News Kannada
Monday, September 26 2022

ಕರ್ನಾಟಕ

ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತರ ಮಕ್ಕಳು ರೈತರಾಗುತ್ತಿಲ್ಲ - 1 min read

Photo Credit :

ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತರ ಮಕ್ಕಳು ರೈತರಾಗುತ್ತಿಲ್ಲ

ಮಂಡ್ಯ: ವೈದ್ಯರ ಮಕ್ಕಳು ವೈದ್ಯರಾಗಲು, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗಲು ಆಸೆಪಡುವಂತೆ ರೈತರ ಮಕ್ಕಳು ರೈತರಾಗುವುದಕ್ಕೆ ಯಾರೂ ಇಚ್ಛಿಸುತ್ತಿಲ್ಲ ಎಂದು ಸ್ವರಾಜ್ ಇಂಡಿಯಾದ ನೇತಾರ ಯೋಗೇಂದ್ರ ಯಾದವ್ ವಿಷಾದ ವ್ಯಕ್ತಪಡಿಸಿದರು.

ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಅಖಿಲ ಭಾರತ ರೈತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ರೈತ ಸಂಕಷ್ಟ ಮುಕ್ತ ಜಾಥಾ ಅಂಗವಾಗಿ ಶುಕ್ರವಾರ ನಡೆದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ರೈತರ ಮಕ್ಕಳನ್ನು ಉಪಯೋಗಕ್ಕೆ ಬಾರದವರನ್ನಾಗಿ ಮಾಡಲಾಗುತ್ತಿದೆ. ಸಂಕಷ್ಟದಲ್ಲೇ ಅವರ ಬದುಕು ಉಳಿಯುವಂತೆ, ಸಾಲದ ಸುಳಿಯಲ್ಲೇ ಕೊನೆಯವರೆಗೂ ಉಳಿಯುವಂತೆ ಮಾಡುತ್ತಿರುವುದು ದೇಶದ ಅನ್ನದಾತರಿಗೆ ಮಾಡುತ್ತಿರುವ ದ್ರೋಹ ಎಂದು ಆರೋಪಿಸಿದರು.

ರಾಷ್ಟ್ರದ 170 ಸಂಘಟನೆಗಳು ಒಗ್ಗಟ್ಟಾಗಿ ರೈತರ ಹಿತ ಕಾಪಾಡಲು ಹೋರಾಟ ನಡೆಸಬೇಕಿದೆ. ನವೆಂಬರ್ 20ರಂದು ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಲಕ್ಷಾಂತರ ರೈತರು ಸಮಾವೇಶಗೊಳ್ಳುವ ಮೂಲಕ ಕೇಂದ್ರದ ವಿರುದ್ಧ ಪರ್ಯಾಯ ಪಾರ್ಲಿಮೆಂಟ್ ಆಗಿ ಪರಿವರ್ತಿಸಲಾಗುವುದು. ರೈತರ ಹಕ್ಕುಗಳನ್ನು ಕಸಿದುಕೊಂಡಿರುವ ಮೋದಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಾಗುವುದು ಎಂದು ಹೇಳಿದರು.

ಅಖಿಲ ಭಾರತ ರೈತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ವಿ.ಎಂ.ಸಿಂಗ್ ಮಾತನಾಡಿ, ಕೇಂದ್ರ ಸರ್ಕಾರ ರೈತರ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಿಲ್ಲ. ಬೆಂಬಲ ಬೆಲೆ ನಿಗದಿಯಲ್ಲೂ ರೈತರನ್ನು ವಂಚಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ಸುಳ್ಳು ಹೇಳಿಕೊಂಡು ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಈಗಲಾದರೂ ಎಲ್ಲರೂ ಒಗ್ಗಟ್ಟಾಗಬೇಕು. ಇಲ್ಲವಾದರೆ ದೇಶದಲ್ಲಿ ರೈತರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತಸಂಘದ ಕೆ.ಟಿ.ಗಂಗಾಧರ್ ವಹಿಸಿದ್ದರು.

See also  ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ವಿವಾದ ಸೃಷ್ಟಿ ವಿಷಾದಕರ: ಬ್ರಾಹ್ಮಣರ ಸಂಘ ಬೇಸರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು