News Kannada
Wednesday, September 28 2022

ಕರ್ನಾಟಕ

ಆತಂಕ ತಂದ ಆಲೆಮನೆ ಬೆಲ್ಲದಲ್ಲಿ ರಾಸಾಯನಿಕ ಬಳಕೆ! - 1 min read

Photo Credit :

ಆತಂಕ ತಂದ ಆಲೆಮನೆ ಬೆಲ್ಲದಲ್ಲಿ ರಾಸಾಯನಿಕ ಬಳಕೆ!

ಮಂಡ್ಯ: ಮಂಡ್ಯ ಜಿಲ್ಲೆಯ ಆಲೆಮನೆಯಲ್ಲಿ ತಯಾರಾಗುವ ಬೆಲ್ಲದಲ್ಲಿ ರಾಸಾಯನಿಕ ಅಂಶ ಇದೆ ಎಂಬ ಸುದ್ದಿ ಇದೀಗ ಜನರನ್ನು ಕಂಗೆಡಿಸಿದೆ.

ಹೆಚ್ಚುವರಿ ಕಾರ್ಯದರ್ಶಿ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರಕ್ಕೆ ರಾಸಾಯನಿಕ ಅಂಶವಿರುವ ಬಗ್ಗೆ ವರದಿಯನ್ನು ಸಲ್ಲಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಮಂಡ್ಯದಲ್ಲಿ 532 ನೋಂದಾಯಿತ ಆಲೆಮನೆಗಳಿದ್ದು ಈ ಸುದ್ದಿ ಅವರ ವ್ಯಾಪಾರ ವಹಿವಾಟು ಮೇಲೆ ಪರಿಣಾಮ ಬೀರಿದೆ.

ಮಂಡ್ಯ, ಯಶವಂತಪುರ, ಮಹಾಲಿಂಗಪುರದ ಬೆಲ್ಲ ಮಾರುಕಟ್ಟೆಗಳಿಂದ ಸ್ಯಾಂಪಲ್ಸ್ ಗಳನ್ನು ಪರೀಕ್ಷೆಗೆ ಒಳಪಡಿಸಿದ್ದಲ್ಲದೆ, ಅನೇಕ ಆಲೆಮನೆಗಳಿಂದಲೂ ಉತ್ಪನ್ನಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ಪ್ರಕಾರ ಮಂಡ್ಯದ ಆಲೆಮನೆಗಳಲ್ಲಿ ಕ್ಯಾಲ್ಸಿಯಂ ಹೈಡ್ರಾಪ್ಸೈಡ್, ಸೋಡಿಯಂ ಹೈಡ್ರೋ ಸಲ್ಪೈಟ್, ಹೈಡ್ರೋಸ್, ಸೋಡಿಯಂ ಫಾರ್ಮಾಲ್ಡಿಹೈಡ್, ಸಲ್ಪಾಸ್ಕಲೈಟ್, ಸಕೋಲೈಟ್, ಆರ್ಥೋ ಫಾಸ್ಪರಿಕ್ ಆಸಿಡ್, ಕಪ್ಪೆ ಚಿಪ್ಪು ಮತ್ತು ಶಂಖ, ಅಡುಗೆ ಸೋಡಾ, ಹರಳೆಣ್ಣೆ ಮತ್ತು ತೆಂಗಿನ ಎಣ್ಣೆ, ಕೇಸರಿ, ಕೆಂಪು ಮತ್ತು ಮೊದಲಾದ ಕೃತಕ ಬಣ್ಣಗಳು, ಸಲ್ಪರ್ ಡೈಆಕ್ಸೈಡ್, ಸೋಡಿಯಂ ಹೈಡ್ರೋ ಸಲ್ಪೈಟ್ ಮೊದಲಾದವುಗಳನ್ನು ಬೆಲ್ಲಕ್ಕೆ ಬಳಸಲಾಗುತ್ತಿದೆ. ಜೊತೆಗೆ ಬೆಲ್ಲ ಗಟ್ಟಿಯಾಗಲಿ ಎಂಬ ಉದ್ದೇಶದಿಂದ ಬೆಂಡೆಕಾಯಿ ಗಿಡದ ಕಾಂಡ ಮತ್ತು ಸಕ್ಕರೆಯನ್ನು ಹಾಕಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

ಸೋಡಿಯಂ ಹೈಡ್ರೋ ಸಲ್ಪೈಟ್ ನ್ನು ಬಳಸುತ್ತಿರುವುದು ಭಯಕ್ಕೆ ಕಾರಣವಾಗಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೇವಲ 100 ರಿಂದ 500 ರೂ.ಗಳ ಮೊತ್ತದಲ್ಲಿ ಈ ವಿಷಕಾರಿ ರಾಸಾಯನಿಕಗಳನ್ನು ಬಳಸಿದರೆ ಟನ್ಗಟ್ಟಲೆ ಬೆಲ್ಲಕ್ಕೆ ಕೃತಕವಾಗಿ ಬಣ್ಣ ಮತ್ತು ದೃಢತೆಯನ್ನು ನೀಡಬಹುದಂತೆ. ಹೀಗಾಗಿ ಆಲೆ ಮನೆಗಳ ಬೆಲ್ಲ ತಯಾಕರು ರಾಸಾಯನಿಕದ ಕಡೆಗೆ ವಾಲುತ್ತಿದ್ದು ಅದು ಅವರಿಗೆ ಲಾಭ ತಂದುಕೊಡುತ್ತಿದ್ದರೂ ಅದನ್ನು ಉಪಯೋಗಿಸುವವರಿಗೆ ಮಾತ್ರ ತೊಂದರೆ ನೀಡುತ್ತಿರುವುದಂತು ಸತ್ಯ. ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

See also  ಖಾದರಲಿಂಗ್ ದರ್ಗಾಕ್ಕೆ ಭೇಟಿ ನೀಡಿದ ಖಾದರ್ಲಿಂಗ್ ವಂಶಸ್ಥರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು