News Kannada
Saturday, October 08 2022

ಕರ್ನಾಟಕ

ಸೂಕ್ಷ್ಮ ಪರಿಸರ ತಾಣ ಸಮಸ್ಯೆಯು ನನ್ನ ಹೆಗಲ ಮೇಲಿದೆ: ಪ್ರತಾಪ್ ಸಿಂಹ - 1 min read

Photo Credit :

ಸೂಕ್ಷ್ಮ ಪರಿಸರ ತಾಣ ಸಮಸ್ಯೆಯು ನನ್ನ ಹೆಗಲ ಮೇಲಿದೆ: ಪ್ರತಾಪ್ ಸಿಂಹ

ಸೋಮವಾರಪೇಟೆ: ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಸೂಕ್ಷ್ಮ ಪರಿಸರ ತಾಣದ ಸಮಸ್ಯೆಯನ್ನು ನನ್ನ ಹೆಗಲಿನಲ್ಲೇ ಉಳಿಸಿಕೊಂಡು ಬಗೆಹರಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಈ ಸಣ್ಣ ಸಮಸ್ಯೆಯನ್ನು ಕೆಲ ರಾಜಕಾರಣಿಗಳು ಭೂತದಂತೆ ಬಿಂಬಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂಷಿಸಿದರು. ಕೊಡಗು ಜಿಲ್ಲೆ ಚಿಕ್ಕದಾದರೂ, ರಾಜಕೀಯದ ವಿಷಯದಲ್ಲಿ ಬಹುದೊಡ್ಡ ಜಿಲ್ಲೆಯಾಗಿದೆ. ಸೂಕ್ಷ್ಮ ಪರಿಸರ ತಾಣದ ಸಮಸ್ಯೆಯನ್ನು ನನ್ನ ಹೆಗಲಿಗೆ ಹಾಕಿಕೊಂಡಿದ್ದೇನೆ. ಇದನ್ನು ಇಳಿಸುವ ಪ್ರಶ್ನೆಯೇ ಇಲ್ಲ. ನಾನು ಸಂಸದನಾಗಿ ಮೂರು ವರ್ಷ ಕಳೆದಿದೆ. ಸೂಕ್ಷ್ಮ ಪರಿಸರ ವಲಯ ಘೋಷಣೆಯಿಂದ ಯಾರಿಗಾದರೂ ಸಮಸ್ಯೆಯಾಗಿದೆಯೇ ಎಂದು ಪ್ರಶ್ನಿಸಿದರು. ಜಿಲ್ಲೆಯ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಕಸ್ತೂರಿ ರಂಗನ್ ವರದಿ ಅನುಷ್ಟಾನದಿಂದ ಕಲ್ಲು ಹಾಗು ಮರಳು ಗಣಿಗಾರಿಕೆ ಮಾಡುವಂತಿಲ್ಲ. ದೊಡ್ಡ ಮಟ್ಟದ ಜಲವಿದ್ಯುತ್ ಯೋಜನೆ ನಿಷೇಧವಿರುತ್ತದೆ. ಉಳಿದಂತೆ ಕೃಷಿಕರಿಗೆ ದೊಡ್ಡಮಟ್ಟದ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಕರ್ನಾಟಕದ ಕಾಫಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಹೀಗಿರುವಾಗ ಉತ್ಕೃಷ್ಟ ದರ್ಜೆಯ ಕಾಫಿ ತಯಾರಾಗಬೇಕು. ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್ ವಾಣಿಜ್ಯ ಸಚಿವರಾಗಿದ್ದ ಸಂದರ್ಭ ಭಾರತೀಯ ಸೇನೆಯಲ್ಲಿ ಕಾಫಿಯ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಯಾವುದೇ ಸರ್ಕಾರವೂ ಅಧಿಕಾರಕ್ಕೆ ಬಂದರೂ ಮಲೆನಾಡು ಭಾಗವನ್ನು ಪ್ರತಿನಿಧಿಸುವವರೇ ಅರಣ್ಯ ಸಚಿವರಾದರೆ ಮಾತ್ರ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಆಶಿಸಿದರು.

See also  ಸಿದ್ಧಗಂಗಾ ಶ್ರೀಗಳು ಬೇಗ ಗುಣಮುಖರಾಗಲು ವಿಶೇಷ ಪೂಜೆ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು