News Kannada
Sunday, November 27 2022

ಕರ್ನಾಟಕ

ಮಡಿಕೇರಿ: ಬ್ಯಾಡ್ಮಿಂಟನ್ ನಲ್ಲಿ ಐಎನ್ಎಸ್ ಸ್ಪೋರ್ಟ್ಸ್ ಚಾಂಪಿಯನ್ - 1 min read

Photo Credit :

ಮಡಿಕೇರಿ: ಬ್ಯಾಡ್ಮಿಂಟನ್ ನಲ್ಲಿ ಐಎನ್ಎಸ್ ಸ್ಪೋರ್ಟ್ಸ್ ಚಾಂಪಿಯನ್

ಮಡಿಕೇರಿ: ಇಲ್ಲಿನ ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಷಿಯೇಷನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಷಿಯೇಷನ್ ಸಹಯೋಗದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುಡ್ಡೆಹೊಸೂರಿನಲ್ಲಿರುವ ಐಚೆಟ್ಟೀರ ನರೇನ್ ಸುಬ್ಬಯ್ಯ ಸ್ಪೋರ್ಟ್ಸ್ ಸೆಂಟರ್ ಗಮನಾರ್ಹ ಸಾಧನೆ ಮಾಡಿದೆ.

ಕ್ರೀಡಾಕೂಟದ 11 ವಿಭಾಗಗಳಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಗಮನಸೆಳೆದಿದೆ. ಹದಿನೈದು ವರ್ಷದೊಳಗಿನ ಬಾಲಕರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ, 17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಮತ್ತು ದ್ವಿತೀಯ 19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಿಕ್ಸ್ಡ್ ಡಬಲ್ಸ್ ನಲ್ಲಿ ಪ್ರಥಮ ಮತ್ತು ದ್ವಿತೀಯ ಪಡೆದಿದ್ದು, ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಹಾಗೆಯೇ ಮಿಕ್ಸ್ಡ್ ಡಬಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾರೆ.

ಐಎನ್ಎಸ್ ಕ್ರೀಡಾಕೇಂದ್ರದ ಮೊದಲ ಕ್ರೀಡಾಕೂಟದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದು ಸಂತೋಷ ಮತ್ತು ಹೆಮ್ಮೆ ತಂದಿದೆ. ಮಕ್ಕಳ ಸಾಧನೆ ಪೋಷಕರ ಪ್ರೋತ್ಸಾಹ ಮತ್ತು ತರಬೇತುದಾರರ ಅತ್ಯುತ್ತಮ ತರಬೇತಿಯ ಹಿನ್ನಲೆಯಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಚಾಲಕ ಪೊನ್ನಪ್ಪ ಹೇಳಿದ್ದಾರೆ.

See also  ವರ್ಷ ಕಳೆದರೂ ಇನ್ನೂ ಸಿಸಿಬಿಗೆ ತಲುಪದ ಎಫ್‌ಎಸ್‌ಎಲ್‌ ವರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು