News Kannada
Tuesday, October 04 2022

ಕರ್ನಾಟಕ

ಕಾರವಾರದಲ್ಲಿ ನೆಲಸಮವಾಗಲಿದೆ ಬ್ರಿಟಿಷರು ನಿರ್ಮಿಸಿದ ಕಟ್ಟಡಗಳು - 1 min read

Photo Credit :

ಕಾರವಾರದಲ್ಲಿ ನೆಲಸಮವಾಗಲಿದೆ ಬ್ರಿಟಿಷರು ನಿರ್ಮಿಸಿದ ಕಟ್ಟಡಗಳು

ಕಾರವಾರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರದಲ್ಲಿ ನೂರಾರು ವರ್ಷಗಳ ಹಿಂದಿನ ಐತಿಹಾಸಿಕ ಕಟ್ಟಡಗಳು ಧರೆಗುರುಳಲಿವೆ.

1864ರಲ್ಲಿ ಬ್ರಿಟಿಷರು ತಮ್ಮ ವ್ಯಾಪಾರಕ್ಕಾಗಿ ಕಾರವಾರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ನಗರಕ್ಕೆ ರೂಪವನ್ನು ನೀಡಿದ್ದರು. ನಂತರದ 50 ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ, ಅಂಚೆ ಕಚೇರಿ, ಶಿಕ್ಷಣ ಇಲಾಖೆಗಳ ಕಚೇರಿಗಳನ್ನು ನಿರ್ಮಾಣ ಮಾಡಿದ್ದರು. ಅಂದು ನಿರ್ಮಿಸಿದ ಆ ಕಟ್ಟಡಗಳು ಈಗಲೂ ಬಲಿಷ್ಠವಾಗಿದ್ದು ಇಲಾಖೆ ಕಚೇರಿಗಳು ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಈಗ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಅವುಗಳನ್ನು ಒಡೆಯಲು ಗುರುತು ಹಾಕಲಾಗಿದ್ದು ಕೆಲವೇ ದಿನಗಳಲ್ಲಿ ಕಟ್ಟಡ ಒಡೆಯುವ ಕಾರ್ಯ ಪ್ರಾರಂಭವಾಗಿದೆ

ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿ: ಕಾರವಾರದ ತೋಡೂರಿನಲ್ಲಿ ಅತಿ ಹೆಚ್ಚು ಖಾಸಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು ಮನೆಗಳ ಮೌಲ್ಯಮಾಪನ ಇತ್ತೀಚೆಗಷ್ಟೇ ಆಗಿದೆ. ಚೆಂಡಿಯಾ, ಚಿತ್ತಾಕುಲಾ ಗ್ರಾಮಗಳಲ್ಲಿ ಇನ್ನೂ ಸಾಕಷ್ಟು ಖಾಸಗಿ ಭೂಮಿ ವಶಕ್ಕೆ ಪಡೆಯುವುದು ಬಾಕಿ ಇದೆ. ಅಮದಳ್ಳಿಯಲ್ಲಿ ಬೈಪಾಸ್ ಮೂಲಕ ರಸ್ತೆ ನಿರ್ಮಿಸಲು ಸ್ಥಳೀಯರು ಹಾಗೂ ಶಾಸಕರು ಹೋರಾಟ ನಡೆಸಿದ್ದರಾದರೂ ಒಪ್ಪಿಗೆ ದೊರೆಯದೆ ಸದ್ಯ ಈಗಿರುವ ರಸ್ತೆಯ ಪಕ್ಕದಲ್ಲೇ 45 ಮೀಟರ್ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಕಾಮಗಾರಿಗಳು ಅಂತಿಮ ಹಂತದಲ್ಲಿ: ಕಾರವಾರದ ಬಿಣಗಾದಿಂದ ಕೈಗೊಂಡು ಕಾರವಾರದ ಲಂಡನ್ ಬ್ರಿಜ್ ನವರೆಗೆ ಸುರಂಗದ ಮೂಲಕ ಚತುಷ್ಪಥ ಕಾಮಗಾರಿ ಮಾಡಲು ಯೋಜನೆ ರೂಪಿಸಲಾಗಿದ್ದು ಸುರಂಗ ನಿರ್ಮಾಣ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದೆ. ಇನ್ನು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಬಾಕಿ ಇದೆ ಎಂದು ಐಆರ್ಬಿ ಕಂಪನಿ ಮಾಹಿತಿ ನೀಡಿದೆ.
ಕಾಳಿ ನದಿಗೆ ನಿರ್ಮಿಸಲಾಗುತ್ತಿರುವ ಮತ್ತೊಂದು ಸೇತುವೆ ಕಾರ್ಯ ಕೂಡ ಮುಕ್ತಾಯ ಹಂತದಲ್ಲಿದೆ. ಇನ್ನು ಗುಡ್ಡಗಳನ್ನು ತೆರವು ಮಾಡುವ ಕಾರ್ಯ ಮಾತ್ರ ಬಂಡೆಗಳಿಂದಾಗಿ ಕಷ್ಟಕರವಾಗಿದ್ದು ವಿಳಂಬವಾಗಲಿದೆ ಎನ್ನಲಾಗುತ್ತಿದೆ.

ಭೂಸ್ವಾಧೀನದ ವಿವರ: ತಾಲೂಕಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ 38.35 ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ 3ಡಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಅದರಲ್ಲಿ 4.3 ಹೆಕ್ಟೇರ್ ಸರಕಾರಿ ಭೂಮಿಯಾಗಿದ್ದು ಉಳಿದವು ಖಾಸಗಿ ಭೂಮಿಯಾಗಿದೆ. ಅದರಲ್ಲಿ ಇದುವರೆಗೆ ಒಟ್ಟು 14.61 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ.

ಇನ್ನುಳಿದಂತೆ ಮಾಜಾಳಿಯಲ್ಲಿ 3.57 ಹೆಕ್ಟೇರ್ (0.14 ಹೆ. ಸರಕಾರಿ ಭೂಮಿ), ಚಿತ್ತಾಕುಲಾದಲ್ಲಿ 0.88(0.018), ಕೋಡಿಬಾಗದಲ್ಲಿ 1.24(1.07), ಬಾಡದಲ್ಲಿ ಕಾರವಾರ ನಗರ ಅಂದರೆ ಬಾಡದಲ್ಲಿ 0.70 ಸಂಪೂರ್ಣ ಸರ್ಕಾರಿ ಭೂಮಿ, ಬಿಣಗಾದಲ್ಲಿ 7.61(0.52 ಸರ್ಕಾರಿ ಭೂಮಿ), ಅರಗಾದಲ್ಲಿ 2.41(0.11), ಚೆಂಡಿಯಾದಲ್ಲಿ 7.15(0.01), ತೋಡೂರಿನಲ್ಲಿ 8.50(0.25), ಅಮದಳ್ಳಿಯಲ್ಲಿ 6.23(1.25). ಸ್ವಾಧೀನಕ್ಕೆ ಯೋಜನೆ ರೂಪಿಸಲಾಗಿದೆ. ಖಾಸಗಿ ಭೂಮಿ ಸ್ವಾಧೀನಕ್ಕಾಗಿ ಪರಿಹಾರ ವಿತರಿಸಲು 56 ಕೋಟಿ ರೂ. ಹಣ ಬಿಡುಗಡೆಯಾಗಿದೆ.

See also  ರಾಷ್ಟ್ರಮಟ್ಟಕ್ಕೆ ಕೊಡಗಿನ `ಮದ್ದುಸೊಪ್ಪು' ಪ್ರಬಂಧ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು