News Kannada
Monday, September 26 2022

ಕರ್ನಾಟಕ

ಶ್ವಾಧಾರ್ ಕೇಂದ್ರ ಸೇರಿದ ಮಾನಸಿಕ ಅಸ್ವಸ್ಥ ಗರ್ಭಿಣಿ - 1 min read

Photo Credit :

ಶ್ವಾಧಾರ್ ಕೇಂದ್ರ ಸೇರಿದ ಮಾನಸಿಕ ಅಸ್ವಸ್ಥ ಗರ್ಭಿಣಿ

ಮಾಗಡಿ: ಶಾಲೆಯಲ್ಲಿ ನೀಡುವ ಬಿಸಿಯೂಟ ಸೇರಿದಂತೆ ಅವರಿವರು ನೀಡಿದ ಆಹಾರವನ್ನು ತಿನ್ನುತ್ತಾ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದ ಮಾನಸಿಕ ಅಸ್ವಸ್ಥ ಗರ್ಭಿಣಿಯನ್ನು ರಾಮನಗರದ ಶ್ವಾಧಾರ್ ಎಂಬ ಸಾಂತ್ವಾನ ಕೇಂದ್ರಕ್ಕೆ ಸೇರಿಸಿದ ಘಟನೆ ಸಾತನೂರಲ್ಲಿ ನಡೆದಿದೆ.

ಮಾನಸಿಕ ಅಸ್ವಸ್ಥೆಯಾಗಿದ್ದ ಗರ್ಭಿಣಿಯನ್ನು ವಿಜಯಮ್ಮ ಎಂದು ಗುರತಿಸಲಾಗಿದೆ. ಈಕೆ ಸಾತನೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ವಾಸಿಸುತ್ತಾ ಶಾಲೆಯಲ್ಲಿ ನೀಡುವ ಬಿಸಿಯೂಟ ಹಾಗೂ ಗ್ರಾಮಸ್ಥರಿಂದ ಊಟ ಕೇಳಿ ಪಡೆದು ತಿನ್ನುತ್ತಾ ಕಾಲ ಕಳೆಯುತ್ತಿದ್ದಳು.

ಈಕೆಯ ತವರೂರು ಸಾತನೂರು ಗ್ರಾಮವಾಗಿದ್ದು, ತಂದೆ ಮಾಡಬಾಳ್ ಹೋಬಳಿಯ ಚಲುವಯ್ಯನಪಾಳ್ಯ ಗ್ರಾಮದಲ್ಲಿ ವಾಸವಾಗಿದ್ದರು. ವಿಜಯಮ್ಮಳ ತಾಯಿಗೆ ತವರಿನ ಆಸ್ತಿ ನೀಡಿದ್ದರಿಂದ ವಿಜಯಮ್ಮ ತಾಯಿ ಜತೆ ಸಾತನೂರು ಗ್ರಾಮದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ವಿಜಯಮ್ಮ ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಅವನ ಜೊತೆ ಮನೆಬಿಟ್ಟು ಓಡಿ ಹೋಗಿದ್ದಳು. ಆ ನಂತರ ತನ್ನ ತಂದೆಯ ಮನೆಗೆ ಹಿಂತಿರುಗಿದ್ದಳು. ಅದಾದ ಬಳಿಕ ವಿಜಯಮ್ಮನ ಗಂಡನ ಹತ್ಯೆಯಾಗಿತ್ತು. ಈ ಆರೋಪದ ಮೇರೆಗೆ ಅಪ್ರಾಪ್ತ ವಯಸ್ಕಳಾದ ಆಕೆಯನ್ನು ರಿಮ್ಯಾಂಡ್ ಹೋಂನಲ್ಲಿರಿಸಲಾಗಿತ್ತು.

18 ವರ್ಷ ತುಂಬಿದ ನಂತರ ಬಿಡುಗಡೆಯಾದ ವಿಜಯಮ್ಮಳನ್ನು ಸಾತನೂರು ಗ್ರಾಮದ ವ್ಯಕ್ತಿಯೊಬ್ಬರು ಬೆಂಗಳೂರಿನ ರಾಜಗೋಪಾಲನಗರದ ಗಾರ್ಮೆಟ್ಸ್ಗೆ ಸೇರಿಸಿದ್ದರು. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಮತ್ತೊಂದು ಮದುವೆಯಾದ ವಿಜಯಮ್ಮಳಿಗೆ ಗಂಡು ಹಾಗೂ ಹೆಣ್ಣು ಮಗುವಾಗಿತ್ತು. ಆಗಾಗ ತನ್ನ ತಾಯಿಯ ತವರೂರಾದ ಸಾತನೂರಿಗೆ ಆಕೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ಮಾನಸಿಕವಾಗಿ ಅಸ್ವಸ್ಥಳಾಗಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಬಂದ ಗರ್ಭಿಣಿ ವಿಜಯಮ್ಮನಿಗೆ ಮನೆಗಳಲ್ಲಿ ಯಾರೂ ಆಶ್ರಯ ನೀಡದ ಕಾರಣ ಸರಕಾರಿ ಶಾಲೆಯ ಅವರಣದಲ್ಲಿ ವಾಸ ಮಾಡುತ್ತಿದ್ದಳು. ಶಾಲೆಯಲ್ಲಿ ತಯಾರಿಸುವ ಬಿಸಿಯೂಟ ಹಾಗೂ ಗ್ರಾಮದ ಮನೆಗಳಲ್ಲಿ ಆಹಾರವನ್ನು ಪಡೆದು ಸೇವಿಸುತ್ತ ಕಾಲ ಕಳೆಯುತ್ತಿದ್ದಳು.

ಈಕೆಯ ಪರಿಸ್ಥಿತಿಯನ್ನು ಗಮನಿಸಿದ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸುರೇಂದ್ರ ಅವರು ಇದೀಗ ರಾಮನಗರದಲ್ಲಿರುವ ಶ್ವಾಧಾರ್ ಕೇಂದ್ರಕ್ಕೆ ದಾಖಲಿಸಿದ್ದಾರೆ

See also  ಬಸ್ ಅಪಘಾತ: ಚಾಲಕ ಸಾವು, 23ಕ್ಕೂ ಅಧಿಕ ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು