News Kannada
Saturday, October 01 2022

ಕರ್ನಾಟಕ

ದಸರಾ ಸಂಭ್ರಮಕ್ಕೆ ಮಡಿಕೇರಿಯಲ್ಲಿ ಮನಸೂರೆಗೊಳ್ಳುವ ವೈವಿಧ್ಯಮಯ ಕಾರ್ಯಕ್ರಮಗಳು - 1 min read

Photo Credit :

ದಸರಾ ಸಂಭ್ರಮಕ್ಕೆ ಮಡಿಕೇರಿಯಲ್ಲಿ ಮನಸೂರೆಗೊಳ್ಳುವ ವೈವಿಧ್ಯಮಯ ಕಾರ್ಯಕ್ರಮಗಳು

ಮಡಿಕೇರಿ- ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಸೆಪ್ಟಂಬರ್ 22 ರ ಗುರುವಾರದಿಂದ ಸೆ.30 ರವರೆಗೆ ನಗರದ ಗಾಂಧಿ ಮೈದಾನದಲ್ಲಿ ಪ್ರತಿನಿತ್ಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಡಾ.ಶಮಿತಾ ಮಲ್ನಾಡ್…. ಸಂಗೀತಾ ರಾಜೀವ್… ಶ್ರೀಹರ್ಷ… ಮಿಮಿಕ್ರಿ ಗೋಪಿ…ಸೇರಿದಂತೆ ನಾಡಿನ ಜನಪ್ರಿಯ ಕಲಾತಂಡಗಳ ಸಂಗಮ.

ಸೆ.22 ರಂದು ಶುಕ್ರವಾರ ಸಂಜೆ 6.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಕೊಪ್ಪದ ಸತೀಶ್ ಎಂ.ಎಸ್. ಅವರಿಂದ ಸ್ಯಾಕ್ಸೋಫೋನ್ ವಾದನ, ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ವಿದ್ಯಾರ್ಥಿನಿಯರಿಂದ ಕೊಡವ ಸಾಂಸ್ಕೃತಿಕ ವೈವಿಧ್ಯ, ತಮಿಳುನಾಡಿನ ಸೇಲಂ ಅಲ್ಫೋನಾ ತಂಡದಿಂದ ಕೊವೈ ಎಕ್ಸ್ಪ್ರೆಸ್ -ಸೂಪರ್ ಹಿಟ್ ಡಾನ್ಸ್ ಶೋ, ಕುಶಾಲನಗರದ ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ಡಾನ್ಸ್ ಸ್ಪೆಷಲ್, ವಿರಾಜಪೇಟೆಯ ಜಗನ್ ಮೋಹನ ನಾಟ್ಯಾಲಯ ತಂಡದಿಂದ ನೃತ್ಯ ವೈವಿಧ್ಯ, ಚೆಟ್ಟಿಮಾನಿ ಸಾಂದಿಪಿನಿ ನೃತ್ಯಶಾಲಾ ತಂಡದಿಂದ ನೃತ್ಯ, ಮಡಿಕೇರಿಯ ವಿಕಾಸ ಜನಸೇವಾ ಟ್ರಸ್ಟ್ ವತಿಯಿಂದ ಅಂಧರ ತಂಡದಿಂದ ರಸಮಂಜರಿ, ಕುಶಾಲನಗರದ ಕುಂದನ್ ನೃತ್ಯಾಲಯದಿಂದ ಪ್ಯೂಷನ್ ಡಾನ್ಸ್, ಕುಶಾಲನಗರದ ಕಾವೇರಿ ಆರ್ಟ್ಸ್ ಸ್ಕೂಲ್ ತಂಡದಿಂದ ನೃತ್ಯ ವೈವಿಧ್ಯ, ಪ್ರಣವಂ ನಾಟ್ಯಾಲಯದಿಂದ ಜನಪದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ.

ಸೆ.23 ನೇ ಶನಿವಾರ ಹಾಸ್ಯ ಸಂಜೆಯಾಗಿದ್ದು, ಸಂಜೆ 6.30 ಗಂಟೆಗೆ ಭಾಗಮಂಡಲ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್ ತಂಡದಿಂದ ಸಿರಿ ಸುಗ್ಗಿ ನೃತ್ಯರೂಪಕದ ಬಳಿಕ ನಾಡಿನ ಖ್ಯಾತ ಹಾಸ್ಯಕಲಾವಿದ ಕೊಟ್ರೇಶ್ ಕೂಡ್ಲಿಗಿ ಮತ್ತು ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಮತ್ತು ಸ್ಯಾಂಡಲ್ ವುಡ್ ಸ್ಟುಡಿಯೋದಿಂದ ಡಾನ್ಸ್ ಧಮಕ ಕಾರ್ಯಕ್ರಮ ಆಯೋಜಿತವಾಗಿದೆ.

ಸೆ.24 ರಂದು ಭಾನುವಾರ ದಸರಾ ಸಾಂಸ್ಕೃತಿಕ ಸಮಿತಿ ಪ್ರಸ್ತುತಿಯಾಗಿರುವ 5ನೇ ವರ್ಷದ ಮಹಿಳಾ ದಸರಾ ಆಯೋಜಿತವಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಮಹಿಳೆಯರಿಗಾಗಿ ಮಡಿಕೇರಿ ನಗರಸಭಾ ಸದಸ್ಯೆಯರು ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದೊಂದಿಗೆ ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಅಲಂಕಾರ ಮಾಡುವ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ವಾಲಗತಾಟ್, ಗೋಲಿ ಮತ್ತು ಲಗೋರಿ ಸ್ಪರ್ಧೆ, ಹೂವಿನ ಹಾರ ಮಾಡುವ ಸ್ಪರ್ಧೆ, ಜತೆಗೆ ಎರಡನೇ ವರ್ಷದ ಸಿರಿಧಾನ್ಯ ಮೇಳದಲ್ಲಿ ಗ್ರಾಮೀಣ ಖಾದ್ಯಗಳ ವೈವಿಧ್ಯ ಬಿಂಬಿಸುವ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿತವಾಗಿದೆ.

ಮಹಿಳಾ ದಸರಾ ಅಂಗವಾಗಿ ಅಂದು ಸಂಜೆ 6.30 ಗಂಟೆಯಿಂದ ಮಹಿಳೆಯರಿಂದಲೇ ಸಾಂಸ್ಕೃತಿಕ ವೈವಿಧ್ಯ ಆಯೋಜಿಸಲ್ಪಟ್ಟಿದೆ. ರಾಜ್ಯದ ಹೆಸರಾಂತ ಹಿನ್ನಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ತಂಡದಿಂದ ಶಮಾ ಲೈವ್ ಇನ್ ಕನ್ಸರ್ಟ್ ಸಂಗೀತ ರಸಸಂಜೆ ಈ ಬಾರಿಯ ಮಹಿಳಾ ದಸರಾದ ವಿಶೇಷವಾಗಿದೆ. ತಿರುವಾದಿರ ನೃತ್ಯ, ಮಡಿಕೇರಿಯ ಸ್ಪಂದನಾ ಮಹಿಳಾ ಸಂಘದ ತಂಡದಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಧನಶ್ರೀ ಮಹಿಳಾ ಸಂಘದಿಂದ ಸಮೂಹ ನೃತ್ಯ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ನೃತ್ಯ ವೈವಿಧ್ಯ, ಬಂಟರ ಮಹಿಳಾ ಸಂಘದಿಂದ ನೃತ್ಯ ವೈವಿಧ್ಯ ಹಾಗೂ ನೆಲ್ಲಕ್ಕಿ ಯುವತಿ ಮಂಡಳಿಯವರಿಂದ ಜನಪದ ವೈವಿಧ್ಯ ಆಯೋಜಿತವಾಗಿದೆ.

See also  ಬಂಡೀಪುರದಲ್ಲಿ ಪ್ರಿನ್ಸ್ ಹುಲಿಯ ದರ್ಶನ!

ಸೆ. 25 ನೇ ಸೋಮವಾರ ಚೇರಂಬಾಣೆ ನೆಕ್ಸ್ಟ್ ಸ್ಟೆಪ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ತಂಡದಿಂದ ಬಾಲಿವುಡ್ ಹಿಪ್ ಅಪ್, ಸಾಗರದ ಸಿ.ಎನ್. ಮಾಧವ್ ಭಟ್ ಅವರಿಂದ ಶಿಳ್ಳೆವಾದನ ಎಂಬ ವಿಶಿಷ್ಟ ಕಲಾ ಪ್ರದರ್ಶನವಿದ್ದು, ಇದೇ ದಿನ ಜೀ ವಾಹಿನಿಯ ಜನಪ್ರಿಯ ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀಹರ್ಷ, ಸುಪ್ರೀತ್ ಫಲ್ಗುಣ, ಶ್ರೀರಕ್ಷಾ, ಮೈತ್ರಿ ತಂಡದಿಂದ ರಸಮಂಜರಿ ಆಯೋಜಿತವಾಗಿದೆ.

ಸೆ. 26 ರಂದು ಮಂಗಳವಾರ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಭಾಗಿತ್ವದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ 6ನೇ ವರ್ಷದ ಮಕ್ಕಳ ದಸರಾ ಜರುಗಲಿದೆ. ಜಿಲ್ಲೆಯ ಮಕ್ಕಳಿಗಾಗಿ ಮಕ್ಕಳ ಸಂತೆ, ಮಕ್ಕಳ ಮಂಟಪ, ಛದ್ಮವೇಷ, ಕ್ಲೇ ಮಾಡೆಲ್, ಸೈನ್ಸ್ ಮಾಡೆಲಿಂಗ್ ಸ್ಪರ್ಧೆ ಆಯೋಜಿತವಾಗಿದೆ. ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ 2ನೇ ವರ್ಷದ ಜನಪದ ಕ್ರೀಡೋತ್ಸವ ಸ್ಪರ್ಧೆಗಳಲ್ಲಿ ಚನ್ನಮಣೆ, ಕುಂಟೆಬಿಲ್ಲೆ, ಬುಗುರಿ, ಗೋಲಿಯಾಟ, ಕಲ್ಲಾಟ, ಚೌಕಬಾರ್, ಬಳೆಯಾಟ ಸ್ಪರ್ಧೆಗಳು ಆಯೋಜಿತವಾಗಿದೆ.

ಅಂದು ಸಂಜೆ 6.30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪೈಕಿ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಮಕ್ಕಳಿಂದ ವಚನ ನೃತ್ಯ, ಮಡಿಕೇರಿ ಕಿಡ್ಸ್ ಪ್ಯಾರಡೈಸ್ ಚಿಣ್ಣರಿಂದ ನೃತ್ಯ, ಮಡಿಕೇರಿ ಲಿಟ್ಲ್ ಪ್ಲವರ್ ತಂಡದಿಂದ ರಾಮಾಯಣ ನೃತ್ಯರೂಪಕ, ಉಡುಪಿಯ ಹೆಸರಾಂತ ಭಾರ್ಗವಿ ಮತ್ತು ತಂಡದಿಂದ ನೃತ್ಯ ವೈಭವ ಆಯೋಜಿತವಾಗಿದೆ. ಸೆ.27 ರಂದು ಬುಧವಾರ ಸಂಜೆ 6.30 ಗಂಟೆಯಿಂದ ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಸಂಸ್ಥೆ ಪ್ರಸ್ತುತಿಯಾದ ನರಕಾಸುರ ವಧೆ ನೃತ್ಯ ರೂಪಕ ಜರುಗಲಿದ್ದು, ಅನಂತರ ಬಾಲಿವುಡ್ ಖ್ಯಾತಿಯ ಹಿನ್ನಲೆ ಗಾಯಕಿ ಸಂಗೀತ ರಾಜೀವ್ ತಂಡದಿಂದ ಸಂಗೀತ ಸಂಜೆ ಜನಮನ ಸೆಳೆಯಲಿದೆ.

ಸೆ.28 ನೇ ಗುರುವಾರ ಸಂಜೆ 6.30 ರಿಂದ ಯುವದಸರಾ ಜರುಗಲಿದೆ. ಸೆ.29 ರಂದು ಶುಕ್ರವಾರ ಸಂಜೆ 6.30 ಗಂಟೆಗೆ ಆಯುಧ ಪೂಜಾ ಸಮಾರಂಭದ ಅಂಗವಾಗಿ ಮಡಿಕೇರಿಯ ಲೈಟ್-ಕ್ಯಾಮರ-ಡ್ಯಾನ್ಸ್ ಹೌಸ್ ತಂಡದಿಂದ – ಹಿಪ್ ಅಪ್ ಡ್ಯಾನ್ಸ್, ಆಟಿಟ್ಯೂಡ್ ಡ್ಯಾನ್ಸ್ ತಂಡದಿಂದ ಡ್ಯಾನ್ಸ್ ಫೆಸ್ಟ್, ಮಡಿಕೇರಿಯ ಕಲಾಬಳಗ ತಂಡದಿಂದ ವೀರಚರಿತೆ ನೃತ್ಯ ರೂಪಕ, ಗೋವಿಂದ ರಾಜು, ರಜತ್ ರಾಜ್, ವಿನಯ್, ದೇವೇಂದ್ರ ಪತ್ತರ್, ಸುವೇದಿತಾ, ನೀಶ್ಮಾ ಜಗದೀಶ್ ಅವರಿಂದ ವೈವಿಧ್ಯಮಯ ಗೀತೆಗಳ ಪ್ರಸ್ತುತಿಯಿದೆ. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದಿಂದ ನೃತ್ಯ, ಬೆಂಗಳೂರಿನ ‘ಡಿ’ ಕಂಪನಿಯಿಂದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಆಯುಧಪೂಜಾ ವಿಶೇಷವಾಗಿದೆ. ಜತೆಗೆ ಬೆಂಗಳೂರಿನ ಮ್ಯೂಸಿಕಲ್ ಕಲರ್ಸ್ ತಂಡದಿಂದ ರಾಕ್ ಮ್ಯೂಸಿಕ್ ಕೂಡ ಜರುಗಲಿದೆ.

ಸೆ. 30 ರಂದು ಶನಿವಾರ ವಿಜಯದಶಮಿ ಅಂಗವಾಗಿ ಸಂಜೆ 6.30 ಗಂಟೆಗೆ ಮಡಿಕೇರಿಯ ಎ ರಿಫ್ಲೆಕ್ಷನ್ ಡಾನ್ಸ್ ಕ್ರೂ ತಂಡದಿಂದ ಪ್ಯೂಷನ್ ಡ್ಯಾನ್ಸ್, ಮೈಸೂರು ತಾಂಡವಂ ಡ್ಯಾನ್ಸ್ ಟ್ರೂಪ್ ತಂಡದಿಂದ ನೃತ್ಯ ವೈವಿಧ್ಯ, ಕೊಡಗು ಗೌಡ ಯುವ ವೇದಿಕೆ ಪ್ರಸ್ತುತಿಯಾಗಿ ಕೊಡಗ್ಲಿ ತುಲಾ ಸಂಕ್ರಮಣದ ವೈಭವ ನೃತ್ಯ ರೂಪಕ, ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕ ದರ್ಶನದ ಲೇಸರ್ ಶೋ, ಕೊಡಗಿನ ಮೂಲದ ಹೆಸರಾಂತ ಜಾದೂಗಾರ ವಿಕ್ರಮ್ ಜಾದೂಗಾರ್ ತಂಡದಿಂದ ಮ್ಯಾಜಿಕ್ ಶೋ ಪ್ರದಶರ್ಿತಗೊಳ್ಳಲಿದೆ. ಮೈಸೂರು ಜಿಲ್ಲೆಯ ಸನ್ಯಾಸ ಪುರದ ಗಣೇಶ್ ಮತ್ತು ತಂಡದಿಂದ ಕಂಸಾಳೆ ಹಾಗೂ ಡೊಳ್ಳು ಕುಣಿತವೂ ವಿಜಯದಶಮಿ ದಿನದ ಆಕರ್ಷಣೆಯಾಗಿದೆ.

See also  ಎಂಡೋ ಸಂತ್ರಸ್ತರ ಹಕ್ಕುಗಳನ್ನು ಕಸಿದುಕೊಳ್ಳಲು ಸರ್ಕಾರ ಯತ್ನ

ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಅರ್ಜಿಗಳು ಕಲಾವಿದರಿಂದ, ಕಲಾ ತಂಡದಿಂದ ಬಂದಿದ್ದು ದಸರಾ ಸಾಂಸ್ಕೃತಿಕ ಸಮಿತಿ ಸದಸ್ಯರಾದ ಸವಿತಾ ರಾಕೇಶ್, ಲಕ್ಷ್ಮಿ ಪ್ರಸಾದ್ ಪೆರ್ಲ, ಸಂಗೀತಾ ಪ್ರಸನ್ನ, ಶ್ರೀಧರ ಹೂವಲ್ಲಿ, ವೀಣಾಕ್ಷಿ, ತೆನ್ನೀರ ಮೈನಾ, ಲೀಲಾಶೇಷಮ್ಮ ಅವರ ತಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿಗಳಾದ ಚಿನ್ನಸ್ವಾಮಿ, ಮಣಜೂರು ಮಂಜುನಾಥ್ ಮಾರ್ಗದರ್ಶನದಲ್ಲಿ ಕಲಾತಂಡಗಳ ಆಯ್ಕೆ ಮಾಡಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು