News Kannada
Sunday, September 25 2022

ಕರ್ನಾಟಕ

ಹುಣಸೂರಲ್ಲಿ ನಕಲಿ ಚಿನ್ನ ತೋರಿಸಿ ವಂಚಿಸುತ್ತಿದ್ದರ ಬಂಧನ - 1 min read

Photo Credit :

ಹುಣಸೂರಲ್ಲಿ ನಕಲಿ ಚಿನ್ನ ತೋರಿಸಿ ವಂಚಿಸುತ್ತಿದ್ದರ ಬಂಧನ

ಹುಣಸೂರು: ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ ಮೂವರು ವಂಚಕರ ತಂಡವನ್ನು ಹುಣಸೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓರ್ವ ತಲೆಮರೆಸಿಕೊಂಡಿದ್ದಾನೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರದ ಬಳಿಯ ತುಪ್ಪದಮಡು ಗ್ರಾಮದ ಶಶಿಕುಮಾರ್(25), ಕೆಆರ್ಎಸ್ನ ಗೋಮಯ(28), ಹುಣಸೂರು ತಾಲೂಕಿನ 2ನೇ ಪಕ್ಷಿರಾಜಪುರದ ಬೋಟಿ ಉಮೇಶ ಮತ್ತು ಮಹಿಳೆ ಪುಟಾಯಿ ಬಂಧಿತ ಆರೋಪಿಗಳು.

ಮಂಡ್ಯದ ಶಶಿಕುಮಾರ್ ಈ ತಂಡದ ಮುಖ್ಯಸ್ಥನಾಗಿದ್ದು, ಈತನ ಸಾರಥ್ಯದಲ್ಲಿ ವಂಚನೆಗೆ ಸ್ಕೆಚ್ ತಯಾರಾಗುತ್ತಿತ್ತು ಎನ್ನಲಾಗಿದೆ. ಇವನು ಕೊಡಗಿನ ವಿರಾಜಪೇಟೆ ತಾಲೂಕಿನ ಎಮ್ಮೆಮಾಡು ನಿವಾಸಿ ಆಲಿರವರಿಗೆ ಕರೆಮಾಡಿ ತಮ್ಮ ಜಮೀನಿನಲ್ಲಿ ಜೆಸಿಬಿ ಮೂಲಕ ಹೊಂಡ ತೆಗೆಯುವಾಗ ಸುಮಾರು 3 ಕೆ.ಜಿಯಷ್ಟು ಹಳೆಯ ಚಿನ್ನ ಸಿಕ್ಕಿದ್ದು, ಒಂದು ಕೋಟಿ ರೂ ಬೆಲೆ ಬಾಳುತ್ತದೆ ಕಡಿಮೆ ಬೆಲೆಗೆ ನೀಡುತ್ತೇವೆಂದು ತಿಳಿಸಿದ್ದರು.

ಅದರಂತೆ ಅಲಿ ತನ್ನ ಸ್ನೇಹಿತ ನಾಪೋಕ್ಲು ಬಳಿಯ ಚೋಣಕೆರೆ ನಿವಾಸಿ ಮೂಸಾರ ಪುತ್ರ ಮಜೀದ್ರಿಗೆ ವಿಷಯ ತಿಳಿಸಿ ಮತ್ತಿಬ್ಬರು ಸ್ನೇಹಿತರನ್ನು ಕರೆದುಕೊಂಡು ನಗರದ ಬಸ್ ನಿಲ್ದಾಣದ ಬಳಿ ಬಂದು ಶಶಿಕುಮಾರ್ ಗೆ ಕರೆ ಮಾಡಿದ್ದಾನೆ. ಈ ವೇಳೆ ಭೇಟಿ ಮಾಡಿದ ಶಶಿಕುಮಾರ್ ನಗರದ ಹೊರವಲಯದ ಎಪಿಎಂಸಿ ಬಳಿಯ ಜಮೀನಿನಲ್ಲಿ ಮೊದಲೇ ಹುದುಗಿಸಿಟ್ಟಿದ್ದ ನಕಲಿ ಚಿನ್ನವನ್ನು ತೋರಿಸಿದ್ದಾರೆ.

ವ್ಯಾಪಾರದಲ್ಲಿ ಚೌಕಾಸಿ ಮಾಡಿ ಕೊನೆಗೆ 10 ಲಕ್ಷ ರೂ ಕೊಟ್ಟರೆ ಚಿನ್ನ ನೀಡುವುದಾಗಿ ಶಶಿಕುಮಾರ್ ತಿಳಿಸಿದಾಗ ಚಿನ್ನವನ್ನು ಪರೀಕ್ಷೆ ಮಾಡಿಸಬೇಕೆಂದು ಮಜೀದ್ ತಿಳಿದ್ದಾನೆ. ಈ ವೇಳೆ ಮುಂಗಡವಾಗಿ ಒಂದು ಸಾವಿರ ನೀಡಿ ಒಂದು ತುಂಡು ಚಿನ್ನವನ್ನು ಪಡೆದುಕೊಂಡ ಆಲಿ ಮತ್ತು ಸ್ನೇಹಿತರು ಅದನ್ನು ಪಟ್ಟಣದಲ್ಲಿ ಪರೀಕ್ಷಿಸಿದಾಗ ನಕಲಿ ಚಿನ್ನವೆಂಬುದು ಗೊತ್ತಾಗಿದೆ. ತಕ್ಷಣ ಅವರು ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಎಸ್ಐ ಷಣ್ಮುಗಂ ಮತ್ತು ತಂಡ ಎಪಿಎಂಸಿ ಬಳಿಗೆ ತೆರಳಿದಾಗ ಅದಾಗಲೇ ಐವರು ಹುಣಸೂರು ನಗರದ ಕಡೆಗೆ ನಡೆದು ಬರುತ್ತಿರುವುದು ಕಾಣಿಸಿದೆ ತಕ್ಷಣ ಅವರನ್ನು ಹಿಡಿಯಲೆತ್ನಿಸಿದ ವೇಳೆ ಪಕ್ಷಿರಾಜಪುರದ ನಿಶಾನ್ ಎಂಬಾತ ಪರಾರಿಯಾಗಿದ್ದಾನೆ. ಉಳಿದ ನಾಲ್ವರನ್ನು ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇವರು ಈಗಾಗಲೇ ಅನೇಕ ಕಡೆ ಇಂತಹ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ವೃತ್ತ ನಿರೀಕ್ಷಕ ಕೆ.ಎಸ್.ಪೂವಯ್ಯ ತಿಳಿಸಿದ್ದಾರೆ.

ಅಮಾಯಕರನ್ನು ಬಲೆಗೆ ಬೀಳಿಸಿಕೊಳ್ಳಲು ಹೊರ ರಾಜ್ಯದವರಂತೆ ತೆಲುಗಿನಲ್ಲಿ ಮಾತನಾಡುತ್ತಿದ್ದರಲ್ಲದೆ, ನಯವಾಗಿ ಮಾತನಾಡುತ್ತಾ ವ್ಯವಹಾರ ಕುದುರಿಸಿ, ನಕಲಿ ಚಿನ್ನ ನೀಡಿ ಹಣಪಡೆದು ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

See also  ರಾಜ್ಯ ಸರ್ಕಾರದಿಂದ ಕೊಡಗು ಸಂತ್ರಸ್ತರ ಕಡೆಗಣನೆ : ಕುಮಾರಸ್ವಾಮಿ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು