News Kannada
Thursday, October 06 2022

ಕರ್ನಾಟಕ

ಹಾಲು ತರಲು ಹೋದವ ಮಸಣ ಸೇರಿದ - 1 min read

Photo Credit :

ಹಾಲು ತರಲು ಹೋದವ ಮಸಣ ಸೇರಿದ

ಮಡಿಕೇರಿ; ಬೆಂಗಳೂರಿನಿಂದ ಕಾಸರಗೋಡುವಿಗೆ ಫೇವರ್ಸ್ ಸಾಗಿಸುತ್ತಿದ್ದಾಗ ಅವಘಡಕ್ಕೀಡಾದ ಲಾರಿಯಡಿಗೆ ಸಿಲುಕಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಮಡಿಕೇರಿ-ಮಂಗಳೂರು ರಸ್ತೆಯ ಜೋಡುಪಾಲದಲ್ಲಿ ನಡೆದಿದೆ.

ಜೋಡುಪಾಲದ ನಿವಾಸಿ ಹೇಮರಾಜು (36) ಮೃತ ದುರ್ದೈವಿ . ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಹೇಮರಾಜು ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಹಾಲು ತರಲೆಂದು ತೆರಳಿದ್ದರೆನ್ನಲಾಗಿದ್ದು, ಈ ಸಂದರ್ಭ ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಕಾಸರಗೋಡಿಗೆ ಫೇವರ್ಸ್ ಸಾಗಿಸುತ್ತಿದ್ದ ಲಾರಿ (ಕೆಎ01-ಎಸಿ 6844) ಜೋಡುಪಾಲದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬರುತ್ತಿರುವುದನ್ನು ಹೇಮರಾಜ್ ಗಮನಿಸಿದ್ದಾರೆ. ತಕ್ಷಣ ಅವರು ಪಕ್ಕದ ಬರೆಗೆ ಹತ್ತಲು ಯತ್ನಿಸಿದರಾದರೂ, ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.

ಈ ಸಂದರ್ಭ ಲಾರಿ ಅವರ ಮೇಲೆ ಹರಿದು ಮಗುಚಿಕೊಂಡಿದ್ದು, ಪರಿಣಾಮವಾಗಿ ಹೇಮರಾಜು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಶಂಶೀರ್ ಎಂಬಾತನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಮೃತ ಹೇಮರಾಜು ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ಒತ್ತಾಯದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಜಿಲ್ಲಾಧಿಕಾರಿ ಡಾ.ರಿಚಡರ್್ ವಿನ್ಸೆಂಟ್ ಡಿಸೋಜ ಹಾಗೂ ಡಿವೈಎಸ್ಪಿ ಸುಂದರ್ ರಾಜ್ ಭೇಟಿ ನೀಡಿ ಅಗತ್ಯ ಕ್ರಮದ ಭರವಸೆ ನೀಡಿದರು. 

ರಸ್ತೆ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರು ಇದೇ ಸಂದರ್ಭ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಈ ಸಂದರ್ಭ ಹಾಜರಿದ್ದರು.

See also  ಉ.ಕನ್ನಡ ಜಿಲ್ಲೆಯಲ್ಲಿ ಐದು ಸಾವಿರ ಗಡಿ ದಾಟಿದ ಕೊರೊನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು