News Kannada
Sunday, September 25 2022

ಕರ್ನಾಟಕ

ಹಾಸನದಲ್ಲಿ ಮೂವರು ಬೈಕ್ ಕಳ್ಳರ ಬಂಧನ - 1 min read

Photo Credit :

ಹಾಸನದಲ್ಲಿ ಮೂವರು ಬೈಕ್ ಕಳ್ಳರ ಬಂಧನ

ಹಾಸನ: ಸಮಯ ಸಾಧಿಸಿ ಬೈಕ್, ಸ್ಕೂಟರ್ ಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರು ಕಳ್ಳರನ್ನು ಹಾಸನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಲ್ಲಬಾಯಿ ರಸ್ತೆ ಸುಹೀಲ್ ಪಾಷ (32), ಮೈಲಹಳ್ಳಿ ಗ್ರಾಮದ ದಯಾನಂದ್ (19) ಹಾಗೂ ವಿಶ್ವನಾಥ ನಗರದ ಪಾಪಣ್ಣ (29) ಬಂಧಿತ ಬೈಕ್ ಕಳ್ಳರಾಗಿದ್ದಾರೆ. ಬಂಧಿತರಿಂದ 5 ಲಕ್ಷ 25 ಸಾವಿರದ 800 ರೂ ಬೆಲೆ ಬಾಳುವ 11 ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದ ಬೈಕ್ ಕಳ್ಳತನ, ಹಗಲು ಮನೆಕಳ್ಳತನ ಹೀಗೆ ವಿವಿಧ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಪಿ ರಾಹುಲ್ ಕುಮಾರ್ ಸೂಚನೆ ಮೇರೆಗೆ ಅಪರ ಪೊಲೀಸ್ ಅಧೀಕ್ಷಕ ವಿ.ಎಂ. ಜ್ಯೋತಿ ಮಾರ್ಗದರ್ಶನದಲ್ಲಿ ಹಾಸನ ಉಪ ವಿಭಾಗ ಡಿವೈಎಸ್ಪಿ ಶಶಿಧರ ನೇತೃತ್ವದಲ್ಲಿ ವೈ. ಸತ್ಯನಾರಾಯಣ್, ಸಬ್ ಇನ್ಸ್ ಪೆಕ್ಟರ್ ಆರೋಕಿಯಪ್ಪ, ಹರೀಶ್, ಸುರೇಶ್ ಮತ್ತು ಸಿಬ್ಬಂದಿ ಮಲ್ಲಿಕಾರ್ಜುನ್, ಗಣೇಶ್, ಪುಟ್ಟಸ್ವಾಮಿ, ಜಮೀಲ್, ಪ್ರಸನ್ನ, ಗಿರೀಶ್, ಪ್ರದೀಪ್, ರಘು, ಸೋಮಶೇಖರ್, ಪ್ರವೀಣ್, ಮಂಜುನಾಥನ್ ಅವರನ್ನೊಳಗೊಂಡ ತಂಡ ರಚಿಸಿ ಬೈಕ್ ಕಳ್ಳರಿಗಾಗಿ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ನಡುವೆ ನಗರದಲ್ಲಿ ಅನುಮಾನಸ್ಪದವಾಗಿ ಮೋಟರ್ ಬೈಕಿನಲ್ಲಿ ಓಡಾಡುತ್ತಿದ್ದ ಸುಹೀಲ್ ಪಾಷ, ದಯಾನಂದ್, ಪಾಪಣ್ಣ ಎಂಬುವರನ್ನು ತಡೆದು ವಿಚಾರಿಸಿದಾಗ ಅವರ ಚಲನವಲನಗಳು ಸಂಶಯ ಹುಟ್ಟಿಸಿತ್ತು. ಹೀಗಾಗಿ ಅವರನ್ನು ವಶಕ್ಕೆ ಪೆದು ವಿಚಾರಣೆಗೊಳಪಡಿಸಿದಾಗ ಒಟ್ಟು 12 ವಿವಿಧ ಕಂಪನಿಯ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಮತ್ತು 5 ಹಗಲು ಮನೆ ಮತ್ತು ಅಂಗಡಿ ಕಳವು ಪತ್ತೆಯಾಗಿದೆ.

ಬಂಧಿತರು ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4, ಹಳೆಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

ಅಲ್ಲದೆ ಅವರು ನೀಡಿದ ಸುಳಿವಿನ ಮೇರೆಗೆ 3 ಲಕ್ಷದ 16 ಸಾವಿರ ರೂ.ಗಳ ದ್ವಿಚಕ್ರ ವಾಹನ ಹಾಗೂ 2 ಲಕ್ಷದ 12 ಸಾವಿರದ 800 ರೂ ಮೌಲ್ಯದ 76 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಕಳ್ಳತನದಲ್ಲಿ ಇನ್ನು 46 ಬೈಕ್ ಗಳನ್ನು ಪತ್ತೆ ಮಾಡಬೇಕಾಗಿದೆ. ವಾಹನದ ದಾಖಲಾತಿ ಕೊಡುವುದಾಗಿ ಹೇಳಿ ಮೊದಲು ಕಡಿಮೆ ದರಕ್ಕೆ ಬೈಕನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ. ಸದ್ಯ ಹಾಸನದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ.

See also  ಹೊದ್ದೂರು ಗ್ರಾಮದಲ್ಲಿ ಸ್ಮಶಾನ ಜಾಗದ ವಿವಾದ: ಎ.ಮುನಿಯಪ್ಪ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು