News Kannada
Wednesday, October 05 2022

ಕರ್ನಾಟಕ

ಕಡೂರು ಪುರಸಬೆ ಸಭೆ: ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿಲ್ಲ ಸದಸ್ಯರ ಆಕ್ರೋಶ - 1 min read

Photo Credit :

ಕಡೂರು ಪುರಸಬೆ ಸಭೆ: ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿಲ್ಲ ಸದಸ್ಯರ ಆಕ್ರೋಶ

ಕಡೂರು: ಪುರಸಭೆಯ ಬಹುತೇಕ ವಾರ್ಡ್ಗಳಲ್ಲಿ 10-15 ದಿನಗಳಿಗೊಮ್ಮೆ ಕುಡಿಯುವ ನೀರು ನೀಡಲಾಗುತ್ತಿದೆ ಸಮರ್ಪಕವಾಗಿ ನೀರಿನ ನಿರ್ವಹಣೆ ನಡೆಯುತ್ತಿಲ್ಲ. ಇದಕ್ಕೆಲ್ಲ ವಾಟರ್ ಮ್ಯಾನ್ಗಳ ನಿರ್ಲಕ್ಷ್ಯವೇ ಕಾರಣ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪುರಸಭಾ ಅಧ್ಯಕ್ಷ ಎಂ.ಮಾದಪ್ಪನವರ ಅಧ್ಯಕ್ಷತೆಯಲ್ಲಿ ಕನಕ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧ್ಯಕ್ಷರನ್ನು ಪ್ರಶ್ನಿಸಿದರು.

ದಸ್ಯೆ ಜಯಮ್ಮ, ನಾಮಿನಿ ಸದಸ್ಯ ಅಣ್ಣದೊರೆ, ಮೈಲಾರಪ್ಪ ತಮ್ಮ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ವಾಟರ್ ಮ್ಯಾನ್ ನನ್ನು ಸಂಪರ್ಕಿಸಿದರೆ ಮೊಬೈಲ್ ತೆಗೆಯುವುದಿಲ್ಲ. ಇಲ್ಲಿ ಯಾರನ್ನು ಕೇಳಬೇಕೋ ಗೊತ್ತಾಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ನೀಡಿ ಎಂದು ಬೇಡಿಕೆ ಇಟ್ಟರೆ ಟ್ಯಾಂಕರ್ ಮಾಜಿ ಸದಸ್ಯರ ಮನೆಯ ಮುಂದೆ ನಿಂತಿರುತ್ತದೆ ಮಾಜಿ ಹಾಲಿ ಸದಸ್ಯರಿಗೆ ನೀರು ನೀಡುವುದಾದರೆ ಜನ ಸಾಮಾನ್ಯರ ಸಮಸ್ಯೆ ಬಗೆ ಹರಿಯುವುದು ಹೇಗೆ? ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಆಧ್ಯಕ್ಷರು ವಾಟರ್ ಮ್ಯಾನ್ ಗಳನ್ನು ಕರೆಯಿಸಿ ಸಭೆಯಲ್ಲಿಯೇ ಉತ್ತರಿಸಲು ತಿಳಿಸಿದರು.ಕೆಲವರು ಭದ್ರಾ ನೀರೊಂದೆ ಕಡೂರು ಪಟ್ಟಣಕ್ಕೆ ಆಸರೆಯಾಗಿದೆ. ಕೆಲವೊಮ್ಮೆ ಪೈಪ್ ಒಡೆದರೆ ಸಮಸ್ಯೆ ತಲೆದೋರುತ್ತದೆ.ಆದರೂ ವಾರ್ಡಗಳಿಗೆ ನೀರನ್ನು ಸಮರ್ಪಕವಾಗಿ ನೀಡಲಾಗುತ್ತಿದೆ ಕೆಲವೊಮ್ಮೆ 8-10 ದಿನಗಳಾಗಿರಬಹುದೆಂಬ ಹಾರಿಕೆಯ ಉತ್ತರವನ್ನು ನೀಡಿದರು. ಅನೇಕ ವಾರ್ಡ್ ಗಳಲ್ಲಿ ನಲ್ಲಿಗಳಿಗೆ ಟ್ಯಾಪ್ ಗಳಿಲ್ಲ ಅಂತಹ ನಲ್ಲಿಗಳ ಮಾಲೀಕರಿಗೆ ಟ್ಯಾಪ್ ಹಾಕಿಸಿಕೊಳ್ಳಲು ಸೂಚಿಸಲು ತಿಳಿಸಿದರು.ಪಟ್ಟಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಸಮಸ್ಯೆ ಇರುವುದಿಲ್ಲ ಎಂದು ವಾಟರ್ ಮ್ಯಾನ್ ಈಶಣ್ಣ ಸಭೆಯ ಗಮನಕ್ಕೆ ತಂದರು.

ರಾಷ್ಟ್ರೀಯ ಹೆದ್ದಾರಿ 206ನಲ್ಲಿರುವ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಪಕ್ಕದ ಮಳಿಗೆಯ ಮಾಲೀಕರು ಒತ್ತುವರಿ ಮಾಡಿ ಇತರರಿಗೆ ಬಾಡಿಗೆ ನೀಡಿದ್ದಾರೆ ಒತ್ತುವರಿ ಕಟ್ಟಡಗಳನ್ನು ಅಳತೆ ಮಾಡಿಸಿ ಎಂದು ಸದಸ್ಯ ಲಕ್ಷ್ಮಣ್ ಅಧ್ಯಕ್ಷರ ಗಮನಸೆಳೆದರು.ಇದಕ್ಕೆ ಪ್ರತಿಯಾಗಿ ಈರಳ್ಳಿ ರಮೇಶ್ ಲಕ್ಷ್ಮಣ್ ಮಧ್ಯೆ ವಾದ ನಡೆದು ನಂತರ ಸ್ಥಳ ಪರಿಶೀಲನೆ ಮಾಡಿ ಎಂದು ಸದಸ್ಯರು ಒತ್ತಾಯ ಮಾಡಿದರು.ಉತ್ತರಿಸಿದ ಅಧ್ಯಕ್ಷರು ಇದು ಅನೇಕ ವರ್ಷಗಳಿಂದ ಇರುವ ಸಮಸ್ಯೆ ಇದು ಈಗ ಏಕೆ ಎಂದು ಮರು ಪ್ರಶ್ನೆ ಮಾಡಿದರು.

See also  80 ಲಕ್ಷ ರೂಪಾಯಿ ಹವಾಲ ಹಣ ಸಹಿತ ಓರ್ವನ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು