News Kannada
Tuesday, December 06 2022

ಕರ್ನಾಟಕ

ಬರಿದಾಗಿದ್ದ ಬಂಡೀಪುರದ ಕೆರೆಗಳು ಭರ್ತಿ!

Photo Credit :

ಬರಿದಾಗಿದ್ದ ಬಂಡೀಪುರದ ಕೆರೆಗಳು ಭರ್ತಿ!

ಚಾಮರಾಜನಗರ: ಗುಂಡ್ಲುಪೇಟೆಯ ರಾಷ್ಟ್ರೀಯ ಉದ್ಯಾನದಲ್ಲಿರುವ ಬೇಸಿಗೆಯಲ್ಲಿ ಬರಿದಾಗಿದ್ದ ಕೆರೆಗಳೀಗ ಉತ್ತಮವಾಗಿ ಮಳೆ ಸುರಿದ ಕಾರಣದಿಂದ ಭರ್ತಿಯಾಗಿವೆ. ಹೀಗಾಗಿ ಮುಂದಿನ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ನೆಮ್ಮದಿಯಾಗಿ ಬದುಕಬಹುದೆಂಬ ಧೈರ್ಯ ಬಂದಂತಾಗಿದೆ.

ಕಳೆದ ಬೇಸಿಗೆಯಲ್ಲಿ ಕೆರೆಗಳೆಲ್ಲ ಖಾಲಿಯಾಗಿ ಪ್ರಾಣಿಪಕ್ಷಿಗಳು ನೀರಿಗಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನೀರು ಹುಡುಕಿಕೊಂಡು ದೂರದ ತಮಿಳುನಾಡು, ಕೇರಳದತ್ತ ತೆರಳಿದ್ದವು. ಕೆರೆಗಳಲ್ಲಿದ್ದ ನೀರು ಬತ್ತಿದ ಕಾರಣ ಕೆಲವು ಕೆರೆಗಳಿಗೆ ಟ್ಯಾಂಕರ್ ಮೂಲಕ, ಸೋಲಾರ್ ಬೋರ್ವೆಲ್ ಮೂಲಕ ನೀರು ತುಂಬಿಸಿ ವಲಸೆ ಹೋಗದೆ ನೀರಿಗಾಗಿ ಪರಿತಪಿಸುತ್ತಿದ್ದ ಪ್ರಾಣಿಗಳ ದಾಹ ತಣಿಸುವ ಕೆಲಸವನ್ನು ಮಾಡಲಾಗಿತ್ತು. ಅದೇ ವೇಳೆಗೆ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದರು.

ಅರಣ್ಯದಲ್ಲಿರುವ ಕೆರೆಗಳು ಬತ್ತಿದ್ದರಿಂದ ಎಲ್ಲದಕ್ಕೂ ಅನಾನುಕೂಲವಾಗಿತ್ತು. ಜತೆಗೆ ಅರಣ್ಯವೆಲ್ಲ ಒಣಗಿ ಹೋಗಿದ್ದರಿಂದ ಭಯವೂ ಆರಂಭವಾಗಿತ್ತು. ಅದೃಷ್ಟವಶಾತ್ ಅದೇ ವೇಳೆಗೆ ಸ್ವಲ್ಪ ಮಟ್ಟಿಗೆ ಮಳೆ ಸುರಿದಿದ್ದರಿಂದ ನೆಲ ತಂಪಾಗಿತ್ತು.ಇದೀಗ ಮಳೆ ಸಮರ್ಪಕವಾಗಿ ಸುರಿದ ಕಾರಣದಿಂದಾಗಿ ಬಂಡೀಪುರ ವ್ಯಾಪ್ತಿಯ ಕೆರೆಗಳು ಭರ್ತಿಯಾಗಿ ಪ್ರಾಣಿ ಪಕ್ಷಿಗಳು ಮಾತ್ರವಲ್ಲದೆ, ಅರಣ್ಯಾಧಿಕಾರಿಗಳು ಕೂಡ ನೆಮ್ಮದಿಯುಸಿರು ಬಿಡುವಂತಾಗಿದೆ.

ಅರಣ್ಯದಲ್ಲಿ ಬಿದ್ದ ಮಳೆಯ ನೀರು ತಗ್ಗು ಪ್ರದೇಶದಲ್ಲಿರುವ ಕೆರೆ ಕಟ್ಟೆಗತ್ತ ಹರಿದು ಅಲ್ಲಿ ಸಂಗ್ರಹವಾಗುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಮುಂದಿನ ವರ್ಷ ಅಂತರ್ಜಲ ಬತ್ತದೆ ಸಮರ್ಪಕವಾಗಿ ನೀರು ದೊರೆಯಲಿದೆ ಎಂಬ ಧೈರ್ಯ ಅರಣ್ಯಾಧಿಕಾರಿಗಳಿಗೆ ಬಂದಿದೆ. ಬಂಡೀಪುರ ಉದ್ಯಾನದ ಪಾರ್ವತಾಂಬಾ ತ್ರಿಯಂಭಕಪುರ ಬೆಟ್ಟಗಳಿಂದ ಹರಿದುಬಂದ ನೀರು ನೇರವಾಗಿ ಹರಿದು ಬಂದು ಹಳ್ಳಕೊಳ್ಳಗಳಿಗೆ ಸೇರುತ್ತಿರುವುದರಿಂದ ಕಾಡಂಚಿನ ಹಂಗಳದ ಹಿರಿಕೆರೆ, ಬರಗಿ ಕೆರೆ, ಹಾಗೂ ಬೇರಂಬಾಡಿಯ ಕೆಂಪುಸಾಗರ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.

ಇದಲ್ಲದೆ ಬಂಡೀಪುರ ವಲಯದ ಮೂರ್ಕೆರೆ, ಗೋಪಾಲಸ್ವಾಮಿಬೆಟ್ಟ ವಲಯದ ಗಾರೇಪಾಲ, ತಾವರೆಕಟ್ಟೆ ಕೆರೆಗಳು ಮತ್ತು ಹಿರಿಕೆರೆ, ಓಂಕಾರ್ ವಲಯದ ಸೌತ್ಕೆರೆ, ನಾರ್ಥಕೆರೆ, ಶಾಂತೇಗೌಡನಕಟ್ಟೆ, ಹಂದಿಕಟ್ಟೆ, ಕುಂದಕೆರೆ, ಮದ್ದೂರು ವಲಯಗಳಲ್ಲಿರುವ ಕೆರೆಗಳು ಭರ್ತಿಯಾಗಿವೆ. ಅರಣ್ಯದಲ್ಲಿರುವ ಕೆರೆಗಳು ಭರ್ತಿಯಾದ ಕಾರಣದಿಂದಾಗಿ ನೀರು, ಮೇವು ಹುಡುಕಿಕೊಂಡು ದೂರ ಸರಿದಿದ್ದ ಪ್ರಾಣಿಗಳು ಮರಳಿ ತನ್ನ ಸ್ವಸ್ಥಾನಕ್ಕೆ ಮರಳಿವೆ. ಒಟ್ಟಾರೆ ಈಗ ಬಂಡೀಪುರದಲ್ಲಿರುವ ಕೆರೆಗಳೆಲ್ಲವೂ ಭರ್ತಿಯಾಗಿರುವುದು ಜೀವರಾಶಿಗಳಿಗೆ ನೆಮ್ಮದಿ ತಂದಿದೆ.

See also  ಮಾದಾಪುರದಲ್ಲಿ ಶೂಟೌಟ್: ಚಾಲಕ ಗುಂಡೇಟಿಗೆ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು