಗೆ ಆಟಿಕೆಗಳೊಂದಿಗೆ ಬಾಗಿನ ರವಾನೆ

ಮಂಡ್ಯ: ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಫೋಟೋವನ್ನು ತೋರಿಸಿದಲ್ಲಿ 25 ಸಾವಿರ ರೂ. ಬಹುಮಾನ ಕೊಡುವುದಾಗಿ ಘೋಷಿಸಿದ್ದ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಸಿಡಿದೆದ್ದ ಮಂಡ್ಯದ ಬಿಜೆಪಿ ಕಾರ್ಯಕರ್ತರು ಮಕ್ಕಳ ಆಟಿಕೆಗಳೊಂದಿಗೆ ಬಾಗಿನವನ್ನು ರವಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಮ್ಯಾ ಬಾಲಿಶವಾಗಿ ಮಾತನಾಡುವುದನ್ನು ಬಿಡಬೇಕೆಂದು ಆಗ್ರಹಿಸಿದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಕ್ಕಳ ಆಟಿಕೆ ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದ್ದಾರೆ. ಬಾಗಿನವನ್ನು ಅವರಿಗೆ ರವಾನಿಸಿದ್ದಾರೆ.ನಗರದ ಪ್ರಧಾನ ಆಂಚೆ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮಕ್ಕಳ ಆಟಿಕೆಗಳು, ಚಿಕ್ಕ ಮಗುವಿನ ಲಂಗಾ ಬ್ಲೌಸ್ ಪ್ರದರ್ಶಿಸಿ, ರಮ್ಯಾ ಅವರಿಗೆ ಬುದ್ದಿ ಬೆಳೆದಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಹಾನಿಗೊಳಗಾದ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಸಂಬಂಧಿಸಿದ ಇಲಾಖೆಯಿಂದಲೂ ವರದಿ ಕೇಳಿದ್ದಾರೆ. ಇದನ್ನರಿಯದೆ ಕೇವಲ ವಿರೋಧ ಮಾಡುವುದಕ್ಕೋಸ್ಕರ ಬಾಲಿಸವಾಗಿ ಮಾತನಾಡುವ ಮೂಲಕ ಮಕ್ಕಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಪ್ರವಾಹಕ್ಕೀಡಾಗಿರುವ ರಾಜ್ಯಗಳಲ್ಲಿ ನೀವು ಅಥವಾ ನಿಮ್ಮ ಪಕ್ಷದ ವರಿಷ್ಠರು ಎಷ್ಟು ಬಾರಿ ಪ್ರವಾಸ ಮಾಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ, ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರಲ್ಲದೆ, ಅಂಚೆ ಮೂಲಕ ಅವರ ವಿಳಾಸಕ್ಕೆ ಬಾಗಿನ ಕಳುಹಿಸಿ ವಿಭಿನ್ನ ಪ್ರತಿಭಟನೆಯನ್ನು ನಡೆಸಿದರು.

See also  ಅಪಘಾತದಲ್ಲಿ ನೌಕಾಪಡೆ ನೌಕರ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು