News Kannada
Sunday, November 27 2022

ಕರ್ನಾಟಕ

ಮೀನು ಹಿಡಿಯುವಾಗ ದೋಣಿ ಮಗುಚಿ ಯುವಕ ಸಾವು - 1 min read

Photo Credit :

ಮೀನು ಹಿಡಿಯುವಾಗ ದೋಣಿ ಮಗುಚಿ ಯುವಕ ಸಾವು

ಕಾಸರಗೋಡು: ಮೀನು ಹಿಡಿಯುತ್ತಿದ್ದಾಗ ದೋಣಿ ಮಗುಚಿ ಯುವಕ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಕುಂಬಳೆ ಸಮೀಪದ ಶಿರಿಯ ಹೊಳೆಯಲ್ಲಿ ನಡೆದಿದೆ.

ಮೃತಪಟ್ಟವನನ್ನು ಮೂಲತಃ ಪುತ್ತೂರು ನಿವಾಸಿ , ಪ್ರಸ್ತುತ ಕಾಸರಗೋಡು ಅಣಂಗೂರಿನಲ್ಲಿ ವಾಸ್ತವ್ಯ ಹೊಂದಿರುವ ಮುಹಮ್ಮದ್ ಅಲಿ (೨೭) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಶಿರಿಯ ದಲ್ಲಿರುವ ಕುಂಬಳೆ ಕರಾವಳಿ ಪೊಲೀಸ್ ಠಾಣಾ ಮುಂಭಾಗದ ಹೊಳೆಯಲ್ಲಿ ಘಟನೆ ನಡೆದಿದೆ.

ಸ್ನೇಹಿತರ ಜೊತೆ ಮೀನು ಹಿಡಿಯಲು ಬಂದಿದ್ದನು . ಮೀನು ಹಿಡಿಯುತ್ತಿದ್ದಾಗ ದೋಣಿಯಿಂದ ಮೂವರು ಆಯತಪ್ಪಿ ಹೊಳೆಗೆ ಬಿದ್ದಿದ್ದು , ಇಬ್ಬರು ಈಜಿ ದಡ ಸೇರಿದರೂ ಆದರೆ ಮುಹಮ್ಮದ್ ಗೆ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ . ಜೊತೆಗಿದ್ದವರು ಹೊಳೆಗಿಳಿದು ರಕ್ಷಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಕರಾವಳಿ ಪೊಲೀಸ್ ಠಾಣೆ ಗೆ ಮಾಹಿತಿ ನೀಡಲಾಯಿತು . ಕರಾವಳಿ ಪೊಲೀಸರು ಮತ್ತು ನಾಗರಿಕರು ಹೊಳೆಯಿಂದ ಮೇಲಕ್ಕೆತ್ತಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದರು.

ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗಾರ ದಲ್ಲಿರಿಸಲಾಗಿದೆ.

See also  ಹಿಂಸೆಗೆ ತಿರುಗಿದ ಯೂತ್ ಲೀಗ್ ಕಾರ್ಯಕರ್ತರ ಜಾಥಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು