News Kannada
Friday, September 30 2022

ಕರ್ನಾಟಕ

ನಕಲಿ ಹಣ ನೀಡಿ ವಂಚಿಸಲು ಯತ್ನಿಸಿದವ ಪೊಲೀಸರ ಬಲೆಗೆ - 1 min read

Photo Credit :

ನಕಲಿ ಹಣ ನೀಡಿ ವಂಚಿಸಲು ಯತ್ನಿಸಿದವ ಪೊಲೀಸರ ಬಲೆಗೆ

ಕಾಸರಗೋಡು: 500 ರೂ. ಮುಖ ಬೆಳೆಯ ಬೆಲೆಯ ನಾಲ್ಕು ನಕಲಿ ನೋಟುಗಳ ಸಹಿತ ಪೆರ್ಲ ನಿವಾಸಿ ಯಾಗಿರುವ ಟ್ಯಾಕ್ಸಿ ಚಾಲಕ ನೋರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪೆರ್ಲ ಸೇರಾಜೆ ಯ ಕಮಲಾಕ್ಷ ಪೂಜಾರಿ(44) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಉಳಿಯತ್ತಡ್ಕದ ಪೆಟ್ರೋಲ್ ಪಂಪ್ ನಲ್ಲಿ ಎರಡು ಸಾವಿರ ರೂ . ನ ಪೆಟ್ರೋಲ್ ತುಂಬಿಸಿದ್ದು , ಬಳಿಕ  500.ರೂ. ಗಳ 4 ನೋಟುಗಳನ್ನು ನೀಡಿದ್ದಾನೆ. ನೋಟುಗಳನ್ನು ಕಂಡು ಅನುಮಾನಗೊಂಡ ಪಂಪ್ ಮಾಲಕ ಖಾದರ್ ಕೂಡಲೇ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ನೋಟುಗಳನ್ನು ಪರಿಶೀಲಿಸಿ ಕಮಲಾಕ್ಷಗಳನ್ನು ವಶಕ್ಕೆ ತೆಗೆದುಕೊಂಡರು. ನೋಟುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ಸಾಬೀತುಗೊಂಡಿದೆ.

ಈ ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರ ಬೇರೆಯೇ ಸಹಿ ಇತ್ತು.ಅಲ್ಲದೆ ನೋಟಿನ ಆಕಾರವೂ ವ್ಯತ್ಯಾಸವಾಗಿತ್ತು. ಇದನ್ನು ಗಮನಿಸಿದ ಪಂಪ್ ಮಾಲಕ ನಿಗೆ ಸಂಶಯ ಉಂಟಾಯಿತು. ವಿದ್ಯಾನಗರ ಪೊಲೀಸರು ಆರೋಪಿಯ ಪೆರ್ಲ ಸೇರಾಜೆಯಲ್ಲಿರುವ ಮನೆಗೆ ದಾಳಿ ನಡೆಸಿ ದ್ದು , ದಾಳಿಯಿಂದ ಬೇರೆ ನಕಲಿ ನೋಟುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನೋಟುಗಳು ಮಟ್ಕಾ ಕೇಂದ್ರದಿಂದ ಲಭಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

See also  ಆಕಸ್ಮಿಕವಾಗಿ ವಾಷಿಂಗ್ ಮೆಷಿನ್ ನೊಳಗೆ ಬಿದ್ದ ಮಗು: ಅಪಾಯದಿಂದ ಪಾರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು