News Kannada
Monday, October 03 2022

ಕರ್ನಾಟಕ

ವಿಶ್ವವಿಖ್ಯಾತಿಯ ತೀಳ್ ಮಾತಿ ಕಡಲತೀರದಲ್ಲಿ ಚಮಕ್ ಚಿತ್ರದ ತಂಡ - 1 min read

Photo Credit :

ವಿಶ್ವವಿಖ್ಯಾತಿಯ ತೀಳ್ ಮಾತಿ ಕಡಲತೀರದಲ್ಲಿ ಚಮಕ್ ಚಿತ್ರದ ತಂಡ

ಕಾರವಾರ: ಸಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಿರಿಕ್ ಪಾರ್ಟಿ ಖ್ಯಾತಿಯ ನಾಯಕಿ ರಶ್ಮಿಕಾ ಅಭಿನಯದ ಚಮಕ್ ಚಲನಚಿತ್ರದ ಚಿತ್ರೀಕರಣ ಶನಿವಾರ ಜಿಲ್ಲೆಯ ಮಾಜಾಳಿಯ ಮಾಜಾಳಿ ತೀಳ್ ಮಾತಿ(ಕಪ್ಪುಮರಳು)ಕಡಲ ತೀರದಲ್ಲಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹಿರೇಗುತ್ತಿ, ಮುರುಡೇಶ್ವರದ ನೇತ್ರಾಣಿ ದ್ವೀಪ, ಕಾರವಾರ ಕಡಲತೀರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಚಿತ್ರ ಚಮಕ್ ಚಿತ್ರದ ಕೊನೆಯ ಹಂತದ ಶೂಟಿಂಗ್ ನಡೆಸುವಲ್ಲಿ ಚಲನ ಚಿತ್ರದ ನಟ ನಟಿ, ನಿರ್ದೇಶಕರು ಹಾಗೂ ಚಿತ್ರ ತಂಡ ಬ್ಯೂಸಿಯಾಗಿತ್ತು.

ಹಿರೇಗುತ್ತಿಯಲ್ಲಿ ದೋಣಿ ಮೇಲೆ ಗಣೇಶ್ ಹಾಗೂ ರಶ್ಮಿಕಾ ನದಿ ದಾಟುವ ಹಾಡಿಗೆ ಹಾಗೂ ಮಾಜಾಳಿಯ ಪ್ರಖ್ಯಾತ ಕಪ್ಪು ಮಣ್ಣಿನ ಕಡಲತೀರದಲ್ಲಿ ಚಿತ್ರದ ಹಾಡೊಂದನ್ನು ಡ್ರೋಣ್ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಲಾಯಿತು. ಬಳಿಕ ಮುರುಡೇಶ್ವರದ ನೇತ್ರಾಣಿ ದ್ವೀಪದ ಹಾಗೂ ಗಣೇಶ ಸ್ಕೂಬಾ ಡೈವಿಂಗ್‌ನಲ್ಲಿ ಭಾಗವಸಿರುವುದನ್ನು ಕೂಡ ಚಿತ್ರೀಕರಿಸಲಾಗಿದೆ. ಅಲ್ಲದೆ ಉತ್ತರ ಕನ್ನಡದ ಪ್ರಕೃತಿ ಸೌಂದರ್ಯಕ್ಕೆ ಮನಸೋತ ನಟ-ನಟಿಯರು ಚಿತ್ರೀಕರಣದ ಬಳಿಕ ಸಾಕಷ್ಟು ಎಂಜಾಯ್ ಮಾಡಿದ್ದರು. ವಿಶ್ವವಿಖ್ಯಾತ ಕಾರವಾರ ತಾಲೂಕಿನ ತೀಳ್ ಮಾತಿ(ಕಪ್ಪು ಮರಳು) ಕಡಲ ತೀರವನ್ನು ಕಂಡು ವಿಸ್ಮತಗೊಂಡ ಚಿತ್ರ ತಂಡ ಸಾಕಷ್ಟು ವೇಳೆ ಶೂಟಿಂಗ್ ಮಾಡಿದರು.

ಶೂಟಿಂಗ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ ಹಾಗೂ ನಾಯಕಿ ರಶ್ಮಿಕಾ ತೀಳ್ ಮಾತಿ ಕಡಲ ತೀರದಲ್ಲಿ ಕೆಲ ಹೊತ್ತು ಸುತ್ತಾಡಿ ಸುಸ್ತಾದ ಮೇಲೆ ಗೋವಾ ಮೂಲಕ ಬೆಂಗಳೂರಿಗೆ ತೆರಳಿದರು.

See also  ಪ್ರಧಾನಿಗೆ ಮೊರೆ ಹೋಗಲು ಆದಿವಾಸಿಗಳ ನಿರ್ಧಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು