News Kannada
Monday, September 26 2022

ಕರ್ನಾಟಕ

ಸೆ.26 ರಂದು ಮಡಿಕೇರಿ ಜನೋತ್ಸವದ ‘ಮಕ್ಕಳ ದಸರಾ’ ಸಂಭ್ರಮ: ಮಕ್ಕಳ ಸಂತೆ-ಮಂಟಪ ಸ್ಪರ್ಧೆ ಆಕರ್ಷಣೆ - 1 min read

Photo Credit :

ಸೆ.26 ರಂದು ಮಡಿಕೇರಿ ಜನೋತ್ಸವದ 'ಮಕ್ಕಳ ದಸರಾ' ಸಂಭ್ರಮ: ಮಕ್ಕಳ ಸಂತೆ-ಮಂಟಪ ಸ್ಪರ್ಧೆ ಆಕರ್ಷಣೆ

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ 6ನೇ ವರ್ಷದ ಮಕ್ಕಳ ದಸರಾವನ್ನು ಸೆಪ್ಟೆಂಬರ್ 26 ರಂದು ಆಯೋಜಿಸಲಾಗಿದೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಕಾರದೊಂದಿಗೆ ಈ ಬಾರಿ ಆಯೋಜಿತವಾಗಿರುವ ಮಕ್ಕಳ ದಸರಾ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಸೆ.26 ರಂದು ಬೆಳಗ್ಗೆ 10 ಗಂಟೆಗೆ ಮಕ್ಕಳ ದಸರಾ ಉದ್ಘಾಟನೆಯಾಗಲಿದೆ.

ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಮಂಟಪ ಸ್ಪರ್ಧೆಗಳು ನಡೆಯಲಿದೆ.ಇದರೊಂದಿಗೆ 5 ವರ್ಷದೊಳಗಿನ ಮಕ್ಕಳು, 6 ರಿಂದ 8 ಮತ್ತು 9 ರಿಂದ 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆಗಳು ಆಯೋಜಿತವಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ಮಕ್ಕಳ ದಸರಾದ ವಿವಿಧ ಸ್ಪರ್ಧೆಗೆ ಸೆಪ್ಟೆಂಬರ್ 20 ರೊಳಗಾಗಿ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆ- ನಮಿತಾ ರೈ-9448976405, ಅನಿತಾ ಪೂವಯ್ಯ -(9449982925) (ಛದ್ಮವೇಷ ಸ್ಪರ್ಧೆ), ಲಕ್ಷೀಪ್ರಸಾದ್ ಪೆರ್ಲ- (ಮಕ್ಕಳ ಮಂಟಪ) 9448433366, ಶ್ರೀಧರ ಹೂವಲ್ಲಿ- (ಮಕ್ಕಳ ಸಂತೆ ) 9481773066, ತೆನ್ನಿರ ಮೈನಾ- (ಮಕ್ಕಳ ಸಂತೆ) 9449156215.

ಜಾನಪದ ಕ್ರೀಡಾ ಸ್ಪರ್ಧೆ-ಮಡಿಕೇರಿ ದಸರಾ ಸಂದರ್ಭದ ಮಕ್ಕಳ ದಸರಾದಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ನಿಂದ ಜಾನಪದ ಕ್ರೀಡಾ ಸ್ಪರ್ಧೆಗಳಾದ ಕಲ್ಲಾಟ, ಬಳೆ ಆಟ, ಲಗೋರಿ, ಚನ್ನೆಮಣೆ, ಚೌಕಬಾರ, ಗೋಲಿ ಆಟದ ಸ್ಪರ್ಧೆಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಪ್ರತ್ಯೇಕ ವಿಬಾಗಗಳಲ್ಲಿ ಆಯೋಜಿತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಚಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ ತಿಳಿಸಿದ್ದಾರೆ.

ಜಾನಪದ ಕ್ರೀಡಾ ಸ್ಪರ್ಧೆಗೆ ಹೆಸರು ನೋಂದಾಯಿಸಲು ಸೆಪ್ಟಂಬರ್ 20 ಕೊನೇ ದಿನವಾಗಿದೆ. ಕೊಡಗು ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ಸಂಖ್ಯೆ – ಕೆ.ಜಯಲಕ್ಷ್ಮಿ (ಚೌಕಬಾರ) -9845732271, ಸಿದ್ದರಾಜು ( ಲಗೋರಿ )- 9449405609, ಪ್ರಶಾಂತ್ (ಚೆನ್ನಮಣೆ) 9980060146- ಪಿ.ಆರ್.ರಾಜೇಶ್ (ಕಲ್ಲಾಟ ಮತ್ತು ಗೋಲಿ)- 9448587882, ದಮಯಂತಿ(ಬಳೆ ಆಟ) – 9164569486.

 

 

 

 

See also  ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಡೆಸಲು ನಿರ್ಲಕ್ಷ್ಯ: ಜನರಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು